ರೈತರ ಬೆಳೆಗೆ ಬೆಲೆ‌ ನಿಗದಿಪಡಿಸಿ ಕೃಷಿ ಕ್ಷೇತ್ರಕ್ಕೆ ಹೆಚ್ಚಿನ ಆದ್ಯತೆ ನೀಡಿ: ಆದಿಚುಂಚನಗಿರಿ ಶಾಖಾ ಮಠದ ಶ್ರೀ ಮಂಗಳಾನಂದನಾಥ ಸ್ವಾಮೀಜಿ

ರೈತರ ಬೆಳೆಗೆ ಸೂಕ್ತ ಬೆಲೆ ದೊರೆತರೆ ಮಾತ್ರ ಅವರ ಆರ್ಥಿಕ ಸ್ಥಿತಿ ಉತ್ತಮವಾಗಲು ಸಾಧ್ಯ, ಆ ನಿಟ್ಟಿನಲ್ಲಿ ಸರ್ಕಾರಗಳು ಯೋಜನೆಗಳನ್ನು ಕಾರ್ಯರೂಪಕ್ಕೆ ತರಲು ಮುಂದಾಗಬೇಕಾಗಿದೆ ಎಂದು ಆದಿಚುಂಚನಗಿರಿ ಶಾಖಾ ಮಠದ ಶ್ರೀ ಮಂಗಳಾನಂದನಾಥ ಸ್ವಾಮೀಜಿ ಅಭಿಪ್ರಾಯಪಟ್ಟರು.

ನಗರದ ಕೆ.ಎಂ.ಹೆಚ್ ಕನ್ವೆನ್ಷನ್‌ ಹಾಲ್ ನಲ್ಲಿ ಭಾರತೀಯ‌ ಕಿಸಾನ್ ಸಂಘ ಜಿಲ್ಲಾ ಹಾಗೂ ತಾಲ್ಲೂಕು ಘಟಕದಿಂದ ಆಯೋಜಿಸಿದ್ದ ದಕ್ಷಿಣಾ ಪ್ರಾಂತ ಅಭ್ಯಾಸ ವರ್ಗದ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ‌ಅವರು ಮಾತನಾಡಿದರು.

ಭಾರತ ದೇಶದಲ್ಲಿ ರೈತರಿಗೆ ಸಮರ್ಪಕವಾಗಿ ವ್ಯವಸಾಯ ಮಾಡುವಲ್ಲಿ ಸರ್ಕಾರ ಅನೇಕ ಕಾನೂನು ಜಾರಿಗೆ ತಂದರೂ ಅದರ ಅನುಷ್ಠಾನದಲ್ಲಿ ರೈತರಿಗೆ ಅನ್ಯಾಯವಾಗಿದೆ.

ಮಳೆ ಅಭಾವ, ಕೃಷಿ ಕೂಲಿಕಾರರ ಸಮಸ್ಯೆಯಿಂದ ರೈತರು ಆಹಾರ ಧಾನ್ಯ ಬೆಳೆಯುವುದನ್ನೇ ಇತ್ತೀಚೆಗೆ ನಿಲ್ಲಿಸಿದ್ದಾರೆ. ವಾಣಿಜ್ಯ ಬೆಳೆ ಹಾಗೂ ತರಕಾರಿಗೆ ಹೆಚ್ಚು ಒಲವು ತೋರುತ್ತಿದ್ದಾರೆ. ಅರಣ್ಯ ನಾಶವು ಕೃಷಿಯ ಮೊದಲ ಋಣಾತ್ಮಕ ಪರಿಣಾಮವಾಗಿದೆ. ಆಧುನಿಕ ಬದುಕಿನಲ್ಲಿ ಬೇಸಾಯದ ಕಡೆ ಗಮನ‌ ನೀಡಬೇಕಾಗಿದೆ. ಕೃಷಿ ಬದುಕು ನಮ್ಮದಾಗಬೇಕು ಎಂದರು.

ನಂತರ ಪ್ರಾಂತ ಕಾರ್ಯದರ್ಶಿ ರಮೇಶ್ ರಾಜ್ ಮಾತನಾಡಿ, ಭಾರತ ದೇಶದಲ್ಲಿ ಕಳೆದ 40 ವರ್ಷಗಳಿಂದ ಕಿಸಾನ್ ಸಂಘ ರೈತರ ಪರವಾಗಿ ಕೆಲಸ ಮಾಡುತ್ತಿದೆ. ಗ್ರಾಮ ಮಟ್ಟದಲ್ಲಿ‌ ಸಮಿತಿ ರಚನೆ ಮಾಡಿ ಸ್ಥಳೀಯ ಸಮಸ್ಯೆಗಳನ್ನು ಗುರುತಿಸಿ ಅವುಗಳಿಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಸಂಘಟನಾತ್ಮಕ ಕೆಲಸ ಮಾಡುತ್ತಿದೆ. ಬಹುತೇಕ ರೈತರ ಸಮಸ್ಯೆಯನ್ನು ಇಲಾಖೆಯ ಅಧಿಕಾರಿಗಳು ಸರಿಯಾಗಿದೆ ಸ್ಪಂದಿಸಿದ ಕಾರಣ ನಮ್ಮ‌ ಸಮಿತಿಯು ರೈತರ ಪೂರಕವಾಗಿ ಕೆಲಸ ಮಾಡುತ್ತಿದೆ ಎಂದರು.

ಕಾರ್ಯಕ್ರಮದಲ್ಲಿ ಪ್ರಾಂತ ಸಂಘಟನಾ ಕಾರ್ಯದರ್ಶಿ ನಾರಾಯಣಸ್ವಾಮಿ, ಪ್ರಾಂತ ಉಪಾಧ್ಯಕ್ಷ ಸೋಮಶೇಖರ್, ಗ್ರಾಮಾಂತರ ಜಿಲ್ಲಾ ಅಧ್ಯಕ್ಷ ನಾಗರಾಜ್, ತಾಲೂಕು ಅಧ್ಯಕ್ಷ ಪ್ರದೀಪ್ ಕುಮಾರ್.ಆರ್, ಸುಜಾತ, ಅಖಲ ಭಾರತ ಕಾರ್ಯದರ್ಶಿ ವೀಣಾ ಸತೀಶ್, ಪ್ರಾಂತ ಮಹಿಳಾ ಪ್ರಮುಖ್ ದೇವಕಿಪ್ರಬಾಸ್, ಅಖಲಿ ಭಾರತ ಬೀಜ ಪ್ರಮುಖ್ ಕೃಷ್ಣ ಮುರಾರಿ ತಾಲೂಕು ಪದಾಧಿಕಾರಿಗಳಾದ ಚಂದ್ರಣ್ಣ, ಕನಕರಾಜು, ಗಂಗಾಧರಪ್ಪ, ಹರಿಕುಮಾರ್, ಲತಾ ಇದ್ದರು.

Leave a Reply

Your email address will not be published. Required fields are marked *