ರೈಲಿಗೆ ಸಿಲುಕಿ ಅಪರಿಚಿತ ವ್ಯಕ್ತಿ ಸಾವು

ತೊಂಡೇಭಾವಿ ಮತ್ತು ಗೌರಿಬಿದನೂರು ರೈಲು ನಿಲ್ದಾಣದ  ಮಧ್ಯೆ ಗೌರಿಬಿದನೂರಿನ ಶುಗರ್ ಫ್ಯಾಕ್ಟರಿ ಹತ್ತಿರ ರೈಲ್ವೆ ಹಳಿಯಲ್ಲಿ ಅಪರಿಚಿತ ವ್ಯಕ್ತಿ ರೈಲಿಗೆ ಸಿಕ್ಕಿ ಮೃತಪಟ್ಟಿದ್ದು,  ಯಶವಂತಪುರ ರೈಲ್ವೆ ಪೊಲೀಸ್ ಠಾಣೆ UDR.ನಂ. 21/2025 ಕಲಂ 194 BNSS ರೀತ್ಯಾ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ.

ಮೃತನ ಹೆಸರು ವಿಳಾಸ ತಿಳಿದು ಬಂದಿರುವುದಿಲ್ಲ. ಸುಮಾರು 45 ವರ್ಷ ಆಗಿರಬಹುದು ಎಂದು ಅಂದಾಜಿಸಲಾಗಿದೆ.

*ಚಹರೆ* – 5.5 ಅಡಿ ಎತ್ತರ, ಕಪ್ಪನೆಯ ಮೈ ಬಣ್ಣ, ಕೋಲು ಮುಖ, ತಲೆಯಲ್ಲಿ ಸುಮಾರು 2 ಇಂಚು ಉದ್ದದ ಕಪ್ಪು-ಬಿಳಿ ಮಿಶ್ರಿತ ತಲೆ ಕೂದಲು ಮತ್ತು ಗಡ್ಡ ಮೀಸೆ ಇದೆ. ಸಾಧಾರಣವಾದ ನೀಳಕಾಯ ಮೈಕಟ್ಟು,ಹೊಂದಿರುತ್ತಾರೆ.

*ಬಟ್ಟೆಗಳು* – ಗಾಡ ಕಂದು ಬಣ್ಣದ ಪ್ಯಾಂಟ್, ಬಿಳಿ ಬಣ್ಣದ ತುಂಬು ತೋಳಿನ ಶರ್ಟ್ ಇರುತ್ತದೆ.

ವಾರಸುದಾರರು ಯಾರಾದರು ಕಂಡುಬಂದಲ್ಲಿ ರೈಲ್ವೆ PSI 9480802118/ ದೊಡ್ಡಬಳ್ಳಾಪುರ ರೈಲ್ವೆ ಪೊಲೀಸ್  9480802143,  9902193960 ಸಂಪರ್ಕಿಸಲು ಕೋರಲಾಗಿದೆ.

Leave a Reply

Your email address will not be published. Required fields are marked *

error: Content is protected !!