ರೆಡಿಮೇಡ್ ಬಟ್ಟೆಗಳ ಪ್ಯಾಕ್​ಗಳಲ್ಲಿ ಡ್ರಗ್ಸ್ ಮಾರಾಟ: ನೈಜೀರಿಯಾ ಪ್ರಜೆಗಳಿಬ್ಬರ ಬಂಧನ: ಬಂಧಿತರಿಂದ 4.50 ಕೋಟಿ ರೂ.ಮೌಲ್ಯದ ಮಾದಕವಸ್ತು ವಶ

ರೆಡಿಮೇಡ್ ಬಟ್ಟೆಗಳ ಪ್ಯಾಕ್​ಗಳಲ್ಲಿ ಡ್ರಗ್ಸ್ ಮಾರಾಟ ಮಾಡುತ್ತಿದ್ದ ನೈಜೀರಿಯಾ ಪ್ರಜೆಗಳಿಬ್ಬರನ್ನು ರಾಜಾನುಕುಂಟೆ ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ 4.50 ಕೋಟಿ ರೂ. ಮೌಲ್ಯದ ಮಾದಕವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.

ಬಂಧಿತರನ್ನು ನೈಜೀರಿಯಾದ ಲಾಸೊನ್ಯೆ ಪೀಟರ್ ಒಬಿಯೋಮಾ ಹಾಗೂ ಸಂಡೇ ವಿನ್​​ಡಮ್​ ಎಂದು ಗುರುತಿಸಲಾಗಿದೆ.

ಬಂಧಿತರು ಮೆಡಿಕಲ್ ವಿಸಾದಲ್ಲಿ ದೆಹಲಿಗೆ ಬಂದಿದ್ದರು. ದೆಹಲಿಯಿಂದ ಬೆಂಗಳೂರಿನ ರಾಜಾನುಕುಂಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬಂದು ನೆಲೆಸಿದ್ದರು. ಬೇರೆಯವರ ಹೆಸರಲ್ಲಿ ಮನೆ ಬಾಡಿಗೆ ಪಡೆದು ಏರ್ಪೋರ್ಟ್ ಬಳಿ ಸೆಕ್ಯೂರಿಟಿಗಳು ಹಾಕುವಂತೆ ಮನೆ ಬಳಿ ಬಟ್ಟೆ ಹಾಕಿಕೊಂಡು ತಿರುಗಾಡುತಿದ್ದರು. ಅಲ್ಲದೆ, ಡ್ರಗ್ ಪೆಡ್ಲಿಂಗ್ ಮಾಡಬೇಕು ಎಂದು ಬಂದಿದ್ದ ಐನಾತಿಗಳು ನಂತರ ತಮ್ಮ ಅಸಲಿ ವರಸೆ ಶುರುವಿಟ್ಟುಕೊಂಡಿದ್ದರು. ಮನೆಯಲ್ಲಿಯೇ ಡ್ರಗ್ಸ್ ಶೇಖರಿಸಿಕೊಟ್ಟುಕೊಂಡು ಅದನ್ನು ಹೆಚ್ಚಿನ ಬೆಲೆಗೆ ಮಾರಾಟ ಮಾಡಿ ಹಣ ಗಳಿಸುತ್ತಿದ್ದರು.

ಡ್ರಗ್ ಮಾರಾಟ ಮಾಡಲು ಹಾಗೂ ಶೇಖರಿಸಿಡಲು ಆರೋಪಿಗಳು ಸಖತ್ ಪ್ಲಾನ್ ಮಾಡಿಕೊಂಡಿದ್ದರು. ರೆಡಿಮೇಡ್ ಬಟ್ಟೆಗಳು, ಅದರಲ್ಲೂ ಮಹಿಳೆಯರ ಚೂಡಿದಾರದಂತಹ ಬಟ್ಟೆಗಳಲ್ಲಿ, ಹೊಸ ಶರ್ಟ್, ಪ್ಯಾಂಟ್​ಗಳ ಪ್ಯಾಕ್ ಮಾಡುವಾಗ ನಡುವೆ ಬಳಸುವ ಕಾರ್ಡ್ ಬೋರ್ಡ್ ಮಧ್ಯೆ ಮಾದಕ ವಸ್ತು ತುಂಬಿ ಇಟ್ಟು ಮಾರಾಟ ಮಾಡುತ್ತಿದ್ದರು.

ಪೊಲೀಸರಿಗೆ ಈ ಆರೋಪಿಗಳ ಕಳ್ಳಾಟದ ಬಗ್ಗೆ ಖಚಿತ ಮಾಹಿತಿ ಸಿಕ್ಕಿತ್ತು. ಅದರಂತೆ, ಒಬ್ಬರು ಪೊಲೀಸ್ ಸಿಬ್ಬಂದಿ ಆರೋಪಿಗಳ ಬೆನ್ನು ಹತ್ತಿದ್ದರು. ಇದೇ ವೇಳೆ ಆರೋಪಿಗಳು ಪರಾರಿಯಾಗಲು ಯತ್ನಿಸುವ ಸಾದ್ಯತೆ ಕಂಡುಬಂದಿದ್ದು, ತಕ್ಷಣವೇ 112 ಗೆ ಕರೆ ಮಾಡಿ ಇಆರ್​​ಸ್​​​ಎಸ್ ವಾಹನವನ್ನು ಕರೆಸಿಕೊಂಡಿದ್ದಾರೆ. ಈ ವೇಳೆ ಎಎಸ್​ಐ ತಮ್ಮ ಬಳಿ ಇದ್ದ ಸರ್ವಿಸ್ ಪಿಸ್ತೂಲ್ ತೋರಿಸಿ ಬೆದರಿಸಿ ಆರೋಪಿಗಳು ತಪ್ಪಿಸಿಕೊಳ್ಳದಂತೆ ಲಾಕ್ ಮಾಡಿದ್ದಾರೆ. ಬಳಿಕ ಆರೋಪಿಗಳನ್ನು ಹೆಡೆಮುರಿ ಕಟ್ಟಿದ ಪೊಲೀಸರು ನೈಜೀರಿಯಾದವರ ತಂಡದ ಸಹಿತ ಇತರ ಡ್ರಗ್ ಪೆಡ್ಲರ್​​ಗಳ ಮನೆ ಮೇಲೆ ದಾಳಿ ಮಾಡಿದ್ದಾರೆ.

ದಾಳಿ ವೇಳೆ 4.50 ಕೋಟಿರೂಪಾಯಿಗೂ ಅಧಿಕ ಮೌಲ್ಯದ 2.8 ಕೆಜಿ ಎಂಡಿಎಂ ಎ ಕ್ರಿಸ್ಟಲ್, 200 ಗ್ರಾಂ ಹೈಡ್ರೋ ಗಾಂಜಾ, ಎರಡು ಲಕ್ಷ ರೂ. ನಗದು, ಏಳು ಮೊಬೈಲ್​ಗಳು, ವೇಯಿಂಗ್ ಮಷೀನ್ ಮತ್ತು ಮಹಿಳೆಯರ ಕೆಲ ಹೊಸ ಬಟ್ಟೆಗಳನ್ನು ಜಪ್ತಿ ಮಾಡಲಾಗಿದೆ. ಆರೋಪಿಗಳು ವಿಸಾ ಅವಧಿ ಮುಗಿದಿದ್ದರೂ ಭಾರತದಲ್ಲಿ ನೆಲೆಸಿರುವುದು ತನಿಖೆ ವೇಳೆ ಗೊತ್ತಾಗಿದೆ‌.

ಈ ಗ್ಯಾಂಗ್​​ನಲ್ಲಿ ಇದ್ದ ಒರ್ವ ವಿದೇಶಿ ಪ್ರಜೆ ತಪ್ಪಿಸಿಕೊಂಡಿರುವುದು ತನಿಖೆ ವೇಳೆ ತಿಳಿದುಬಂದಿದೆ. ಈ ಜಾಲಕ್ಕೆ ಹೊರ ರಾಜ್ಯದಿಂದ ಡ್ರಗ್ಸ್ ಪೂರೈಕೆ ಆಗುತ್ತಿರುವ ಬಗ್ಗೆ ಮಾಹಿತಿ ಇದ್ದು, ಆ ಕುರಿತು ಪೊಲೀಸರು ತನಿಖೆ ನಡೆಸುತಿದ್ದಾರೆ.

Ramesh Babu

Journalist

Recent Posts

ಪ್ರಜ್ವಲ್ ರೇವಣ್ಣ ಕೇಸ್: ಪ್ರಜ್ವಲ್ ರೇವಣ್ಣಗೆ ಜೀವಾವಧಿ ಶಿಕ್ಷೆ: ಜೀವನ‌ಪರ್ಯಂತ ಸೆರೆಮನೆ ವಾಸ

ಮೈಸೂರಿನ ಕೆಆರ್​​ ನಗರದ ಮಹಿಳೆಯ ಅಪಹರಣ ಮತ್ತು ಅತ್ಯಾಚಾರ ಪ್ರಕರಣದಲ್ಲಿ ಜೆಡಿಎಸ್ ಮಾಜಿ ಸಂಸದ ಪ್ರಜ್ವಲ್ ರೇವಣ್ಣ  ದೋಷಿ ಎಂದು…

59 minutes ago

ಸೂಫಿಗಳ ಸಾಹಿತ್ಯ ಸಂಸ್ಕೃತಿ ಅನುಸಂಧಾನ ಕಾರ್ಯಕ್ರಮ

ಬೆಂಗಳೂರು ವಿಶ್ವವಿದ್ಯಾಲಯ ಕನ್ನಡ ಅಧ್ಯಯನ ಕೇಂದ್ರದಲ್ಲಿ ನಡೆದ ಕರ್ನಾಟಕ ಸೂಫಿಗಳ ಸಾಹಿತ್ಯ ಸಂಸ್ಕೃತಿ ಅನುಸಂಧಾನ ಕಾರ್ಯಕ್ರಮ ನಡೆಯಿತು. ಈ ಸಂದರ್ಭದಲ್ಲಿ…

10 hours ago

ಪ್ರಥಮ್ ಜೀವ ಬೆದರಿಕೆ ಪ್ರಕರಣ: ವಿಚಾರಣೆ ಬಳಿಕ ರಕ್ಷಕ್ ಬುಲೆಟ್ ಫಸ್ಟ್ ರಿಯಾಕ್ಟ್

ನಟ ಪ್ರಥಮ್ ಜೀವ ಬೆದರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಹಾಜರಾಗುವಂತೆ ಪೊಲೀಸ್ ನೋಟಿಸ್ ನ್ನು ರಕ್ಷಕ್ ಬುಲೆಟ್ ಗೆ ನೀಡಲಾಗುತ್ತು.…

20 hours ago

ನಟ ಪ್ರಥಮ್ ಜೀವ ಬೆದರಿಕೆ ಪ್ರಕರಣ: ವಿಚಾರಣೆಗೆ ಹಾಜರಾದ ರಕ್ಷಕ್ ಬುಲೆಟ್: ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ವಿಚಾರಣೆ

ನಟ ಪ್ರಥಮ್ ಜೀವ ಬೆದರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ರಕ್ಷಕ್ ಬುಲೆಟ್ ಇಂದು ವಿಚಾರಣೆಗೆ ಹಾಜರಾಗಿದ್ದರು. ಇನ್ಸ್ ಪೆಕ್ಟರ್ ಸಾಧಿಕ್…

22 hours ago

ಒಳಮೀಸಲಾತಿಗಾಗಿ ಆಗ್ರಹಿಸಿ ಜಿಲ್ಲಾಧಿಕಾರಿ ಕಚೇರಿ ಎದುರು ಅರೆಬೆತ್ತಲೆ ಧರಣಿ

ಜನಸಂಖ್ಯೆ ಆಧಾರದ ಮೇಲೆ ಒಳ ಮೀಸಲಾತಿ ನೀಡುವಂತೆ ರಾಜ್ಯ ಸರ್ಕಾರಗಳಿಗೆ ಆದೇಶ ನೀಡಿ ಇಂದಿಗೆ ಒಂದು ವರ್ಷ ಕಳೆದಿದೆ ಆದರೆ…

23 hours ago

ಜಿಲ್ಲೆಯಲ್ಲಿ ರಸಗೊಬ್ಬರ ಕೊರತೆ ಇಲ್ಲ- 10,165 ಮೆಟ್ರಿಕ್ ಟನ್ ರಸಗೊಬ್ಬರ ಲಭ್ಯ- ಜಿಲ್ಲಾಧಿಕಾರಿ ಎ.ಬಿ ಬಸವರಾಜು

ಜಿಲ್ಲೆಯಲ್ಲಿ 10.165 ಮೆಟ್ರಿಕ್ ಟನ್ ರಸಗೊಬ್ಬರ ಲಭ್ಯ ಇದ್ದು, ಬೇಡಿಕೆಗಿಂತ ಹೆಚ್ಚಿನ ರಸಗೊಬ್ಬರ ದಾಸ್ತಾನು ಇದೆ ಹಾಗಾಗಿ ರಸಗೊಬ್ಬರ ಕೊರತೆ…

1 day ago