ರೈತರ ಜಮೀನಿಗೆ ಅರಣ್ಯ ಇಲಾಖೆ ಅಕ್ರಮ ಪ್ರವೇಶ: ಎಸ್ಐಟಿ ನಿಯಮಗಳ ಉಲ್ಲಂಘನೆ ವಿರುದ್ದ ಕ್ರಮಕ್ಕೆ ಒತ್ತಾಯ

ಕೋಲಾರ: ಜಿಲ್ಲೆಯಲ್ಲಿ ಅರಣ್ಯ ಒತ್ತುವರಿ ತನಿಖೆಗೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್‌ನ ಆದೇಶದ ಪ್ರಕಾರ ಎಸ್.ಐ.ಟಿ. ರಚನೆಯಾಗಿದ್ದು ಅರಣ್ಯ ಇಲಾಖೆಯ ವತಿಯಿಂದ ನಿಯಮಗಳು ಉಲ್ಲಂಘನೆಯಾಗಿದ್ದು ಕೂಡಲೇ ಸಂಬಂಧಿಸಿದ ಅರಣ್ಯ ಅಧಿಕಾರಗಳ ವಿರುದ್ದ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ರೈತರು ಹಾಗೂ ರೈತ ಸಂಘದ ಮುಖಂಡರು ನಗರದ ಜಿಪಂ ಕಛೇರಿ ಮುಂದೆ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿ ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಎಐಕೆಎಸ್ ರಾಜ್ಯ ಮುಖಂಡ ಗೋಪಾಲ್ ಮಾತನಾಡಿ ಸುಪ್ರೀಂಕೋರ್ಟ್‌ನ ಆದೇಶದ ಪ್ರಕಾರ ಎಸ್.ಐ.ಟಿ. ರಚನೆಯಾಗಿದ್ದು, ಕೋಲಾರ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಎಸ್.ಐ.ಟಿ. ನಿಯಮಾವಳಿ ಪ್ರಕಾರ ಅರಣ್ಯ ಜಮೀನು, ರೈತರ ಜಮೀನು, ಕಂದಾಯ ಇಲಾಖೆ ಜಮೀನು, ಇತರೆ ಜಮೀನುಗಳನ್ನು ತನಿಖೆ ಮಾಡಿ ರಾಜ್ಯ ಮಟ್ಟದ ಎಸ್.ಐ.ಟಿ. ಗೆ ವರದಿ ಮಾಡಲು ಸುಪ್ರೀಂಕೋರ್ಟ್‌ನ ಆದೇಶ ಆಗಿದ್ದು ಜಿಲ್ಲಾಧಿಕಾರಿಗಳ ತಂಡ ಪರಿಶೀಲನೆ ಮಾಡುವುದಕ್ಕೂ ಮೊದಲೇ ದೌರ್ಜನ್ಯದಿಂದ ರೈತರ ಜಮೀನುಗಳಿಗೆ ಬೌಂಡರಿಗಳು ಹಾಕುವುದು, ಬೆಳೆ ನಾಶ ಮಾಡುವುದು ಸುಪ್ರೀಂಕೋರ್ಟ್‌ನ ಆದೇಶದ ಪ್ರಕಾರ ಅರಣ್ಯ ಇಲಾಖೆಯ ಮೇಲೆ ಕಾನೂನು ರೀತಿಯ ಕ್ರಮ ಜರುಗಿಸಬೇಕೆಂದು ಒತ್ತಾಯ ಮಾಡಿದರು

ಈ ಸಂದರ್ಭದಲ್ಲಿ ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾ ಅಧ್ಯಕ್ಷ ಟಿ.ಎಂ ವೆಂಕಟೇಶ್ ಮಾತನಾಡಿ ರೈತರನ್ನು ಕಳ್ಳರ ರೀತಿಯಲ್ಲಿ ನೋಡುವ ಅರಣ್ಯ ಇಲಾಖೆಯ ಅಧಿಕಾರಿಗಳು ರೈತರು ಬೆಳೆದ ಬೆಳೆಗಳನ್ನು ಸಂಪೂರ್ಣವಾಗಿ ನಾಶ ಮಾಡಿದ್ದಾರೆ ಸಾಲ ಮಾಡಿ ಕಟಾವಿಗೆ ಬಂದ ಬೆಳೆಗಳನ್ನು ನಾಶ ಮಾಡಲು ಅವರಿಗೆ ಯಾವ ಅಧಿಕಾರವಿದೆ ತಕ್ಷಣದಿಂದಲೇ ಅರಣ್ಯ ಇಲಾಖೆಯ ದೌರ್ಜನ್ಯವನ್ನು ಎಸ್.ಐ.ಟಿ. ತನಿಖೆ ಆಗುವವರೆಗೂ ನಿಲ್ಲಿಸಬೇಕು ಯಾವುದೇ ಕಾರಣಕ್ಕೂ ಇತ್ಯರ್ಥವಾಗುವ ತನಕ ರೈತರಿಗೆ ತೊಂದರೆ ಕೊಡಬಾರದು ಎಂದು ಒತ್ತಾಯ ಮಾಡಿದರು

ಈ ಸಂದರ್ಭದಲ್ಲಿ ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪಾತಕೋಟೆ ನವೀನ್ ಕುಮಾರ್, ರೈತರಾದ ಶಿಳ್ಳೆಂಗೆರೆ ಶ್ರೀನಿವಾಸ್, ಗಂಗಮ್ಮ, ಜಿ.ಮಂಜುಳ, ಬಿ.ಎ.ಸೈಯದ್ ಪಾರುಕ್, ಚಲಪತಿ, ಹನುಮಪ್ಪ, ಚಂದ್ರಾರೆಡ್ಡಿ, ವೆಂಕಟರಾಮರೆಡ್ಡಿ, ಮಂಜುನಾಥ್ ಮುಂತಾದವರಿದ್ದರು

Leave a Reply

Your email address will not be published. Required fields are marked *

error: Content is protected !!