ಮುಂಬೈ : ನಿಧಾನಗತಿ ಹಾಗೂ ಬೌಲಿಂಗ್ ಸ್ನೇಹಿ ಕ್ರೀಡಾಂಗಣದಲ್ಲಿ ನಡೆದ ಆಸ್ಟ್ರೇಲಿಯಾ ಹಾಗೂ ಭಾರತ ತಂಡದ ಸರಣಿಯ ಮೊದಲ ಏಕದಿನ ಪಂದ್ಯದಲ್ಲಿ ರಾಹುಲ್ ಹಾಗೂ ಜಡೇಜಾ ಅವರ ಭರ್ಜರಿ ಶತಕದ ಜೊತೆಯಾಟ ನೆರವಿನಿಂದ ಭಾರತ ಐದು ವಿಕೆಟ್ ಭರ್ಜರಿ ಗೆಲುವು ಪಡೆಯಿತು.
ನಾಯಕ ರೋಹಿತ್ ಶರ್ಮಾ ಅವರ ಅನಪಸ್ಥಿಯಲ್ಲಿ ಟಾಸ್ ಗೆದ್ದು ಬೌಲಿಂಗ್ ಆಯ್ದುಕೊಂಡ ಹಂಗಾಮಿ ನಾಯಕ ಹಾರ್ದಿಕ್ ಪಾಂಡ್ಯ ಉತ್ತಮ ನಿರ್ಧಾರ ಕೈಗೊಂಡರು, ನಾಯಕನ ನಂಬಿಕೆ ಉಳಿಸಿದ ಬೌಲಿಂಗ್ ವಿಭಾಗ ನಾಯಕನ ನಿರ್ಧಾರವನ್ನು ಸಮರ್ಥಿಸಿಕೊಂಡರು.
ಬ್ಯಾಟಿಂಗ್ ಆರಂಭಿಸಿದ ಪ್ರವಾಸಿ ತಂಡದ ಆರಂಭ ಉತ್ತಮವಾಗಿರಲಿಲ್ಲ, ಮೊಹಮ್ಮದ್ ಸಿರಾಜ್ ಅವರು ಮೊದಲ ಬಲಿ ಪಡಿದರು, ಆರಂಭಿಕ ಬ್ಯಾಟ್ಸ್‌ಮನ್ ಟ್ರಾವಿಸ್ ಹೆಡ್ ವಿಕೆಟ್ ಒಪ್ಪಿಸಿದರು, ನಂತರ ಬಂದ ಸ್ಟೀವನ್ ಸ್ಮಿತ್ ಹಾಗೂ ಮಿಚೆಲ್ ಮಾರ್ಷ್ ಜೋಡಿ ಉತ್ತಮ ರನ್ ಗಳಿಸಿದರು.
ಮಿಚೆಲ್ ಮಾರ್ಷ್(81), ನಾಯಕ ಸ್ಟೀವನ್ ಸ್ಮಿತ್ (22) ಹಾಗೂ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಜೋಶ್ ಇಂಗ್ಲೀಸ್ (26). ಅತ್ಯಲ್ಪ ಕಾಣಿಕೆ ನೀಡಿದರು, ಇದರ ಫಲವಾಗಿ ಆಸ್ಟ್ರೇಲಿಯಾ 188 ರನ್ ಗಳಿಸಿ ತನ್ನೆಲ್ಲಾ ವಿಕೆಟ್ ಕಳೆದುಕೊಂಡಿತು, ಭಾರತದ ಪರವಾಗಿ ಮೊಹಮ್ಮದ್ ಶಮಿ ಹಾಗೂ ಸಿರಾಜ್ ತಲಾ ಮೂರು ವಿಕೆಟ್ ಪಡೆದರು.
ಗುರಿ ಬೆನ್ನಟ್ಟಿದ ಭಾರತ ತಂಡ ಆರಂಭ ಉತ್ತಮವಾಗಿರಲಿಲ್ಲ ಇಶಾನ್ ಕಿಶನ್ (3), ವಿರಾಟ್ ಕೊಹ್ಲಿ (4), ಸೂರ್ಯಕುಮಾರ್ ಯಾದವ್ (0) ಬೇಗನೇ ವಿಕೆಟ್ ಒಪ್ಪಿಸಿದರು, ನಂತರ ಬಂದ ಕೆ. ಎಲ್. ರಾಹುಲ್ ಹಾಗೂ ಆಲ್ ರೌಂಡರ್ ರವೀಂದ್ರ ಜಡೇಜಾ ಜೋಡಿ ಮುರಿಯದ ಐದನೇ ವಿಕೆಟ್ ಗೆ 189 ರನ್ ಗುರಿ ತಲುಪಿದರು.
ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಕೆ. ಎಲ್. ರಾಹುಲ್ (75) ಹಾಗೂ ಆಲ್ ರೌಂಡರ್ ರವೀಂದ್ರ ಜಡೇಜಾ (45) ಉತ್ತಮ ಆಟ ಪ್ರದರ್ಶಿಸುವ ಮೂಲಕ ಗುರಿ ಬೆನ್ನತ್ತಿದರು. ಎರಡು ವಿಕೆಟ್ ಪಡೆದು ಆಲ್ ರೌಂಡರ್ ಆಟವಾಡಿದ ಜಡೇಜಾ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದರು.