
ಟ್ರಾಫಿಕ್ನಲ್ಲಿ ಟೀಂ ಇಂಡಿಯಾ ಮಾಜಿ ಕೋಚ್ ರಾಹುಲ್ ದ್ರಾವಿಡ್ ಕಾರಿಗೆ ಗೂಡ್ಸ್ ಆಟೋ ಬಂದು ಗುದ್ದಿದೆ. ಕನ್ನಿಂಗ್ ಹ್ಯಾಮ್ ರಸ್ತೆಯಲ್ಲಿ ಸಂಜೆ 6.30ಕ್ಕೆ ಈ ಘಟನೆ ನಡೆದಿದೆ.

ಕಾರಿಗೆ ಗೂಡ್ಸ್ ಆಟೋ ಟಚ್ ಆದ ಬಳಿಕ ರಾಹುಲ್ ದ್ರಾವಿಡ್ ಕಾರಿನಿಂದ ಕೆಳಗಿಳಿದು ಪರಿಶೀಲನೆ ನಡೆಸಿದರು. ಈ ವೇಳೆ ದ್ರಾವಿಡ್ ಹಾಗೂ ಗೂಡ್ಸ್ ಆಟೋ ಚಾಲಕನ ಮಧ್ಯೆ ಸಣ್ಣ ವಾಗ್ವಾದ ನಡೆದಿದೆ.

ರಾಹುಲ್ ದ್ರಾವಿಡ್ ಅವರು ಇಂಡಿಯನ್ ಎಕ್ಸ್ಪ್ರೆಸ್ನಿಂದ ಹೈಗ್ರೌಂಡ್ ಕಡೆ ಹೋಗುವಾಗ ಟ್ರಾಫಿಕ್ ಜಾಮ್ನಲ್ಲಿ ಕಾರು ನಿಂತಿತ್ತು. ಆಗ ಗೂಡ್ಸ್ ಆಟೋ ಹಿಂದೆಯಿಂದ ಬಂದು ಡಿಕ್ಕಿ ಹೊಡೆದಿದೆ.

ಗೂಡ್ಸ್ ಆಟೋ ಡಿಕ್ಕಿ ಆಗುತ್ತಿದ್ದಂತೆ ಕೆಳಗಿಳಿದ ರಾಹುಲ್ ದ್ರಾವಿಡ್ ಚಾಲಕನ ನಂಬರ್ ಪಡೆದು ಹೊಗಿದ್ದಾರೆ. ಹೈಗ್ರೌಂಡ್ಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಆಟೋ ಚಾಲಕನ ಮೇಲೆ ಯಾವುದೇ ದೂರು ದಾಖಲಾಗಿಲ್ಲ. ಆಟೋ ಚಾಲಕನ ಜೊತೆ ರಾಹುಲ್ ದ್ರಾವಿಡ್ ಮಾತುಕತೆ ನಡೆಸಿದ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.