ರಿಯಾಯಿತಿ ದರದಲ್ಲಿ ಊಟದ ವ್ಯವಸ್ಥೆ: ಕೇವಲ 30ರೂ.ಗೆ ಹೊಟ್ಟೆ‌ ತುಂಬಾ ಊಟ

ಕನ್ನಡಿಗರ ರಕ್ಷಣಾ ವೇದಿಕೆ(ಕನ್ನಡಿಗರ ಬಣ) ವತಿಯಿಂದ ರಿಯಾಯಿತಿ ದರದಲ್ಲಿ ಊಟದ ವ್ಯವಸ್ಥೆಗೆ ನಗರದ ಕನ್ನಡ ಜಾಗೃತ ಭವನದ ಬಳಿ ಚಾಲನೆ ನೀಡಲಾಯಿತು.

ನಗರದಲ್ಲಿನ ಬಡ ಬಗ್ಗರು, ಕೂಲಿ ಕಾರ್ಮಿಕರು, ನೇಕಾರ ಕಾರ್ಮಿಕರು, ತಾಲ್ಲೂಕು ಕಚೇರಿ, ಕೋರ್ಟ್ ಕೆಲಸಕ್ಕೆ ಬರುವಂತ ಗ್ರಾಮೀಣ ಭಾಗದ ಜನರಿಗೆ ಒಂದೊತ್ತಿನ ಊಟಕ್ಕೂ ಪರದಾಡುವಂತ ಪರಿಸ್ಥಿತಿ ಇದೆ. ಇದನ್ನು ಮನಗೊಂಡು ಉತ್ತಮ ಗುಣಮಟ್ಟದ ಆಹಾರವನ್ನು ಕೇವಲ 30ರೂ. ದರದಲ್ಲಿ ಎರಡು ಚಪಾತಿ, ಅನ್ನ-ಸಾರು, ಪಲ್ಯ, ಮಜ್ಜಿಗೆ ನೀಡಲಾಗುತ್ತಿದೆ. ಇತರೆ ಕಡೆಗಳಲ್ಲಿ ಊಟ ಬೇಕೆಂದರೆ ದುಬಾರಿ ದರ ತೆರಬೇಕು. ಹೆಚ್ಚು ಹಣ ಕೊಟ್ಟರೂ ಗುಣಮಟ್ಟ ಮಾತ್ರ ಅಷ್ಟಕ್ಕಷ್ಟೆ. ಆದರೆ ಇಲ್ಲಿ ಕಡಿಮೆ ದರದಲ್ಲಿ, ಗುಣಮಟ್ಟದ ಆಹಾರ ಪೂರೈಕೆಗೆ ಒತ್ತು ನೀಡಲಾಗುತ್ತಿದೆ.

ಪ್ರತಿನಿತ್ಯ ಅಡುಗೆ ಜವಾಬ್ದಾರಿ ವಹಿಸಿಕೊಂಡಿರುವ ಖಜಾಂಚಿ ಚೇತನ್ ಗೌಡ ಮಾತನಾಡಿ, ಕನಿಷ್ಠ ಬೆಲೆಗೆ ಸಾರ್ವಜನಿಕರಿಗೆ ಉತ್ತಮ ಗುಣಮಟ್ಡದ ಆಹಾರವನ್ನು ನೀಡಬೇಕು ಎಂಬ ಕಾರಣಕ್ಕೆ ಕೇವಲ 30ರೂ. ದರದಲ್ಲಿ ಎರಡು ಚಪಾತಿ, ಅನ್ನ-ಸಾರು, ಮಜ್ಜಿಗೆ ನೀಡಲಾಗುತ್ತಿದೆ. ಯಾವುದೇ ಲಾಭಕ್ಕಾಗಿ ಈ ಸಮಾಜಮುಖಿ ಕೆಲಸ ಮಾಡುತ್ತಿಲ್ಲ ಬದಲಾಗಿ ಬಡಬಗ್ಗರ ಹೊಟ್ಟೆ ತುಂಬಿಸುವ ಉದ್ದೇಶದಿಂದ ಈ ಕಾರ್ಯಕ್ಕೆ ಚಾಲನೆ ನೀಡಲಾಗಿದೆ ಎಂದರು.

Leave a Reply

Your email address will not be published. Required fields are marked *