ರಾಮಜನ್ಮ ಭೂಮಿಯಲ್ಲಿ ಬಸಪ್ಪನಿಗೆ ಅದ್ದೂರಿ ಸ್ವಾಗತ: ಅಯೋಧ್ಯೆ ರಾಮನ ದರ್ಶನ ಪಡೆದು ಪುನೀತನಾದ ಬಸಪ್ಪ…!

ಕರ್ನಾಟಕ ರಾಜ್ಯದ ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲೂಕಿನ ಬಸಪ್ಪ ಉತ್ತರಪ್ರದೇಶದ ರಾಮಜನ್ಮ‌ ಭೂಮಿಯಲ್ಲಿರುವ ಆಯೋಧ್ಯೆ ರಾಮನ ದರ್ಶನ ಪಡೆದು ಪುನೀತನಾಗಿದ್ದಾನೆ.

ತಾಲೂಕಿನ ಪೆರಮಗೊಂಡನಹಳ್ಳಿ ಗ್ರಾಮದಲ್ಲಿರುವ ದಿನ್ನೆ ಆಂಜನೇಯಸ್ವಾಮಿ ದೇವಾಲಯದಿಂದ ಆಯೋಧ್ಯೆ ರಾಮನ‌ ದರ್ಶನ ಪಡೆಯಲು ಬಸಪ್ಪ ಎಂದೇ ಹೆಸರು ಪಡೆದಿರುವ ಎತ್ತು ಸೆ.19ರ ಗುರುವಾರದಂದು ಪಯಣ ಬೆಳೆಸಿತು.‌

ದೊಡ್ಡಬಳ್ಳಾಪುರದಿಂದ ಉತ್ತರ ಪ್ರದೇಶದ ಅಯೋಧ್ಯೆಗೆ ಸುಮರು 2ಸಾವಿರ ಕಿಲೋ ಮೀಟರ್ ದೂರವಿದ್ದು, ಹಗಲು ರಾತ್ರಿ ಎನ್ನದೇ ರಾಮನ ದರ್ಶನ ಪಡೆಯಲು ಬಸಪ್ಪ ಪಯಣ ಬೆಳೆಸಿತ್ತು.

ಬಸಪ್ಪನ ಪ್ರಯಾಣಕ್ಕಾಗಿಯೇ ಪ್ರತ್ಯೇಕವಾಗಿ ಬಸ್ಸೊಂದನ್ನು ತಯಾರು ಮಾಡಿಸಲಾಗಿತ್ತು. ಆ ಬಸ್ಸಿನಲ್ಲಿ ಪಯಣ ಬೆಳೆಸಿ ಇದೀಗ ರಾಮನ ದರ್ಶನ ಪಡೆದು ಜನ್ಮ ಪಾವನ ಮಾಡಿಕೊಂಡಿದ್ದಾನೆ. ಅದೇರೀತಿ ರಾಮ ಸೇತು ಕಲ್ಲನ್ನು ಸಹ ಅಲ್ಲಿನ ಆಡಳಿತ ಮಂಡಳಿಗೆ ಒಪ್ಪಿಸಲಾಯಿತು. ಬಸಪ್ಪನಿಗೆ ಮರ್ಯಾದಾ ಪುರುಷ ರಾಮನ ದರ್ಶನ ಮಾಡಿಸಲು ವಾಸುದೇವಾ ಚಾರ್ ಅವರು ಜವಾಬ್ದಾರಿ ಹೊತ್ತಿದ್ದರು. ಕಳೆದು ಒಂದು ವರ್ಷದಿಂದ ಸಕಲ ಸಿದ್ಧತೆ ನಡೆಸಲಾಗಿತ್ತು ಎನ್ನಲಾಗಿದೆ.

ಅಯೋಧ್ಯೆ ರಾಮನ ದೇವಾಲಯದ ಆಡಳಿತ ಮಂಡಳಿ ಬಸಪ್ಪನಿಗೆ ಭವ್ಯ ಸ್ವಾಗತ ಕೋರಿ ದೇವರ ದರ್ಶನಕ್ಕೆ ಅನುವು ಮಾಡಿಕೊಟ್ಟಿತು. ಬಸಪ್ಪನಿಗೆ ಸುಮಾರು 80 ರೀತಿಯ ವಿವಿಧ ತಿಂಡಿ‌ ತಿನಿಸುಗಳನ್ನು ನೀಡಿ ಗೌರವಿಸಲಾಯಿತು ಎಂದು ವಾಸುದೇವಾ ಚಾರ್ ತಿಳಿಸಿದ್ದಾರೆ.

ಇದೇ ಮೊದಲ ಬಾರಿಗೆ ರಾಮಸೇತು ಕಲ್ಲು ಸಹ ಜೊತೆಯಲ್ಲಿ ಅಯೋಧ್ಯೆ ರಾಮನ ದರ್ಶನಕ್ಕಾಗಿ ದಿನ್ನೆ ಆಂಜನೇಯ ಸ್ವಾಮಿಯ ಪ್ರತ್ಯಂಗಿರ ಮಹಾಕಾಳಿ ಬಸಪ್ಪ‌ ಎಂಬ ಹೆಸರಿನಲ್ಲಿರುವ ಎತ್ತು ಕರೆತಂದಿದ್ದೇವು. ದೇವರ ದರ್ಶನಕ್ಕೂ ಮೊದಲು ಅಯೋಧ್ಯೆಯ ಗಂಗಾ ನದಿಯಲ್ಲಿ ಬಸಪ್ಪನಿಗೆ ಗಂಗಾ ಸ್ನಾನ ಮಾಡಿಸಿ ರಾಮನ ದರ್ಶನ ಮಾಡಿಸಲಾಯಿತು. ಇದಕ್ಕೆ ಸಕಲ ಸಿದ್ಧತೆ ನಡೆಸಲಾಗಿತ್ತು ಎಂದು ಹೇಳಿದರು.

ರಾಮನ ದರ್ಶನ ನಂತರ ಕಾಶಿ ವಿಶ್ವೇಶ್ವರ ಸನ್ನಿಧಿ, ವರಾಹಿ, ರಾಮಜನ್ಮಭೂಮಿ, ಗಂಡಕ್ಕಿ ನದಿ, ಗಯಾ ಸೇರಿದಂತೆ ಇನ್ನಿತರ ಪುಣ್ಯಕ್ಷೇತ್ರಗಳಿಗೆ ಭೇಟಿ‌ ನೀಡಲಾಗುವುದು ಎಂದರು.

Ramesh Babu

Journalist

Recent Posts

ಸ್ಪರ್ಧಾತ್ಮಕ ಜಗತ್ತಿಗೆ ಮಕ್ಕಳನ್ನು ಅಣಿಗೊಳಿಸಿ- ರಾಜ್ಯ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ವಿಜೇತ ನೀಲಕಂಠ ಗವಾಂಕರ್ ಸಲಹೆ

ಜಗತ್ತು ದಿನದಿಂದ ದಿನಕ್ಕೆ ವೇಗವಾಗಿ ಬದಲಾಗುತ್ತಿದ್ದು, ಹೆಚ್ಚುತ್ತಿರುವ ಸ್ಪರ್ಧೆಯನ್ನು ಎದುರಿಸುವ ಸಾಮರ್ಥ್ಯವನ್ನು ಮಕ್ಕಳಲ್ಲಿ ಬೆಳೆಸಲು ಪೋಷಕರು ಹಾಗೂ ಶಿಕ್ಷಕರು ಒಟ್ಟಾಗಿ…

16 hours ago

ಭಾರತೀಯರ ಆಹಾರ ವೈವಿಧ್ಯತೆ…. ರುಚಿ – ತೃಪ್ತಿ – ಸಮಾನತೆ…..

ಭಾರತೀಯರ ಆಹಾರ ವೈವಿಧ್ಯತೆ..... ರುಚಿ - ತೃಪ್ತಿ - ಸಮಾನತೆ..... ಅಡುಗೆ ಅನುಭವದ ಮೂಸೆಯೊಳಗೆ ಬೆಳೆದು ಬರುವ ವಿಜ್ಞಾನವೆಂಬ ಕಲೆ....…

1 day ago

ಎಲೆಕ್ಟ್ರಾನಿಕ್ ಜಕಾರ್ಡ್ ಖರೀದಿ ಯೋಜನೆ: ಸಹಾಯಧನಕ್ಕಾಗಿ ಅರ್ಜಿ ಆಹ್ವಾನ

2026-27 ಸಾಲಿಗೆ ಕೈಮಗ್ಗ ಮತ್ತು ಜವಳಿ ಇಲಾಖೆ ವತಿಯಿಂದ ಎಲೆಕ್ಟ್ರಾನಿಕ್ ಜಕಾರ್ಡ್ ಖರೀದಿ ಯೋಜನೆಯಡಿ ಸಹಾಯಧನಕ್ಕಾಗಿ ಅರ್ಹ ಫಲಾನುಭವಿಗಳಿಂದ ಅರ್ಜಿಗಳನ್ನ…

2 days ago

ಕೊಡಿಪಾಳ್ಯ ಬಳಿ ಕ್ಯಾಂಟರ್ ಪಲ್ಟಿ: ತಪ್ಪಿದ ಭಾರೀ ಅನಾಹುತ

ದೊಡ್ಡಬಳ್ಳಾಪುರ: ನೆಲಮಂಗಲ–ದೊಡ್ಡಬಳ್ಳಾಪುರ ಮುಖ್ಯ ರಸ್ತೆಯ ಕೊಡಿಪಾಳ್ಯ ಸಮೀಪ ಕ್ಯಾಂಟರ್‌ವೊಂದು ಪಲ್ಟಿಯಾಗಿ ಬಿದ್ದ ಘಟನೆ ನಡೆದಿದ್ದು, ಅದೃಷ್ಟವಶಾತ್ ಭಾರೀ ಅನಾಹುತ ತಪ್ಪಿದೆ.…

2 days ago

ಮೊಬೈಲ್ ಕಳೆದುಹೋದರೆ ಗಾಬರಿ ಬೇಡ: ತಕ್ಷಣದ ಕ್ರಮವೇ ರಕ್ಷಣೆ: ಮೊಬೈಲ್‌ ಕಳೆದುಹೋದ 10 ನಿಮಿಷಗಳಲ್ಲಿ ಮಾಡಬೇಕಾದ 7 ಕೆಲಸಗಳು ಇಲ್ಲಿವೆ ನೋಡಿ…

ಬೆಂಗಳೂರು ಗ್ರಾಮಾಂತರ: ಮೊಬೈಲ್‌ ಫೋನ್‌ ಕಳೆದುಹೋಗುವುದು ಅಥವಾ ಕಳ್ಳತನವಾಗುವುದು ಇಂದಿನ ಡಿಜಿಟಲ್‌ ಯುಗದಲ್ಲಿ ಆತಂಕದ ಸಂಗತಿಯಾಗಿದೆ. ಮೊಬೈಲ್‌ ಕೇವಲ ಸಂಪರ್ಕ…

2 days ago

ಎಸ್ಐಆರ್ ಅಕ್ರಮ ಹಾಗೂ ಬರ ಪರಿಹಾರ ವಿಳಂಬ: ಕೇಂದ್ರ ಮತ್ತು ವಿಪಕ್ಷದ ವಿರುದ್ಧ ಸಚಿವ ಚಲುವರಾಯಸ್ವಾಮಿ ಆಕ್ರೋಶ

ವಿರೋಧ ಪಕ್ಷದ ನಾಯಕನಾಗಿ ಜವಾಬ್ದಾರಿಯಿಂದ ನಡೆದುಕೊಳ್ಳಬೇಕು. ಅದನ್ನು ಬಿಟ್ಟು ಎಸ್‌ಐಆರ್‌ನಲ್ಲಿ ನಡೆದಿರುವ ಅಕ್ರಮಗಳ ಪರ ಮಾತನಾಡುವವರಿಗೆ ಯಾವ ಮರ್ಯಾದೆ ಇದೆ…

2 days ago