ಜ.12ರಂದು ಸ್ವಾಮಿ ವಿವೇಕಾನಂದ ದಿನಾಚರಣೆ ಅಂಗವಾಗಿ ರಾಷ್ಟ್ರೀಯ ಯುವ ದಿನವನ್ನಾಗಿ ಆಚರಣೆ ಮಾಡಲಾಗುತ್ತದೆ. ಈ ಹಿನ್ನೆಲೆ ಚಿಕ್ಕಬಳ್ಳಾಪುರದ ನಾಗಾರ್ಜುನ ಕಾಲೇಜಿನ 5ನೇ ಕರ್ನಾಟಕ ಬಟಾಲಿಯನ್ ಎನ್‌ಸಿಸಿ ಸಹಯೋಗದಲ್ಲಿ ಮ್ಯಾರಥಾನ್ ಓಟವನ್ನು ಆಯೋಜಿಸಲಾಗಿತ್ತು.
ಮ್ಯಾರಥಾನ್ ನಲ್ಲಿ ಸುಮಾರು 150ಕ್ಕೂ ಹೆಚ್ಚು ಎನ್‌ಸಿಸಿ ಕ್ಯಾಡೆಟ್ಸ್‌ಗಳು ಮತ್ತು ಸ್ವಯಂಸೇವಕರು ಉತ್ಸಾಹಭರಿತವಾಗಿ ಭಾಗವಹಿಸಿದ್ದರು. .
ಮ್ಯಾರಥಾನ್ ಬೆಳಿಗ್ಗೆ 8:30ಕ್ಕೆ ನಾಗರ್ಜುನ ಕಾಲೇಜು ಕ್ಯಾಂಪಸ್‌ನಿಂದ ಪ್ರಾರಂಭವಾಗಿ ಕಾಲೇಜಿನಿಂದ ಸುಮಾರು 10 ಕಿಲೋಮೀಟರ್ ದೂರದಲ್ಲಿರುವ ಶ್ರೇಷ್ಠ ಇಂಜಿನಿಯರ್ ಸರ್ ಎಂ. ವಿಶ್ವೇಶ್ವರಯ್ಯ ಅವರ ಜನ್ಮಸ್ಥಳವಾದ ಮುದ್ದೆನಹಳ್ಳಿಯಲ್ಲಿಯವರೆಗೆ ಸಾಗಿತು.
ಈ ಕಾರ್ಯಕ್ರಮವು ಯುವಜನತೆಯ ಆರೋಗ್ಯವನ್ನು, ಆತ್ಮವಿಶ್ವಾಸವನ್ನು ಅಭಿವೃದ್ಧಿಪಡಿಸಲು ಆಯೋಜನೆ ಮಾಡಲಾಗಿತ್ತು.