ರಾತ್ರೋರಾತ್ರಿ ಮನಗೆ ನುಗ್ಗಿ ಮಹಿಳೆ ಮಕ್ಕಳು ಎನ್ನದೆ ಮನೆಯೊಳಗೆ ನುಗ್ಗಿ ದಾಂಧಲೆ: ಹಲ್ಲೆ ಮಾಡುತ್ತಿರುವ ದೃಶ್ಯ ಮೊಬೈಲ್ ನಲ್ಲಿ ಸೆರೆ

ಮನೆ ಮಂದಿ ಎಲ್ಲರು ಊಟ ಮಾಡಿ, ನೆಮ್ಮದಿಯಿಂದ ನಿದ್ದೆಗೆ ಜಾರಿದ್ದರು, ಮಧ್ಯರಾತ್ರಿ ಸುಮಾರು 11 ಆಗುತ್ತಿದ್ದಂತೆ ಮನೆಯ ಬಳಿ ಜೋರಾದ ಶಬ್ಧ ಕೇಳುತ್ತಿತ್ತು, ಸ್ವಲ್ಪ ಸಮಯದ ನಂತರ ಮನೆ ಬಾಗಿಲು ಬಡಿಯಲು ಪ್ರಾರಂಭ ಮಾಡಿದರು, ಯಾರು ಎಂದು ಬಾಗಿಲು ತೆಗದಿದ್ದೇ ತಡ ಮಹಿಳೆ ಮಕ್ಕಳು ಎನ್ನದೇ ಹಲ್ಲೆ ಮಾಡಿದ್ದಾರೆ. ಏಕೆ, ಯಾರಿಂದ, ಯಾರಿಗೆ ಹಲ್ಲೆ ಆಗಿದೆ ಎಂಬ ಕಂಪ್ಲೀಟ್ ವರದಿ ಇಲ್ಲಿದೆ ನೋಡಿ…

ಹೌದು, ಮನೆಯ ಮುಂದೆ ಚೆಲ್ಲಾಪಿಲ್ಲಿಯಾಗಿ ಬಿದ್ದಿರುವ ಬಡಿಗೆಗಳು, ಮನೆಯ ತುಂಬೆಲ್ಲಾ ಚೆಲ್ಲಾಪಿಲ್ಲಿಯಾಗಿ ಬಿದ್ದಿರುವ ಬಳೆಯ ಚೂರುಗಳು, ಈ ಎಲ್ಲಾ  ದೃಶ್ಯಗಳು ಕಂಡು ಬಂದಿದ್ದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ಮೇಲಿನ ನಾಯಕರಂಡನಹಳ್ಳಿ ಬಳಿ. ಹೌದು ರಾತ್ರಿ ಮಲಗಿದ್ದ‌ ಕುಟುಂಬದ ಮೇಲೆ ಏಕಾಏಕಿ 20ಕ್ಕೂ ಹೆಚ್ಚು ಜನರು ಮನೆಗೆ ನುಗ್ಗಿ ಮನಸ್ಸೋಯಿಚ್ಚೆ ಹಲ್ಲೆ‌ ಮಾಡಿದ್ದಾರೆ.  ಗೋಪಾಲ್ ನಾಯಕ್ ಎಂಬ ವ್ಯಕ್ತಿ ಗುಂಪು ಕಟ್ಟಿಕೊಂಡು ಏಕಾಏಕಿ ಅಶ್ವತಮ್ಮ ಮತ್ತು ಸುಬ್ರಮಣಿ ಎಂಬುವವರ ಮೇಲೆ ಹಲ್ಲೆ ಮಾಡಿದ್ದಾರೆ.

ಇನ್ನೂ, ಇವರಿಬ್ಬರ ಜಗಳಕ್ಕೆ ಕಾರಣವಾಗಿದ್ದು ಜಮೀನಿಗೆ ಓಡಾಡುವ ರಸ್ತೆಯ ವಿಚಾರಕ್ಕೆ. ಗೋಪಾಲ್  ನಾಯಕ್ ಅವರ ಜಮೀನಿಗೆ ರಸ್ತೆ ಸಮಸ್ಯೆಯಿದ್ದು, ಸುಮಾರು ದಿನಗಳಿಂದ ವ್ಯಾಜ್ಯ ನಡೆಯುತ್ತಿತ್ತು. ಈ ಹಿಂದೆಯೂ ಕೂಡ ಇದೇ ವಿಚಾರಕ್ಕೆ ದೂರು ಕೂಡ ದಾಖಲಾಗಿತ್ತು. ಇದೇ ದ್ವೇಷವನ್ನು ಇಟ್ಟುಕೊಂಡು ಈಗ ರಾತ್ರೋರಾತ್ರಿ ಮನೆಗೆ ನುಗ್ಗಿ ದೌರ್ಜನ್ಯವನ್ನು ಮಾಡುತ್ತಿದ್ದಾರೆ ಎನ್ನಲಾಗಿದೆ. ಮಹಿಳೆ ಮಕ್ಕಳು ಎನ್ನದೆ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಲಾಗಿದೆ ಎಂದು ಸಂತ್ರಸ್ತರು ಆರೋಪಿಸಿದ್ದಾರೆ. ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಇನ್ಸ್ಪೆಕ್ಟರ್ ಸಾಧಿಕ್ ಪಾಷಾ ಸ್ಥಳ ಪರಿಶೀಲನೆ ಮಾಡಿದ್ದಾರೆ. ಗಲಾಟೆಯಿಂದಾಗಿ ಅಶ್ವತಮ್ಮ ಮತ್ತು ಸುಬ್ರಮಣಿಗೆ ಗಾಯವಾಗಿದ್ದು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಒಟ್ಟಾರೆ ಕೂತು ಮಾತನಾಡಿಕೊಂಡು ಬಗೆ ಹರಿಸಿಕೊಳ್ಳಬಹುದಾದ ಸಮಸ್ಯೆಗೆ, ಜಗಳ ಮಾಡಿಕೊಂಡು ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.

Leave a Reply

Your email address will not be published. Required fields are marked *

error: Content is protected !!