
ರೀಲ್ಸ್ ಹುಚ್ಚಾಟಕ್ಕೆ ಈಗಾಗಲೇ ರಾಜ್ಯದಲ್ಲಿ ಹಲವರು ಜೀವ ಕಳೆದುಕೊಂಡಿದ್ದಾರೆ. ಆದರೂ ಸಹ ಯುವಕರು ರೀಲ್ಸ್ ಹುಚ್ಚಾಟದಿಂದ ಮಾತ್ರ ದೂರ ಉಳಿಯುತ್ತಿಲ್ಲ.
ಇದೀಗ ತೊಗರಿ ನಾಡು ಕಲಬುರಗಿ ಜಿಲ್ಲೆಯಲ್ಲಿ ಟ್ರಾಕ್ಟರ್ ಚಾಲಕನೋರ್ವ ರೀಲ್ಸ್ ಮಾಡಲು ಹೋಗಿ ಪ್ರಾಣ ಕಳೆದುಕೊಂಡಿದ್ದಾನೆ.
ಲೋಕೇಶ್ ತಂದೆ ಕಲ್ಲಪ್ಪ ಪೂಜಾರಿ (22) ಮೃತ ಟ್ರಾಕ್ಟರ್ ಚಾಲಕ.
ಕಲಬುರಗಿ ಜಿಲ್ಲೆಯಲ್ಲಿ ಕಮಲಾಪುರ ತಾಲ್ಲೂಕಿನ ಮಹಾಗಾಂವ್ ಗ್ರಾಮದ ನಿವಾಸಿಯಾದ ಲೋಕೇಶ್ ಆಗಾಗ ಟ್ರಾಕ್ಟರ್ ಚಲಾಯಿಸುವಾಗ ರೀಲ್ಸ್ ಮಾಡ್ತಿದ್ದ.
ಅದೇ ರೀತಿ ಮಹಾಗಾಂವ್ ಗ್ರಾಮದ ವಿಜಯಕುಮಾರ್ ಎನ್ನುವವರ ಕಬ್ಬಿನ ಗದ್ದೆಯಲ್ಲಿ ಟ್ರಾಕ್ಟರ್ ನಿಂದ ಉಳುಮೆ ಮಾಡುವಾಗ ಟ್ರಾಕ್ಟರ್ ಚಲಾಯಿಸುತ್ತಲೇ ನಿಂತುಕೊಂಡು ಮೊಬೈಲ್ ನಲ್ಲಿ ವಿಡಿಯೋ ಶೂಟ್ ಮಾಡುತ್ತ ರೀಲ್ಸ್ ಮಾಡ್ತಿದ್ದಾಗ ಚಾಲಕ ಲೋಕೇಶ್ ಕಾಲು ಜಾರಿ ಬಿದ್ದು ಟ್ರಾಕ್ಟರ್ ನ ಚಕ್ರದಡಿ ಸಿಲುಕಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ.
ಮಹಾಗಾಂವ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಅದೇನೆ ಇದ್ರು ಸಹ ರೀಲ್ಸ್ ಹುಚ್ಚಟಕ್ಕೆ ಬಿದ್ದು ಲೋಕೇಶ್ ಪೂಜಾರಿ ಪ್ರಾಣ ಕಳೆದುಕೊಂಡಿದ್ದಾನೆ.