
ಜ.12ರಂದು ಸ್ವಾಮಿ ವಿವೇಕಾನಂದ ದಿನಾಚರಣೆ ಅಂಗವಾಗಿ ರಾಷ್ಟ್ರೀಯ ಯುವ ದಿನವನ್ನಾಗಿ ಆಚರಣೆ ಮಾಡಲಾಗುತ್ತದೆ. ಈ ಹಿನ್ನೆಲೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಶ್ರೀ ಕೊಂಗಾಡಿಯಪ್ಪ ಪಿ.ಯು ಮತ್ತು ಪದವಿ ಕಾಲೇಜಿನ N. C. C. ವಿದ್ಯಾರ್ಥಿಗಳು ಹಾಗೂ 5 ಕರ್ನಾಟಕ ಬೆಟಲಿಯನ್ NCC ವತಿಯಿಂದ ಜ.5ರ ಭಾನುವಾರ ಬೆಳಗ್ಗೆ 10ಗಂಟೆಗೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮಾದಗೊಂಡನಹಳ್ಳಿಯಿಂದ ನಾಗರಕೆರೆವರೆಗೆ ಸುಮಾರು ಕಿಮೀ ಸೈಕಲ್ ಜಾಥಾವನ್ನು ಆಯೋಜಿಸಲಾಗಿದೆ ಎಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಸದಾಶಿವ ರಾಮಚಂದ್ರ ಗೌಡ ತಿಳಿಸಿದ್ದಾರೆ.
ಶ್ರೀ ಕೊಂಗಾಡಿಯಪ್ಪ ಪಿ.ಯು ಕಾಲೇಜಿನ ಪ್ರಾಂಶುಪಾಲ ಆನಂದ ಮೂರ್ತಿ, ಪದವಿ ಕಾಲೇಜಿನ ಪ್ರಾಂಶುಪಾಲ ಪಂಚಾಕ್ಷರಯ್ಯ, NCC ಲೆಫ್ಟಿನೆಂಟ್ ಪ್ರವೀಣ್, ಡಾ.ರಾಜಕುಮಾರ್, ಮತ್ತು ಶ್ರೀಕಾಂತ್ ಹಾಗೂ 5 ಕರ್ನಾಟಕ NCC ಬೆಟಲಿಯನ್ ಅಧಿಕಾರಿಗಳು ಭಾಗವಸಲಿದ್ದಾರೆ ಎಂದು ತಿಳಿಸಿದ್ದಾರೆ.