ಯೋಗಪಟು ಜಾನ್ಹವಿ ಎಂ.ಆರ್ ರಾಷ್ಟ್ರೀಯ ಯೋಗ ಚಾಂಪಿಯನ್ ಶಿಪ್ ನಲ್ಲಿ ಬೆಳ್ಳಿ ಪದಕ ಪಡೆಯುವ ಮೂಲಕ ಸಾಧನೆ ಮಾಡಿದ್ದಾರೆ. ಪದಕ ವಿಚೇತಳಾಗಿರುವ ಜಾನ್ಹವಿರವರಿಗೆ ದೊಡ್ಡಬಳ್ಳಾಪುರ ಜನತೆ ಅಭಿನಂದನೆಗಳನ್ನ ಸಲ್ಲಿಸಿದ್ದಾರೆ.
ನ.23 ರಿಂದ 28ರ ವರೆಗೆ ಅಸ್ಸಾಂನ ಗುಹವಾಟಿಯಲ್ಲಿ ನಡೆದ 48ನೇ ರಾಷ್ಟ್ರೀಯ ಯೋಗ ಚಾಂಪಿಯನ್‌ಶಿಪ್ ನಲ್ಲಿ 14 ರಿಂದ 16 ವರ್ಷ ಮಹಿಳಾ ವಿಭಾಗದಲ್ಲಿ ಬೆಳ್ಳಿ ಪದಕವನ್ನ ಪಡೆದಿದ್ದಾರೆ.
ಬೆಳ್ಳಿ ಪದಕ ಗೆದ್ದ ಜಾನ್ಹವಿ. ಎಂ. ಆರ್ ಅವರಿಗೆ ಕರ್ನಾಟಕ ರಾಜ್ಯ ಅಮೆಚೂರ್ ಯೋಗಾಸನ ಸ್ಪೋಟ್ಸ್ ಅಸೋಸಿಯೇಷನ್ ಅಧ್ಯಕ್ಷರಾದ ಜಿ.ಎನ್ ಕೃಷ್ಣಮೂರ್ತಿ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲಾ ಅಮೆಚೂರ್ ಯೋಗಾಸನ ಸ್ಪೋಟ್ಸ್ ಅಸೋಸಿಯೇಷನ್ ಅಧ್ಯಕ್ಷರಾದ ಪ್ರೊಫೆಸರ್ ಎಂ.ಜಿ. ಅಮರನಾಥ್, ನಿಸರ್ಗ ಯೋಗಕೇಂದ್ರದ ಅಧ್ಯಕ್ಷರಾದ ಹೆಚ್. ಸಿ. ರವೀಂದ್ರ, ಕಾರ್ಯದರ್ಶಿ ಯೋಗ ನಟರಾಜ್, ಖಜಾಂಚಿ, ಶ್ಯಾಂಮಸುಂಧರ್ ಮತ್ತು ಯೋಗ ಶಿಕ್ಷಕರು, ವಿದ್ಯಾರ್ಥಿ ವಿದ್ಯಾರ್ಥಿನಿಯರು ಅಭಿನಂದನೆ ಸಲ್ಲಿಸಿದ್ದಾರೆ.