ಸುಮಾರು 30ವರ್ಷದ ಅಪರಿಚಿತ ವ್ಯಕ್ತಿ ರೈಲಿಗೆ ಸಿಲುಕಿ ಸಾವನ್ನಪ್ಪಿರುವ ಘಟನೆ ನಗರದ ಹೊರವಲಯದಲ್ಲಿರುವ ಬಾಶೆಟ್ಟಿಹಳ್ಳಿ ಬಳಿ ಬುಧವಾರ ರಾತ್ರಿ ಸುಮಾರು 10ಗಂಟೆ ಸಮಯದಲ್ಲಿ ನಡೆದಿದೆ.
ಸ್ಥಳಕ್ಕೆ ರೈಲ್ವೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸದ್ಯ ಮೃತನ ಹೆಸರು ವಿಳಾಸ ತಿಳಿದು ಬಂದಿರುವುದಿಲ್ಲ. ಮೃತನ ಚಹರೆ ಹೀಗಿದೆ- 5 ಅಡಿ ಎತ್ತರ, ಕೆಂಪು ಬಣ್ಣ ಸಾಧಾರಣ ಮೈಕಟ್ಟು, ಬಟ್ಟೆಗಳು- ಬಿಳಿ ಕಪ್ಪು ಗೆರೆಯುಳ್ಳ ಶರ್ಟ್, ನೀಲಿ ಕಲರ್ ಜೀನ್ಸ್ ಪ್ಯಾಂಟ್ ಧರಿಸುತ್ತಾನೆ. ಕೈಯಲ್ಲಿ S.P ಪ್ರಮೋದ್ ಮತ್ತು ಜೇನಕಲ್ಲು ಎಂದು ಹಚ್ಚೆ ಗುರುತು ಇರುತ್ತದೆ. ವಾರಸುದಾರರು ಯಾರಾದರು ಕಂಡು ಬಂದಲ್ಲಿ ರೈಲ್ವೆ PSI 9480802118, ದೊಡ್ಡಬಳ್ಳಾಪುರ ರೈಲ್ವೆ ಪೊಲೀಸ್ 9480802143 ನಂಬರ್ ನ್ನು ಸಂಪರ್ಕಿಸಲು ಕೋರಲಾಗಿದೆ.