ರೈತರು ಕಡ್ಡಾಯವಾಗಿ “ಫ್ರೂಟ್ಸ್ ” ಅಡಿ ನೋಂದಾಯಿಸಿ ಗುರುತಿನ ಸಂಖ್ಯೆ ಪಡೆಯಲು ಜಿಲ್ಲಾಧಿಕಾರಿ ಸೂಚನೆ

ಫ್ರೂಟ್ಸ್/FRUITS (Farmers Registration and Unified Beneficiary information system) ಕರ್ನಾಟಕ ಸರ್ಕಾರ ಇ-ಆಡಳಿತ ಅಭಿವೃದ್ಧಿ ಪಡಿಸಿರುವ ಪೋರ್ಟಲ್ ಆಗಿದ್ದು, ಕಂದಾಯ ಇಲಾಖೆಯ “ಭೂಮಿ”  ತಂತ್ರಾಂಶದಿಂದ ಸಂಯೋಜಿಸಲಾಗಿದೆ. ರೈತರ ಭೂ ಹಿಡುವಳಿಯ ವಿವರವನ್ನು ವಿಳಾಸ ಮತ್ತು ಬ್ಯಾಂಕ್’ ವಿವರದೊಂದಿಗೆ ನೋಂದಾಯಿಸಿ ರೈತರಿಗೆ ಗುರುತಿನ ಸಂಖ್ಯೆ/FID(Farmers ID) ನೀಡಲಾಗುವುದು.

ಬರಗಾಲ ಮತ್ತು ಪ್ರವಾಹ ಸಂದರ್ಭದಲ್ಲಿ ಬೆಳೆ ನಷ್ಟ ಪರಿಹಾರ ವಿತರಿಸಲು, ಬೆಂಬಲ ಬೆಲೆ ಯೋಜನೆಯಲ್ಲಿ ಕೃಷಿ ಉತ್ಪನ್ನ ಖರೀದಿಸಲು, ಬ್ಯಾಂಕ್‌ಗಳಿಂದ ಸಾಲ ಸೌಲಭ್ಯ ಪಡೆಯಲು, ಕೃಷಿ, ತೋಟಗಾರಿಕೆ, ರೇಷ್ಮೆ ಮತ್ತು ಇತರೆ ಇಲಾಖೆಗಳಲ್ಲಿ ಸವಲತ್ತುಗಳನ್ನು ಪಡೆಯಲು ಫ್ರೂಟ್ಸ್ ಪೋರ್ಟಲ್ ನಲ್ಲಿ ನೋಂದಣಿ ಅಗತ್ಯವಾಗಿದ್ದು, ಎಲ್ಲಾ ರೈತರು ಕಡ್ಡಾಯವಾಗಿ ತಮ್ಮ ಎಲ್ಲಾ ಜಮೀನುಗಳ ವಿವರಗಳನ್ನು ತಮ್ಮ FID ಗೆ ಸೇರಿಸಲು ಮತ್ತು ಯಾವ ರೈತರು ಇಲ್ಲಿಯವರೆಗೆ FID ಯನ್ನು ಮಾಡಿಸಿಕೊಂಡಿಲ್ಲವೋ ಅವರು ತಮ್ಮ ಹತ್ತಿರದ ಕೃಷಿ ಇಲಾಖೆಯ ರೈತ ಸಂಪರ್ಕ ಕೇಂದ್ರ, ತೋಟಗಾರಿಕೆ ಇಲಾಖೆ, ಕಂದಾಯ ಇಲಾಖೆ, ಪಶು ಸಂಗೋಪನಾ ಇಲಾಖೆ‌ ಮತ್ತು ರೇಷ್ಮೆ ಇಲಾಖೆಯನ್ನು ಸಂಪರ್ಕಿಸಿ ಫ್ರೂಟ್ಸ್ ಪೋರ್ಟಲ್ ನಲ್ಲಿ ಕಡ್ಡಾಯವಾಗಿ ನೋಂದಾಯಿಸಿಕೊಳ್ಳುವುದು.

FID ಮಾಡಿಸಲು ಕಡ್ಡಾಯವಾಗಿದ್ದು ರೈತರು ಕೆಳಕಂಡ ದಾಖಲಾತಿಗಳನ್ನು ತಪ್ಪದೇ ತೆಗೆದುಕೊಂಡು ಹೋಗುವುದು.

1. ರೈತರ ಆಧಾರ್ ಕಾರ್ಡ್ ಪ್ರತಿ

2. ಬ್ಯಾಂಕ್‌ ಖಾತೆ ಪುಸ್ತಕದ ಪ್ರತಿ

3. ತಮ್ಮ ಹೆಸರಿನಲ್ಲಿರುವ ಜಮೀನುಗಳ ಪಹಣಿ ಪತ್ರಿಕೆಗಳು

4. ತಮ್ಮ ಮೊಬೈಲ್ ಸಂಖ್ಯೆ

5. ಜಾತಿ ಪ್ರಮಾಣ ಪತ್ರದ ಪ್ರತಿ (ಪರಿಶಿಷ್ಟ ವರ್ಗದ ರೈತರಿಗೆ ಕಡ್ಡಾಯ)

6. ಪಾಸ್‌ಪೋರ್ಟ್ ಅಳತೆಯ ಒಂದು ಭಾವಚಿತ್ರ.

ಅಧಿಕಾರಿಗಳು ಗ್ರಾಮಗಳಿಗೆ ಭೇಟಿ ನೀಡಿದಾಗ ರೈತರು ತಮ್ಮ ಜಮೀನಿನ ವಿವರಗಳು ಫ್ರೂಟ್ ತಂತ್ರಾಂಶದಲ್ಲಿ ಸೇರ್ಪಡೆಯಾಗದಿದ್ದಲ್ಲಿ ಮೇಲೆ ತಿಳಿಸಿರುವ ದಾಖಲೆಗಳನ್ನು ನೀಡಿ ಸಹಕರಿಸಬೇಕೆಂದು ಜಿಲ್ಲಾಧಿಕಾರಿ ಡಾ.ಶಿವಶಂಕರ.ಎನ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *