ರಾಷ್ಟ್ರೀಯ ಹೆದ್ದಾರಿ 648ರ ದಾಬಸ್ ಪೇಟೆ -ಹೊಸಕೋಟೆ ರಸ್ತೆಯಲ್ಲಿ 17 ಸ್ಕೈವಾಕ್ ನಿರ್ಮಾಣಕ್ಕೆ ಟೆಂಡರ್ ಪ್ರಸ್ತಾಪ: ಹುಲಿಕುಂಟೆ, ಮುತ್ತುಗದಹಳ್ಳಿ, ಬೋವಿಪಾಳ್ಯ, ಮಧುರನಹೊಸಹಳ್ಳಿ, ಕೆಸ್ತೂರು, ತಳವಾರ ಗೇಟ್, ಮುಶಾಶಿ ಬಳಿ ಸ್ಕೈವಾಕ್ ನಿರ್ಮಾಣಕ್ಕೆ‌ ನಿರ್ಧಾರ

ದೊಡ್ಡಬಳ್ಳಾಪುರ : ರಾಷ್ಟ್ರೀಯ ಹೆದ್ದಾರಿ 648ರ ದಾಬಸ್ ಪೇಟೆ -ಹೊಸಕೋಟೆ ರಸ್ತೆಯಲ್ಲಿ 17 ಸ್ಕೈವಾಕ್ ನಿರ್ಮಾಣಕ್ಕೆ ಟೆಂಡರ್ ಪ್ರಸ್ತಾಪವಾಗಿದೆ, ಸುಮಾರು 27 ಕೋಟಿ ವೆಚ್ಚದಲ್ಲಿ ಸ್ಕೈವಾಕ್ ಗಳು ನಿರ್ಮಾಣವಾಗುತ್ತಿದ್ದು, ಹೆದ್ದಾರಿಯಿಂದ ಪ್ರತ್ಯೇಕವಾಗಿದ್ದ ಗ್ರಾಮಗಳ ನಡುವಿನ ಸಂಪರ್ಕ ಸ್ಕೈವಾಕ್ ಗಳಿಂದ ಸಂಪರ್ಕಿಸುವಂತಾಗಿದೆ.

ಉಪನಗರ ಹೊರವರ್ತುಲ ರಸ್ತೆ (STRR) ಯೋಜನೆಯಡಿ ದಾಬಸ್ ಪೇಟೆ-ಹೊಸಕೋಟೆ ರಸ್ತೆಯನ್ನ ನಿರ್ಮಾಣ ಮಾಡಲಾಗಿದ್ದು, ಬೆಂಗಳೂರು ನಗರದಲ್ಲಿ ವಾಹನಗಳ ದಟ್ಟನೆ ಕಡಿಮೆ ಮಾಡುವುದು ಮತ್ತು ಉಪನಗರಗಳನ್ನ ಅಭಿವೃದ್ಧಿ ಮಾಡುವ ಉದ್ದೇಶಕ್ಕಾಗಿ ಹೆದ್ದಾರಿ ಅಭಿವೃದ್ಧಿ ಮಾಡಲಾಗಿದೆ, ಈ ರಸ್ತೆ ಬೆಂಗಳೂರು-ಪುಣೆ, ಬೆಂಗಳೂರು-ಹೈದರಾಬಾದ್ ಮತ್ತು ಬೆಂಗಳೂರು ಚೆನ್ನೈ ಹೆದ್ದಾರಿಯನ್ನ ಸಂಪರ್ಕಿಸುವ ರಸ್ತೆಯಾಗಿದೆ.

ಹೆದ್ದಾರಿ ನಿರ್ಮಾಣವಾದ ನಂತರ ರಸ್ತೆ ಬದಿಯಲ್ಲಿನ ಸಂಪರ್ಕ ಕಡಿತವಾಗಿತ್ತು, ಗ್ರಾಮಗಳ ಬಳಿ ಹೆದ್ದಾರಿ ದಾಟಲು ಜನರು ಕಷ್ಟಪಡುವಂತ ಪರಿಸ್ಥಿತಿ ಇತ್ತು, ರಸ್ತೆ ದಾಟುವ ವೇಳೆ ಅಮಾಯಕ ಜನರು ಪ್ರಾಣ ಕಳೆದು ಕೊಳ್ಳುತ್ತಿದ್ದರು, ಗ್ರಾಮಗಳ ಬಳಿ ಸ್ಕೈವಾಕ್ ನಿರ್ಮಾಣ ಮಾಡುವಂತೆ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಸಾಕಷ್ಟು ಬಾರಿ ಮನವಿ ಮಾಡಲಾಗಿತ್ತು. ದಾಬಸ್ -ಪೇಟೆ-ಹೊಸಕೋಟೆ ರಸ್ತೆಯಲ್ಲಿ 27 ಕೋಟಿ ವೆಚ್ಚದಲ್ಲಿ 17 ಸ್ಕೈವಾಕ್ ಗಳನ ನಿರ್ಮಾಣಕ್ಕೆ ಟೆಂಡರ್ ಪ್ರಸ್ತಾವನೆಯಾಗಿದೆ, ಸೋಂಪುರ ಇಡೇಸ್ಟ್ರೀಯಲ್ ಏರಿಯಾ, ಮುದ್ದಲಿಂಗನಹಳ್ಳಿ, ಹುಲಿಕುಂಟೆ, ಮುಟ್ಟುಗದಹಳ್ಳಿ, ಬೋವಿಪಾಳ್ಯ, ಮಧುರನಹೊಸಹಳ್ಳಿ, ಕೆಸ್ತೂರು,ತಳವಾರ ಗೇಟ್, ಮುಶಾಶಿ, ಬೀರಸಂದ್ರ,ಚಪ್ಪರಕಲ್ಲು, ವಿಶ್ವನಾಥಪುರ, ಬೈದ್ರಾಹಳ್ಳಿ ಗೇಟ್, ಶೆಟ್ಟಿಹಳ್ಳಿ, ಎಲೆಕ್ಟ್ರಾನಿಕ್ ಸಿಟಿ ರೋಡ್, ಚನ್ನಹಳ್ಳಿ ರೋಡ್, ನಲ್ಲೂರು ರೋಡ್ ಬಳಿ ಸ್ಕೈವಾಕ್ ನಿರ್ಮಾಣಕ್ಕೆ ನಿರ್ಧಾರಿಸಲಾಗಿದೆ.

ರಾಷ್ಟ್ರೀಯ ಹೆದ್ದಾರಿ 648ರಲ್ಲಿ ನಿರ್ಮಾಣವಾಗುವ ಸ್ಕೈವಾಕ್ ವಿನ್ಯಾಸದ ಮಾದರಿ
ಸ್ಕೈವಾಕ್ ನಿರ್ಮಾಸುವಂತೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಮನವಿ ಮಾಡಿದ ಕೆಸ್ತೂರು ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ರಮೇಶ್ ಮಾಧ್ಯಮದೊಂದಿಗೆ ಮಾತನಾಡಿದ್ದು, ಕೆಸ್ತೂರು ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಕೆಸ್ತೂರು ಗೇಟ್, ಮೇಸ್ಟ್ರು ಮನೆ, ಕೂಗನಹಳ್ಳಿ,ಬ್ಯಾಡರಹಳ್ಳಿ ಗೇಟ್ ಬಳಿ ಸ್ಕೈವಾಕ್ ನಿರ್ಮಿಸುವಂತೆ 6 ತಿಂಗಳ ಹಿಂದೆಯೇ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಮನವಿ ಮಾಡಿದ್ರು, ಆದರೆ ಹೆದ್ದಾರಿ ಪ್ರಾರಂಭವಾಗಿ ವರ್ಷವಾದರು ಸ್ಕೈವಾಕ್ ನಿರ್ಮಾಣ ಮಾಡದೆ ಜನರ ಪ್ರಾಣದೊಂದಿದೆ ಅಧಿಕಾರಿಗಳು ಚೆಲ್ಲಾಟವಾಡುತ್ತಿದ್ದಾರೆಂದು ತಮ್ಮ ಅಕ್ರೋಶ ವ್ಯಕ್ತಪಡಿಸಿದರು.

ಕೆಸ್ತೂರು ಗೇಟ್ ನಲ್ಲಿ ಸ್ಕೈವಾಕ್ ಇಲ್ಲದೆ ಇರುವುದರಿಂದ ಗ್ರಾಮಸ್ಥರು ಒಂದು ಕಿ.ಮೀ ಬಳಸಿಕೊಂಡು ಅಂಡರ್ ಪಾಸ್ ಮೂಲಕ ಗ್ರಾಮಕ್ಕೆ ಬರ ಬೇಕಿದೆ, ಹಾಗೊಂದು ವೇಳೆ ಹೆದ್ದಾರಿಯನ್ನ ದಾಟಲು ಪ್ರಯತ್ನಿಸಿದ್ರೆ 150 ಕಿ.ಮೀ ವೇಗದಲ್ಲಿರುವ ವಾಹನಗಳು ಜನರ ಪ್ರಾಣವನ್ನ ಬಲಿ ಪಡೆಯುತ್ತಿವೆ, ರೈತರಿಂದ ಭೂಸ್ವಾಧೀನ ಮಾಡಿದ್ರು ಸರ್ವಿಸ್ ರಸ್ತೆ ಮಾಡಿಲ್ಲ, ಹೆದ್ದಾರಿಯನ್ನ ಸಂಪರ್ಕಿಸುವ ವೇಳೆ ಅಪಘಾತಕ್ಕೆ ತುತ್ತಾಗಿ ಗ್ರಾಮಸ್ಥರು ಪ್ರಾಣವನ್ನ ಕಳೆದುಕೊಳ್ಳುತ್ತಿದ್ದಾರೆ, ಸ್ಕೈವಾಕ್ ನಿರ್ಮಾಣಕ್ಕಾಗಿ 27 ಕೋಟಿಯ ಟೆಂಡರ್ ಪ್ರಕ್ರಿಯೆ ಪ್ರಾರಂಭವಾಗಿದೆ ಎಂಬ ಮಾಹಿತಿ ಇದೆ, ಅದಷ್ಟು ಬೇಗ ಸ್ಕೈವಾಕ್ ನಿರ್ಮಾಣ ಮಾಡದಿದ್ದಲ್ಲಿ ಉಗ್ರ ಹೋರಾಟ ಮಾಡುವ ಎಚ್ಚರಿಕೆಯನ್ನ ಈ ವೇಳೆ ನೀಡಿದರು.

Leave a Reply

Your email address will not be published. Required fields are marked *