ವಿಶ್ವ ಪರಿಸರದ ದಿನದ ಅಂಗವಾಗಿ ನೆಲಮಂಗಲ ತಾಲ್ಲೂಕಿನ ಅರಿಶಿನಕುಂಟೆಯಲ್ಲಿರುವ ರುಡ್‌ಸೆಟ್ ಸಂಸ್ಥೆಯಲ್ಲಿಂದು ಸಂಸ್ಥೆಯ ನಿರ್ದೇಶಕರಾದ ರವಿಕುಮಾರ ಅವರು ಸಂಸ್ಥೆಯ ಆವರಣದಲ್ಲಿ ಸಸಿಯನ್ನು ನೆಟ್ಟು, ನೀರೆರೆದು, ಶಿಬಿರಾರ್ಥಿಗಳಿಗೆ ಪರಿಸರ ಸಂರಕ್ಷಣೆ ದಿನದ ಮಹತ್ವ ಹಾಗೂ ಪರಿಸರ ಸಂರಕ್ಷಣಾ ವಿಧಾನಗಳನ್ನು ತಿಳಿಸಿದರು.
ಈ ಸಂದರ್ಭದಲ್ಲಿ ಉಪನ್ಯಾಸಕರಾದ ರವೀಂದ್ರ, ವಿದ್ಯಾ ಹೊಸಮನಿ, ಕಚೇರಿ ಸಹಾಯಕರಾದ ಅರುಣ್, ಸಂತೋಷ್, ಅತಿಥಿ ಉಪನ್ಯಾಸಕರಾದ ರಶ್ಮಿರಾಘವೇಂದ್ರ, ಮೊಬೈಲ್ ರಿಪೇರಿ & ಸೇವೆ, ಎಂಬ್ರಾಯ್ಡರಿ & ಫ್ಯಾಬ್ರಿಕ್ ಪೇಟಿಂಗ್ ಹಾಗೂ ಉದ್ಯಮಶೀಲತಾ ಅಭಿವೃದ್ಧಿ ತರಬೇತಿಯ ಶಿಬಿರಾರ್ಥಿಗಳು ಹಾಗೂ ಸಂಸ್ಥೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು.