ರೈಲಿಗೆ ಸಿಲುಕಿ ಅಪರಿಚಿತ ವ್ಯಕ್ತಿಯೋರ್ವ ಸಾವನ್ನಪ್ಪಿರುವ ಘಟನೆ ತೊಂಡೇಭಾವಿ ಸಮೀಪದ ಕಮಲಾಪುರದಲ್ಲಿ ನಡೆದಿದೆ.
ಯಶವಂತಪುರ ರೈಲ್ವೆ ಪೋಲಿಸ್ ಠಾಣೆ ಯು.ಡಿ ಆರ್.ನಂ. 44/2024 ಕಲಂ 174 Cr.P.C ರೀತ್ಯಾ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ.
ಮೃತ ವ್ಯಕ್ತಿಗೆ ಸುಮಾರು 70ವರ್ಷ ಆಗಿರಬಹುದು ಎಂದು ಅಂದಾಜಿಸಲಾಗಿದ್ದು, ಹೆಸರು, ವಿಳಾಸ ತಿಳಿದುಬಂದಿರುವುದಿಲ್ಲ.
ಚಹರೆ- 5′ ಅಡಿ ಎತ್ತರ, ಎಣ್ಣೆಗೆಂಪು ಬಣ್ಣ ದುಂಡನೆಯ ಮುಖ, ಗಿಡ್ಡನೆಯ ಮೂಗು, ಅಗಲವಾದ ಹಣೆ, ತಲೆಯಲ್ಲಿ ಸುಮಾರು 1ಇಂಚು ಉದ್ದದ ಕಪ್ಪು ಬಿಳಿ ಮಿಶ್ರಿತ ತಲೆ ಕೂದಲು ಇದ್ದು, ಸಾಧಾರಣ ಮೈಕಟ್ಟು,ಹೊಂದಿರುತ್ತಾರೆ.
ಬಟ್ಟೆಗಳು- ಕಪ್ಪು ಕಲರ್ ಲಾಡಿ ನಿಕ್ಕರ್, ಕೆಂಪು-ಬಿಳಿ ಮಿಶ್ರಿತ ಶರ್ಟ್, ಬಿಳಿ ಕಲರ್ ಒಳ ಬನಿಯನ್ ಧರಿಸುತ್ತಾರೆ.
ವಾರಸುದಾರರು ಯಾರಾದರು ಕಂಡುಬಂದಲ್ಲಿ ರೈಲ್ವೆ PSI 9480802118/ ದೊಡ್ಡಬಳ್ಳಾಪುರ ರೈಲ್ವೆ ಪೊಲೀಸ್ 9108630967 ಸಂಪರ್ಕಿಸಲು ಕೋರಿದೆ.