
ಕೋಲಾರ: ಕರ್ನಾಟಕ ಪ್ರಾಂತ ರೈತ ಸಂಘ(ಕೆ.ಪಿ.ಆರ್.ಎಸ್) ರಾಜ್ಯ ಅಧ್ಯಕ್ಷ ಹಾಗೂ ಸಿಪಿಐಎಂ ಪಕ್ಷದ ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯ ಜಿ.ಸಿ ಬಯ್ಯಾರೆಡ್ಡಿ ನಿಧನದ ಹಿನ್ನಲೆಯಲ್ಲಿ ಶನಿವಾರ ನಗರದ ಮೆಕ್ಕೆ ವೃತ್ತದಲ್ಲಿ ಸಿಪಿಐಎಂ ಪಕ್ಷ ಹಾಗೂ ಪ್ರಗತಿಪರ ಸಂಘಟನೆಗಳಿಂದ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಹಿರಿಯ ಕಾರ್ಮಿಕ ಮುಖಂಡ ಗಾಂಧಿನಗರ ನಾರಾಯಣಸ್ವಾಮಿ ಮಾತನಾಡಿ ಜಿ.ಸಿ ಬಯ್ಯಾರೆಡ್ಡಿ ಅವರು ವಿದ್ಯಾರ್ಥಿ ದೆಸೆಯಿಂದ ಹೋರಾಟದ ಕಣಕ್ಕೆ ಧುಮುಕಿದ್ದು ವಿದ್ಯಾರ್ಥಿ ಚಳುವಳಿಯನ್ನು ರಾಜ್ಯವ್ಯಾಪಿಯಾಗಿ ಮುನ್ನಡೆಸಿದ್ದಾರೆ. ಇದೇ ಸಂದರ್ಭದಲ್ಲಿ ಮಾರ್ಕ್ಸವಾದಕ್ಕೆ ಆಕರ್ಷಿತರಾಗಿ, ಸಿಪಿಐಎಂ ಪಕ್ಷದ ಕಾರ್ಯಕರ್ತರಾಗಿ ಮತ್ತು ನಾಯಕರಾಗಿ ತಮ್ಮ ಇಡೀ ಜೀವನವನ್ನು ಸಮಾಜದಲ್ಲಿನ ಬಡವರಿಗೆ ರೈತರಿಗೆ ಮುಡಿಪಾಗಿಟ್ಟಿದ್ದರು. ನಿಸ್ವಾರ್ಥಿ, ಮುತ್ಸದ್ಧಿ ಸಂಗಾತಿಯ ಅಗಲಿಕೆ ರಾಜ್ಯದ ರೈತ ಚಳುವಳಿಗೆ ಶೋಷಿತ ಸಮುದಾಯಕ್ಕೆ ಮತ್ತು ಮುಖ್ಯವಾಗಿ ಸಿಪಿಐಎಂ ಪಕ್ಷಕ್ಕೆ ಬಹುದೊಡ್ಡ ನಷ್ಟವಾಗಿದೆ ಎಂದರು
ಕೋಲಾರ ಜಿಲ್ಲೆಯ ಸಮಗ್ರ ಅಭಿವೃದ್ಧಿ ಮತ್ತು ಸಮಗ್ರತೆಗಾಗಿ ನಿರಂತರವಾಗಿ ದುಡಿದಿದ್ದಾರೆ ರೈತ ಚಳುವಳಿಯ ಜೊತೆಗೆ ಹೈನುಗಾರಿಕೆ, ಕೋಳಿ ಸಾಕಾಣಿಕೆ ಸಂಘಗಳ ಮೂಲಕ ಅರಿವು ಪೋತ್ಸಾಹ ನೀಡಿದ್ದರು ರೈತರಿಗಾಗಿ ಮಾಡಿರುವ ಸೇವೆ ಅಪಾರವಾದದ್ದು. ರೈತರ ಪರ ನಡೆದ ಅನೇಕ ಹೋರಾಟಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವ ಮೂಲಕ ನಡೆಸಿದ್ದ ಅವರ ಹೋರಾಟಗಳು ನಮಗೆಲ್ಲಾ ಆದರ್ಶವಾಗಿವೆ ಅವರ ನಿಧನ ಜಿಲ್ಲೆಗೆ ಹಾಗೂ ರಾಜ್ಯಕ್ಕೆ ತುಂಬಲಾರದ ನಷ್ಟವಾಗಿದೆ ಎಂದರು
ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಪ್ರಧಾನ ಕಾರ್ಯದರ್ಶಿ ಅಬ್ಬಣಿ ಶಿವಪ್ಪ, ಕೆ.ಪಿ.ಆರ್.ಎಸ್ ಜಿಲ್ಲಾಧ್ಯಕ್ಷ ಟಿ.ಎಂ ವೆಂಕಟೇಶ್, ಜೆಎಂಎಸ್ ವಿ.ಗೀತಾ, ಮಾಜಿ ತಾಪಂ ಅಧ್ಯಕ್ಷ ಸಿ.ಆರ್ ಯುವರಾಜ್, ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವೆಂಕಟಪತಿಯಪ್ಪ, ಮುಖಂಡ ಎಂ.ವಿ ನಾರಾಯಣಸ್ವಾಮಿ ಅಗಲಿದ ಬಯ್ಯಾರೆಡ್ಡಿ ಕುರಿತು ಮಾತನಾಡಿದರು.
ಈ ಸಂದರ್ಭದಲ್ಲಿ ಮುಖಂಡರಾದ ಹೆಚ್.ಬಿ ಕೃಷ್ಣಪ್ಪ, ಎನ್.ಎನ್ ಶ್ರೀರಾಮ್, ನಂದೀಶ್, ವಿಜಯಕೃಷ್ಣ, ಆಟೋ ಮಂಜುನಾಥ್, ಆಶಾ, ಪಿ.ವಿ ರಮಣ್, ಕೃಷ್ಣೇಗೌಡ, ನಾರಾಯಣರೆಡ್ಡಿ, ಮಂಜುಳಾ, ಭೀಮರಾಜ್, ಮುಸ್ತಫಾ, ಆಲಹಳ್ಳಿ ವೆಂಕಟೇಶ್, ಲೋಕೇಶ್ವರಿ, ಆರೋಗ್ಯನಾಥನ್, ಮುರಳಿಕೃಷ್ಣ, ಮುಂತಾದವರು ಇದ್ದರು.