ರೈಲಿಗೆ ಸಿಲುಕಿ ಸುಮಾರು 60 ವೃದ್ಧ ಸಾವನ್ನಪ್ಪಿರುವ ಘಟನೆ ದೊಡ್ಡಬಳ್ಳಾಪುರ-ವಡ್ಡರಹಳ್ಳಿ ರೈಲು ನಿಲ್ದಾಣಗಳ ನಡುವಿನ ನಂದಿ ಮೋರಿ ಬಳಿ ಸಂಭವಿಸಿದೆ.
ಸುಮಾರು 60 ವರ್ಷ ವಯಸ್ಸಿನ ಮೃತರು, ಎತ್ತರ ಸುಮಾರು ಎಣ್ಣೆ ಗೆಂಪು ಮೈಬಣ್ಣ, ಬಿಳಿಯ ತಲೆಕೂದಲು ಬಿಟ್ಟಿದ್ದು, ಸಾಧಾರಣ ಶರೀರ ಹೊಂದಿದ್ದಾರೆ. ಕಪ್ಪು ಬಣ್ಣದ ಬೆಲ್ಟ್ ನಿಕ್ಕರ್, ಬಿಸ್ಕತ್ ಬಿಳಿ ಬಣ್ಣದ ಶರ್ಟ್ ಧರಿಸಿದ್ದು, ಸ್ಥಳದಲ್ಲಿ ಒಂದು ಹಸಿರು-ಕೆಂಪು ಮಿಶ್ರಿತ ಟವೆಲ್ ದೊರೆತಿದೆ.
ಮೃತರ ವಾರಸುದಾರರು ಇದ್ದಲ್ಲಿ ಬೆಂಗಳೂರು ಗ್ರಾಮಾಂತರ ರೈಲ್ವೆ ಪೊಲೀಸ್ / ದೊಡ್ಡಬಳ್ಳಾಪುರ ರೈಲ್ವೆ ಪೊಲೀಸರನ್ನು Ph:9480802118 9480802143 ಸಂಪರ್ಕಿಸುವಂತೆ ರೈಲ್ವೇ ಪೊಲೀಸರು ಮನವಿ ಮಾಡಿದ್ದಾರೆ.