ದೇವನಹಳ್ಳಿ ತಾಲ್ಲೂಕಿನ ಬೀರಸಂದ್ರ ಗ್ರಾಮದ ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ ಭವನದ ಜಿಲ್ಲಾ ಪಂಚಾಯಿತಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ಕಚೇರಿಯಲ್ಲಿ ಇಂದು ರುಡ್‌ಸೆಟ್ ಸಂಸ್ಥೆಯ 27ನೇ ವಾರ್ಷಿಕ ವರದಿಯನ್ನು ಜಿಲ್ಲಾ ಪಂಚಾಯಿತಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾದ ವರ್ಣೀತ್ ನೇಗಿ ಅವರು ಅನಾವರಣಗೊಳಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಮಾರ್ಗದರ್ಶಿ ಬ್ಯಾಂಕಿನ ವ್ಯವಸ್ಥಾಪಕರಾದ ಮಧುಕರ್, ರುಡ್‌ಸೆಟ್ ಸಂಸ್ಥೆಯ ನಿರ್ದಶಕರಾದ ಜೆ.ಆನಂದ್ ಹಾಗೂ ರವಿಕುಮಾರ, ಆರ್‌ಸೆಟಿ ಸೊಣ್ಣಹಳ್ಳಿಪುರದ ನಿರ್ದೇಶಕರಾದ ಗಿರಿಯಪ್ಪ ಹಾಗೂ ರುಡ್‌ಸೆಟ್ ಸಂಸ್ಥೆಯ ಉಪನ್ಯಾಸಕರಾದ ವಿದ್ಯಾ ಹೊಸಮನಿ ಅವರು ಉಪಸ್ಥಿತರಿದ್ದರು.