
ನೀರಾವರಿ, ಬೆಳೆಪರಿಹಾರ, ಹಾಲಿನ ಪ್ರೋತ್ಸಾಹ ಧನ ವಿಚಾರವಾಗಿ ಜಿಲ್ಲಾಧಿಕಾರಿ ಕಚೇರಿ ಎದುರು ರೈತರ ಸಮ್ಮುಖದಲ್ಲಿ ಭಾರತೀಯ ಜನತಾ ಪಾರ್ಟಿ ಬೃಹತ್ ಹೋರಾಟ ಮಾಡುತ್ತೇವೆ ಎಂದು ಶಾಸಕ ಧೀರಜ್ ಮುನಿರಾಜು ಹೇಳಿದರು.
ದೊಡ್ಡಬೆಳವಂಗಲ, ಸಾಸಲು ಹೋಬಳಿಯಲ್ಲಿ ಕಸದ ಸಮಸ್ಯೆ ಮಿತಿಮೀರಿ ಹೋಗಿದೆ. ಮುಂದಿನ ದಿನಗಳಲ್ಲಿ ಈ ವಿಚಾರವಾಗಿ ರೈತರ ನೇತೃತ್ವದಲ್ಲಿ ಕಾನೂನು ಹೋರಾಟ ಮಾಡುತ್ತೇವೆ. ಕಳೆದ ಸದನದಲ್ಲಿ ನಾನು ಸಚಿವ ಡಾ.ಜಿ. ಲಪರಮೇಶ್ವರ್ ಬಳಿ ಮನವಿ ಮಾಡಿದ್ದೇನೆ. ಎಂ. ಎಸ್.ಜಿ.ಪಿ ಕಸ ವಿಲೇವಾರಿ ಘಟಕ 2014ರಿಂದ ಕೆಲಸ ಮಾಡ್ತಿದೆ. ಅದರ ಒಂದು ಕಿಲೋಮೀಟರ್ ದೂರದಲ್ಲಿ ಎತ್ತಿನ ಹೊಳೆ ಡ್ಯಾಮ್ ಕಟ್ಟುತ್ತಿದ್ದಾರೆ. ಆ ಡ್ಯಾಮ್ ನೀರಿಗೆ ಕೊಳಚೆ ನೀರು ಸೇರುತ್ತೆ. ಇದರಿಂದ ಅನಾರೋಗ್ಯ ಸಮಸ್ಯೆ ಹೆಚ್ಚಾಗುತ್ತೆ ಎಂದು ಹೇಳಿದ್ದೇನೆ. ಆದರೂ ಅವರು ಮಾಡೇ ಮಾಡ್ತೀನಿ ಅಂತ ಹೊರಟಿದ್ದಾರೆ ಎಂದು ಆಕ್ರೋಶ ಹೊರ ಹಾಕಿದ್ರು.
ಇನ್ನೂ ಕೆಐಎಡಿಬಿ ಭೂ ಸ್ವಾಧೀನ ಕುರಿತು ಮಾತನಾಡಿದ ಅವರು, ಫಾಕ್ಸ್ ಕಾನ್, ಕ್ವೀನ್ ಸಿಟಿ ಅಂತ ಸಾವಿರಾರು ಎಕರೆ ಜಮೀನು ಸ್ವಾಧೀನ ಪಡಿಸಿಕೊಳ್ಳಿತ್ತಿದ್ದಾರೆ. ಹುಲಿಕುಂಟೆ ಬಳಿ ಕ್ವೀನ್ ಸಿಟಿಗಾಗಿ 5000 ಎಕರೆ ಜಮೀನನ್ನ ಸ್ವಾಧೀನ ಪಡಿಸಿಕೊಂಡಿದ್ದಾರೆ. ದೊಡ್ಡಬಳ್ಳಾಪುರದಲ್ಲಿ ಮೂರು ಮೂರುವರೆ ಸಾವಿರ ಎಕರೆ ಹಾಗೂ ನೆಲಮಂಗಲದಲ್ಲಿ ಒಂದು ಒಂದೂವರೆ ಸಾವಿರ ಎಕರೆ ಜಮೀನು ಸ್ವಾಧೀನ. ಅಲ್ಲಿ ಯಾವುದೇ ರೀತಿಯ ಪ್ಲಾನಿಂಗ್ ಇಲ್ಲದೆ ಕೆಐಎಡಿಬಿ ಭೂ ಸ್ವಾಧೀನ ಪಡಿಸಿಕೊಂಡಿದೆ. ಕೆಐಎಡಿಬಿ ವಿರುದ್ಧವಾಗಿ ಪ್ರತಿ ಸದನದಲ್ಲಿ ಪ್ರಶ್ನೆ ಮಾಡುತ್ತಾ ಬಂದಿದ್ದೇನೆ. ಖಂಡಿತವಾಗಿ ಇದು ಕಡೆ ಅವಕಾಶ ನೀಡ್ತೀದ್ದೇವೆ. ಇನ್ನ ನಮ್ಮ ತಾಲೂಕಿನಲ್ಲಿ ಒಂದು ಇಂಚು ಭೂ ಸ್ವಾಧೀನ ಮಾಡಲು ಬಿಡಲ್ಲ. ಯಾವ ನಮಗೆ ಫ್ಯಾಕ್ಟರಿ ಅವಶ್ಯಕತೆ ಇಲ್ಲ. ನಮ್ಮ ಜನಕ್ಕೆ ಇಷ್ಟೇ ಕೆಲಸಗಳು ಸಾಕು. ಇನ್ನ ಹೆಚ್ಚಿನ ಕಾರ್ಖಾನೆಗಳು ಬೇಡ, ಭೂ ಸ್ವಾಧೀನ ಪಡಿಸಿಕೊಳ್ಳೋದೂ ಬೇಡ. ಸದನದಲ್ಲಿ ಎದ್ದು ನಿಂತು ಹೇಳಿದ್ದೆ. ಸರ್ ದಯವಿಟ್ಟು ಇನ್ಮುಂದಕ್ಕೆ ನಮಗೆ ಯಾವ ಕೈಗಾರಿಕೆಗಳು ಬೇಡ ಅಂತಾ. ಮುಂದೆ ಹೋಗಿ ಸಿರಾ ಕಡೆ ಹೋಗಿ, ಮಾಲೂರು ಕಡೆ ಹೋಗಿ ಬರಡು ಭೂಮಿ ಇರುವ ಕಡೆ ಹೋಗ್ರಿ. ಫಲವತ್ತಾದ ಭೂ ಸ್ವಾಧೀನ ಪಡಿಸಿಕೊಂಡು ರೈತರ ಜೀವನ ಹಾಳು ಮಾಡಬೇಡಿ ಎಂದು ಕೆಐಎಡಿಬಿಗೆ ಈ ಮೊದಲೇ ಆಗ್ರಹ ಮಾಡಿದ್ದೇನೆ. ಈ ಬಾರಿ ಸದನದ್ಲಲೂ ತಿಳಿಸುವಂತ ಕೆಲಸ ಮಾಡ್ತೀನಿ ಎಂದರು.