ರಾಷ್ಟ್ರೀಯ ಪುರುಷರ ಸೀನಿಯರ್ಸ್ ಕಬ್ಬಡಿ ಚಾಂಪಿಯನ್ ಶಿಪ್ ಗೆ ದೊಡ್ಡಬಳ್ಳಾಪುರದ ಇಬ್ಬರು ಪ್ರತಿಭೆಗಳ ಆಯ್ಕೆ

ಚಂಡೀಘಡದಲ್ಲಿ ನಡೆಯಲಿರುವ 72ನೇ ರಾಷ್ಟ್ರೀಯ ಪುರುಷರ ಸೀನಿಯರ್ಸ್ ಕಬ್ಬಡಿ ಚಾಂಪಿಯನ್ ಷಿಪ್ ನಲ್ಲಿ ದೊಡ್ಡಬಳ್ಳಾಪುರ ನಗರದ ಉದಯೋನ್ಮುಖ ಪ್ರತಿಭೆಗಳಾದ ಹರೀಶ್.ಆರ್ ಮತ್ತು ಭರತ್ ಕುಮಾರ್. ಎನ್ ರವರು ಕರ್ನಾಟಕ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ.

ಅಯ್ಕೆಯಾದ ಕಬ್ಬಡಿ ಕ್ರೀಡಾಪಟುಗಳಿಗೆ ತಾಲ್ಲೂಕಿನ ಅವಿಘ್ನ ಕಬ್ಬಡ್ಡಿ ಕ್ಲಬ್ ಶುಭಕೋರಿದೆ.

ಅಮೇಚೂರು ಕಬ್ಬಡ್ಡಿ ಫೆಡರೇಷನ್ ಆಫ್ ಇಂಡಿಯಾ ವತಿಯಿಂದ ಜುಲೈ 25 ರಿಂದ 28ರ ವರೆಗೆ ಚಂಢೀಘಡದಲ್ಲಿ ಚಾಂಪಿಯನ್ ಷಿಪ್ ನಡೆಯಲಿದೆ. ಈ ಚಾಂಪಿಯನ್ ಶಿಪ್ ನಲ್ಲಿ ಹರೀಶ್ ಹಾಗು ಭರತ್ ಕುಮಾರ್ ರವರು ತಮ್ಮ ಉತ್ತಮ ಪ್ರತಿಭೆಯನ್ನು ಪ್ರದರ್ಶಿಸಿ ರಾಜ್ಯದ ತಂಡವನ್ನು ಜಯಶೀಲರಾಗಿ ಹೊರಹೊಮ್ಮುವಂತೆ ಬಿ.ಕೆ ನಾರಾಯಣಸ್ವಾಮಿ ಸೇರಿದಂತೆ ತಾಲೂಕಿನ ಜನತೆ ಶುಭಕೋರಿದ್ದಾರೆ.

Leave a Reply

Your email address will not be published. Required fields are marked *

error: Content is protected !!