ಜ.12ರಂದು ಸ್ವಾಮಿ ವಿವೇಕಾನಂದ ದಿನಾಚರಣೆ ಅಂಗವಾಗಿ ರಾಷ್ಟ್ರೀಯ ಯುವ ದಿನವನ್ನಾಗಿ ಆಚರಣೆ ಮಾಡಲಾಗುತ್ತದೆ. ಈ ಹಿನ್ನೆಲೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಶ್ರೀ ಕೊಂಗಾಡಿಯಪ್ಪ ಪಿ.ಯು ಮತ್ತು ಪದವಿ ಕಾಲೇಜಿನ N. C. C. ವಿದ್ಯಾರ್ಥಿಗಳು ಹಾಗೂ 5 ಕರ್ನಾಟಕ ಬೆಟಲಿಯನ್ NCC ವತಿಯಿಂದ ಬೆಳಗ್ಗೆ 10ಗಂಟೆಗೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮಾದಗೊಂಡನಹಳ್ಳಿಯಿಂದ ನಾಗರಕೆರೆವರೆಗೆ ಸುಮಾರು ಕಿಮೀ ಸೈಕಲ್ ಜಾಥಾವನ್ನು ಆಯೋಜಿಸಲಾಗಿತ್ತು.
ಸೈಕಲ್ ಜಾಥಾಗೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಸದಾಶಿವ ರಾಮಚಂದ್ರ ಗೌಡ, ಶ್ರೀ ಕೊಂಡಾಡಿಯಪ್ಪ ಪಿ.ಯು ಹಾಗೂ ಪದವಿ ಕಾಲೇಜಿನ ಪ್ರಾಂಶುಪಾಲರು, NCC ಲೆಫ್ಟಿನೆಂಟ್ ಪ್ರವೀಣ್, ಡಾ.ರಾಜಕುಮಾರ್, ಮತ್ತು ಶ್ರೀಕಾಂತ್ ಹಾಗೂ 5 ಕರ್ನಾಟಕ NCC ಬೆಟಲಿಯನ್ ಅಧಿಕಾರಿಗಳು ಚಾಲನೆ ನೀಡಿದರು.
ಯುವ ಜನತೆಗೆ ಅರೋಗ್ಯ ಕುರಿತು ಪ್ರೇರಣೆ ನೀಡುವ ಸಲುವಾಗಿ ಎಲ್ಲಾ ಕಡೆಯಲ್ಲಿಯೂ ಸೈಕಲ್ ಜಾಥಾ ನಡೆಸಲಾಗಿದೆ. ಪ್ರಸ್ತುತ ಜೀವನ ಶೈಲಿಯಲ್ಲಿ ಸಾರ್ವಜನಿಕರ ಆರೋಗ್ಯದಲ್ಲಿ ಏರುಪೇರಾಗಿದ್ದು, ಹಲವು ಕಾಯಿಲೆಗಳಿಂದ ನರಳುವಂತಾಗಿದೆ. ಮಾನಸಿಕ ಖಿನ್ನತೆ ಸಮಸ್ಯೆ, ಹೃದಯ ಸಂಬಂಧಿ ಕಾಯಿಲೆ ಎದುರಿಸುತ್ತಿರುವವರ ಸಂಖ್ಯೆಯೂ ಹೆಚ್ಚಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಬೈಸಿಕಲ್ ತುಳಿಯುವ ಹವ್ಯಾಸ ಬೆಳೆಸಿಕೊಂಡರೆ ದೈಹಿಕವಾಗಿ ಸದೃಢರಾಗುವುದರ ಜತೆಗೆ ಮಾನಸಿಕ ಆರೋಗ್ಯವನ್ನೂ ಪಡೆಯಬಹುದು ಎಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಸದಾಶಿವ ರಾಮಚಂದ್ರ ಗೌಡ ಸಲಹೆ ನೀಡಿದರು.