
ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ನಡೆಯುತ್ತಿದ್ದ ರೇವ್ ಪಾರ್ಟಿ ಅಡ್ಡೆ ಮೇಲೆ ಪೊಲೀಸರು ದಾಳಿ ನಡೆಸಿದ್ದು, 35 ಯುವತಿಯರು ಸೇರಿದಂತೆ 115 ಜನರನ್ನು ವಶಕ್ಕೆ ಪಡೆಯಲಾಗಿದೆ.
ಬೆಂಗಳೂರು ದಕ್ಷಿಣ ತಾಲೂಕಿನ ದೇವಿಗೆರೆ ಕ್ರಾಸ್ ಬಳಿ ಇರುವ ಅಯಾನಾ ರೆಸಾರ್ಟ್ ನಲ್ಲಿ ರೇವ್ ಪಾರ್ಟಿ ನಡೆಯುತ್ತಿದ್ದಾಗ ಬೆಂಗಳೂರು ದಕ್ಷಿಣ ಎಸ್ ಪಿ ಶ್ರೀನಿವಾಸ್ ಗೌಡ ನೇತೃತ್ವದಲ್ಲಿ ಪೊಲೀಸರು ದಾಳಿ ನಡೆಸಿದ್ದಾರೆ.

ವಶಕ್ಕೆ ಪಡೆದ 115 ಜರಿಗೂ ಬೆಂಗಳೂರು ದಕ್ಷಿಣ ಜಿಲ್ಲಾಸ್ಪತ್ರೆಯಲ್ಲಿ ಮೆಡಿಕಲ್ ಟೆಸ್ಟ್ ನಡೆಸಲಾಗಿದೆ.
ಸಿಲಿಕಾನ್ ಸಿಟಿ ಬೆಂಗಳೂರು ತಂಪಾದ ವಾತಾವರಣ ಹಾಗೂ ಉದ್ಯಾನಗಳಿಗೆ ಮಾತ್ರವಲ್ಲದೇ ಪ್ರತಿಭೆಗಳಿಗೂ ಹೆಸರುವಾಸಿಯಾಗಿದೆ. ವಿವಿಧ ರಾಜ್ಯಗಳಿಂದ ಉದ್ಯೋಗ ಅರಸಿ ನಗರಕ್ಕೆ ಲಕ್ಷಾಂತರ ಜನರು ವಲಸೆ ಬರುತ್ತಾರೆ. ಆದರೆ ನಗರದ ಸುತ್ತಮುತ್ತ ಪಾರ್ಟಿಗಳ ಹೆಸರಿನಲ್ಲಿ ಬೆಂಗಳೂರಿನ ಘನತೆಗೆ ಮಸಿ ಬಳಿಯಲಾಗುತ್ತಿದೆ.