Categories: ಕೋಲಾರ

ರಿಯಾಲಿಟಿ ಶೋ ಮೂಲಕ ಈ ನೆಲದ ಸಂಸ್ಕೃತಿ ನಾಶವಾಗಿದೆ-ಗೊಲ್ಲಹಳ್ಳಿ ಶಿವಪ್ರಸಾದ್ ವಿಷಾದ

ಕೋಲಾರ: ಸಮಾಜದಲ್ಲಿ ರಿಯಾಲಿಟಿ ಶೋಗಳ ಮೂಲಕ ಜನಮಾನಸದಲ್ಲಿ ವಿಷಕಾರಿಯಾಗಿಬಿಟ್ಟಿದೆ ಜನಪದವು ಈ ನೆಲದ ಸಂಬಂಧಗಳನ್ನು ಬೆಸೆಯುವ ಸಂಸ್ಕೃತವನ್ನು ಹೊಸದಾಗಿ ಕಟ್ಟಿ ಮುಂದಿನ ಯುವ ಪೀಳಿಗೆಗೆ ತೋರಿಸಬೇಕಾದ ಅನಿವಾರ್ಯತೆ ಬಂದಿದೆ ಎಂದು ಜಾನಪದ ಅಕಾಡೆಮಿ ಅಧ್ಯಕ್ಷ ಗೊಲ್ಲಹಳ್ಳಿ ಶಿವಪ್ರಸಾದ್ ವಿಷಾದ ವ್ಯಕ್ತಪಡಿಸಿದರು,

ನಗರದ ಜೂನಿಯರ್ ಕಾಲೇಜ್ ಮೈದಾನದಲ್ಲಿ ರಾಜ್ಯ ಮಟ್ಟದ ಜನಪರ ಉತ್ಸವದ ಸಮಾರೋಪ ಸಮಾರಂಭದಲ್ಲಿ ಆಶಯ ಭಾಷಣ ಮಾಡಿದ ಅವರು ಪೂರ್ವಜರು ಮಾತಿನ ಮೂಲಕವೇ ಮನಸ್ಸಿಗೆ ಹತ್ತಿರವಾದ ಸಂಬಂಧಗಳನ್ನು ಕಟ್ಟಿದ್ದಾರೆ ಇವತ್ತು ನಮ್ಮ ನಡುವಿನ ಪೂರ್ವಜರು ಗೊತ್ತಿಲ್ಲ ಅದೇ ಸಿನಿಮಾ ನಟರು ಮಾತ್ರ ಎಲ್ಲರಿಗೂ ಗೊತ್ತಿದೆ ಮುಂದೊಂದು ದಿನ ನಮಗೆಲ್ಲ ಅಪಾಯಕಾರಿಯಾಗುತ್ತದೆ ಜನಪದ ಮೂಲಕ ಕಲಾವಿದರು ನಾಳೆಗೆ ಬಳ್ಳಿಯ ಮೂಲಕ ಹೊಸ ಭರವಸೆಯನ್ನು ಮೂಡಿಸಿ ಮುಂದಿನ ಪೀಳಿಗೆಗೆ ಕೊಡಬೇಕಾಗಿದೆ ಎಂದರು.

ಇವತ್ತಿನ ಕಲಾವಿದರು ಮಕ್ಕಳಂತೆ ಮುಗ್ಧತೆಯಿಂದ ಇರಬೇಕು‌ ಸಮಾಜವನ್ನು ಕಟ್ಟುವ ಕಡೆಗೆ ಕಲಾವಿದರು ಹೆಚ್ಚಾಗಿ ತೊಡಗಿಸಿಕೊಳ್ಳಬೇಕು ಎರಡು ದಿನಗಳ ಜಾನಪದ ಸಂಭ್ರಮದಲ್ಲಿ ಸಂಸ್ಕೃತಿಯ ನೈಜತೆಯ ಸಮಾಜವನ್ನು ಕಟ್ಟುವ ಜವಾಬ್ದಾರಿಯು ಇವತ್ತಿನ ಕಲಾವಿದರು ಕೈಯಲ್ಲಿದೆ ಸಮಾಜಕ್ಕೆ ಏನಾದರೂ ಕೊಡುಗೆ ನೀಡಬೇಕಾಗಿದೆ ಕಲಾವಿದರು ಹಾಡು, ನಾಟಕ, ಹರಿಕಥೆ ಭಜನೆ ಮೂಲಕ ಸಮಾಜದಲ್ಲಿ ಉತ್ತಮ ಸಂದೇಶಗಳನ್ನು ನೀಡಬೇಕು ಎಂದರು.

ಕಲಾವಿದರು ಶರಣರು ಸಂತರ ಕಾಲದಿಂದಲೂ ಸಮಾಜಕ್ಕೆ ಕೊಡುಗೆ ಕೊಟ್ಟಿದ್ದಾರೆ ದಾರ್ಶನಿಕರ ನೆಲದಲ್ಲಿ ಜನಪದ ಇದೆ ಅದು ಮಾಯಾಲೋಕದಲ್ಲಿ ಸಿಲುಕಿ ಅಪಾಯಗಳನ್ನು ಎದುರಿಸಬೇಕಾಯಿತು ಜನಪದದ ಮೂಲಕ ಉತ್ತಮ ಬದುಕು ಕಟ್ಟಿಕೊಳ್ಳಬೇಕು ಜನಪರ ಜೀವಪರ ಮನುಷ್ಯ ಪರವಾದ ಹಾಡುಗಳನ್ನು ಕೊಟ್ಟಿದ್ದಾರೆ ಕಲಾವಿದರಲ್ಲಿ ಮಗುವಾಗಿ ಮುಗ್ಧ ಪ್ರೀತಿ ಬರಬೇಕು ಕೇವಲ ಕೆಲವು ಗೂಟಕ್ಕೆ ಸೀಮಿತವಾಗಬಾರದು ಕಲಾವಿದರು ಇಲ್ಲದೇ ಜೀವಪರವಾರವಾಗಿರಲು ಸಾಧ್ಯವಿಲ್ಲ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಶಾಸಕ ಕೊತ್ತೂರು ಮಂಜುನಾಥ್ ಮಾತನಾಡಿ ಕಲಾವಿದರು ಸಮಾಜಕ್ಕೆ ಕೊಡುಗೆ ಕೊಟ್ಟಿದ್ದಾರೆ ಕಲೆ ಎಂಬುದು ನಮ್ಮ ಆಸ್ತಿಯಾಗಿದೆ ಅದನ್ನು ತೋರಿಸುವುದು ನಮ್ಮಂತವರ ಜವಾಬ್ದಾರಿಯಾಗಿದೆ ಜಿಲ್ಲೆಯಲ್ಲಿ ಇರುವ ಕಲಾವಿದರನ್ನು ಮತ್ತು ಕಲೆಯನ್ನು ಉಳಿಸಿ ಅಭಿವೃದ್ಧಿ ಮಾಡಬೇಕು ಕೋಲಾರ ಬಯಲುಸೀಮೆ ಪ್ರದೇಶವಾಗಿದೆ ಇಲ್ಲಿ ಕಲೆಗಳನ್ನು ಮರೆಯಬಾರದು ಮುಂದೆ ಕೆರೆ ಮತ್ತು ರಾಜಕಾಲುವೆ ಮರೆಯುವ ಪರಿಸ್ಥಿತಿ ಬರುತ್ತದೆ ಅಂತಹ ಸಂದರ್ಭ ಬರಬಾರದು ಕಲೆಯ ಉಳಿವಿಗೆ
ರಂಗಮಂದಿರದಲ್ಲಿ ವಾರಕ್ಕೊಮ್ಮೆ ಕಾರ್ಯಕ್ರಮ ಮಾಡಲಿ‌ ಜೊತೆಗೆ ಇದ್ದು ಪೋತ್ಸಾಹಿಸಲಾಗುತ್ತದೆ ಎಂದರು.

ಈ ಸಂದರ್ಭದಲ್ಲಿ ಸಂಸದ ಎಂ ಮಲ್ಲೇಶ್ ಬಾಬು ಮಾತನಾಡಿ ಕಲೆ ಎಂಬುದು ಎಲ್ಲರಿಗೂ ಬರುವುದಿಲ್ಲ ಕಲಾವಿದರನ್ನು ಪೋತ್ಸಾಹಿಸುವುದು ಕೂಡ ನಮ್ಮ ಜವಾಬ್ದಾರಿಯಾಗಬೇಕು ಜಿಲ್ಲೆಯ ಕಲಾವಿದರನ್ನು ಗುರುತಿಸಿ ಪೋತ್ಸಾಹಿಸಲು ಜಿಲ್ಲಾ ಕೇಂದ್ರದಲ್ಲಿ ಜಾನಪದ ಅಕಾಡೆಮಿಯ ಶಾಖೆಯನ್ನು ಪ್ರಾರಂಭ ಮಾಡುವಂತೆ ಸರ್ಕಾರ ಮತ್ತು ಜಿಲ್ಲಾಡಳಿತವನ್ನು ಒತ್ತಾಯಿಸಿದರು ಮೊಬೈಲ್ ಮಾಯಾಲೋಕದಲ್ಲಿ ಕಲೆ ಸಾಂಸ್ಕೃತಿಕ ಕಾರ್ಯಕ್ರಮಗಳು ಮರೆಯಾಗಬಾರದು ಪ್ರತಿ ವರ್ಷ ಇಂತಹ ಆಚರಣೆ ನಡೆಯುವಂತಾಗಬೇಕು ಎಂದರು.

ಮಾಲೂರು ಕ್ಷೇತ್ರದ ಶಾಸಕ ಕೆ‌.ವೈ ನಂಜೇಗೌಡ ಮಾತನಾಡಿ ಜನಪರ ಉತ್ಸವ ಜಿಲ್ಲೆಗೆ ಕೊಟ್ಟ ಅವಕಾಶವನ್ನು ಸರಿಯಾಗಿ ಸದುಪಯೋಗ ಪಡಿಸಿಕೊಳ್ಳಲಾಗಿದೆ ಜನಪದ ಕಲೆ ಮರೆಯುವ ಸಂದರ್ಭದಲ್ಲಿ ಸರ್ಕಾರ ಅವಕಾಶ ಕೊಟ್ಟಿದೆ ಇಂತಹ ಕಲೆಗಳು ಹಿಂದಿನ ಕಾಲದಲ್ಲಿ ನೋಡಿದ್ದೇವೆ ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚಾಗಿ ಇತ್ತು ಇವತ್ತಿನ ಮಕ್ಕಳಿಗೆ ವೇದಿಕೆ ಮಾಡಿ ತೋರಿಸಬೇಕಾಗಿದೆ ಜಿಲ್ಲೆಯಲ್ಲಿ ಜನಪದ ಕಲಾವಿದರು ಹೆಚ್ಚು ಇದ್ದು ಜಿಲ್ಲೆಗೆ ಹೆಸರು ತಂದಿದ್ದಾರೆ ಪ್ರತಿ ಹಂತದಲ್ಲಿ ಕಲಾವಿದರಿಗೆ ಸಹಕಾರ ಕೊಡತ್ತೇನೆ ಎಂದರು.

ವೇದಿಕೆಯಲ್ಲಿ ಜಿಲ್ಲಾಧಿಕಾರಿ ಡಾ.ಎಂ.ಆರ್ ರವಿ, ಜಿಪಂ ಸಿಇಒ ಡಾ ಪ್ರವೀಣ್ ಬಾಗೇವಾಡಿ, ಎಸ್ಪಿ ಬಿ.ನಿಖಿಲ್, ಜಿಪಂ ಕಾರ್ಯದರ್ಶಿ ಶಿವಕುಮಾರ್, ಎಡಿಸಿ ಮಂಗಳಾ, ಎಸಿ ಡಾ ಮೈತ್ರಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಂಟಿ ನಿರ್ದೇಶಕ ಅಶೋಕ್ ಛಲವಾದಿ, ಸಹಾಯಕ ನಿರ್ದೇಶಕಿ ವಿಜಯಲಕ್ಷ್ಮಿ, ಮುಂತಾದವರು ಇದ್ದರು.

Ramesh Babu

Journalist

Recent Posts

ಏ.12ರಂದು ದೊಡ್ಡಬಳ್ಳಾಪುರ ನಗರದ ಹಲವು ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ

ದೊಡ್ಡಬಳ್ಳಾಪುರ ನಗರದಲ್ಲಿ ಏ.12 ರಂದು 220/66/11ಕೆವಿ ಕೆಐಎಡಿಬಿ ಉಪ ವಿದ್ಯುತ್ ಕೇಂದ್ರದಿಂದ ಹೊರವೊಮ್ಮುವ F02-Birla Super ಫೀಡರ್‌ನಲ್ಲಿ ವಿದ್ಯುತ್ ಕಾಮಗಾರಿಗಳು…

7 hours ago

ಪಿಯುಸಿ ರಿಸಲ್ಟ್ ದಿನವೇ ವಿದ್ಯಾರ್ಥಿನಿ ಘೋರ ಸಾವು

ಪಿಯುಸಿ ರಿಸಲ್ಟ್ ದಿನವೇ ವಿದ್ಯಾರ್ಥಿನಿ ಘೋರವಾಗಿ ಸಾವನ್ನಪ್ಪಿರುವ ಘಟನೆ ಹೆಬ್ಬಾಳ ಪೊಲೀಸ್ ಠಾಣಾ ವ್ಯಾಪ್ತಿಯ ಮನೋರಾಯನಪಾಳ್ಯದಲ್ಲಿ ನಡೆದಿದೆ.. 17 ವರ್ಷದ…

11 hours ago

ಲೋಕಾಯುಕ್ತ ಬಲೆಗೆ ಬಿದ್ದ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ

ರಾಯಚೂರು ಸಿರವಾರ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಸುರೇಶ್ ಶೆಟ್ಟಿ ಲೋಕಾಯುಕ್ತರ ಬಲೆಗೆ ಬಿದ್ದ ಮುಖ್ಯಾಧಿಕಾರಿ. ರಾಘವೇಂದ್ರ…

11 hours ago

ಹುಚ್ಚನೊಬ್ಬನ ಕನಸು….

ದೇಶದ ಎಲ್ಲಾ ದಲಿತ ಕೇರಿಗಳನ್ನು ನಾಶ ಮಾಡಬೇಕು. ಅಲ್ಲಿನ ಎಲ್ಲರಿಗೂ ಊರ ಒಳಗಿನ ಸ್ಥಳದಲ್ಲಿ ವಾಸಕ್ಕೆ ಅವಕಾಶ ಕಲ್ಪಿಸಬೇಕು. ಬ್ರಾಹ್ಮಣರ…

16 hours ago

PUC Result: ರಾಜ್ಯಕ್ಕೆ ಪ್ರಥಮ ಸ್ಥಾನ ಗಳಿಸಿದ ದಿಶಾಳ ಸಾಧನೆಯ ಹಿಂದೆ ಎದೆ ನಡುಗಿಸುವ ಕಣ್ಣೀರಿನ ಕಥೆಯಿದೆ….ಈ ಕಥೆ ಕೇಳಿದರೆ ಎಂಥವರ ಕಣ್ಣಲ್ಲೂ ನೀರು ಬರುವುದು ಗ್ಯಾರಂಟಿ

600ಕ್ಕೆ 600 ಅಂಕ ತೆಗೆದು ರಾಜ್ಯಕ್ಕೆ ಟಾಪರ್ ಆದ ದಿಶಾಳ ಸಾಧನೆಯ ಹಿಂದೆ ಎದೆ ನಡುಗಿಸುವ ಕಣ್ಣೀರಿನ ಕಥೆಯಿದೆ. ಮೂರು…

1 day ago

ತೂಬಗೆರೆ ಸರ್ಕಾರಿ ಪಿಯು ಕಾಲೇಜಿಗೆ ಮತ್ತೊಮ್ಮೆ ಮೆರುಗು: ಶೇ.95.45 ಫಲಿತಾಂಶ

ದೊಡ್ಡಬಳ್ಳಾಪುರ (ತೂಬಗೆರೆ): ಗ್ರಾಮಾಂತರ ಭಾಗದಲ್ಲಿದ್ದರೂ ಶೈಕ್ಷಣಿಕ ಕ್ಷೇತ್ರದಲ್ಲಿ ತನ್ನದೇ ಆದ ಛಾಪು ಮೂಡಿಸಿರುವ ತೂಬಗೆರೆ ಸರ್ಕಾರಿ ಪದವಿ ಪೂರ್ವ ಕಾಲೇಜು…

1 day ago