ರೈಲಿಗೆ ಸಿಲುಕಿ ಅಪರಿಚಿತ ಮಹಿಳೆ ಸಾವನ್ನಪ್ಪಿರುವ ಘಟನೆ ನಿನ್ನೆ ರಾತ್ರಿ ನಗರದ ಹೊರವಲಯದಲ್ಲಿರುವ ಬಿರ್ಲಾ ಸೂಪರ್ ಸಿಮೆಂಟ್ ಫ್ಯಾಕ್ಟರಿ ಸಮೀಪ ನಡೆದಿದೆ.
ಮೃತಳ ವಯಸ್ಸು ಸುಮಾರು 50 ವರ್ಷ ಆಗಿದ್ದು, ಹೆಸರು, ವಿಳಾಸ ತಿಳಿದು ಬಂದಿರುವುದಿಲ್ಲ. ಚಹರೆ:- 5 ಅಡಿ ಎತ್ತರ, ಎಣ್ಣೆಗೆಂಪು ಬಣ್ಣ, ದುಂಡನೆಯ ಮುಖ, ಗಿಡ್ಡನೆಯ ಮೂಗು, ಅಗಲವಾದ ಹಣೆ, ತಲೆಯಲ್ಲಿ ಸುಮಾರು 2 ಅಡಿ ಉದ್ದದ ಕಪ್ಪು ಬಿಳಿ ಮಿಶ್ರಿತ ತಲೆ ಕೂದಲು ಇದ್ದು, ಸಾಧಾರಣ ಮೈಕಟ್ಟು ಹೊಂದಿರುತ್ತಾರೆ.
ಬಟ್ಟೆಗಳು- ಕಾಫಿ ಕಲರ್ ಜಾಕೆಟ್, ಕೆಂಪು-ಬಿಳಿ ಮಿಶ್ರಿತ ಸೀರೆ ಧರಿಸುತ್ತಾರೆ. ವಾರಸುದಾರರು ಯಾರಾದರು ಕಂಡುಬಂದಲ್ಲಿ ರೈಲ್ವೆ PSI 9480802118, ದೊಡ್ಡಬಳ್ಳಾಪುರ ರೈಲ್ವೆ ಪೊಲೀಸ್ 9108630967, ಸಂಪರ್ಕಿಸಲು ಕೋರಲಾಗಿದೆ.
ಮಾಹಿತಿ ತಿಳಿದ ದೊಡ್ಡಬಳ್ಳಾಪುರ ರೈಲ್ವೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.