ಫೆ.23ರಂದು ರಾತ್ರಿ ಸುಮಾರು 8-30 ಗಂಟೆಯಲ್ಲಿ ತುಮಕೂರಿನ ತಿಲಕ್‌ಪಾರ್ಕ ಪೊಲೀಸ್ ಠಾಣಾ ವ್ಯಾಪ್ತಿಯ ಗಂಗಸಂದ್ರ ರಸ್ತೆಯಲ್ಲಿ ಯಾರೋ ಕೆಲವು ವ್ಯಕ್ತಿಗಳು ಮಾರಕಾಸ್ತ್ರಗಳನ್ನು ಹಿಡಿದುಕೊಂಡು ರಸ್ತೆಯಲ್ಲಿ ಬರುವ ಜನರನ್ನು ಅಡ್ಡಗಟ್ಟುತ್ತಿದ್ದಾರೆಂದು ತಿಲಕ್‌ಪಾರ್ಕ್ ಪೊಲೀಸ್ ಠಾಣಾ ಪಿ.ಎಸ್.ಐ ರವರಿಗೆ ಬಂದ ಮಾಹಿತಿ ಮೇರೆಗೆ ತತಕ್ಷಣ ಸ್ಥಳಕ್ಕೆ ಹೋಗಿ ಅವರನ್ನೆಲ್ಲಾ ವಶಕ್ಕೆ ಪಡೆದು ಠಾಣೆಗೆ ಕರೆದುಕೊಂಡು ವಿಚಾರಣೆ ನಡೆಸಿದಾಗ ಆರೋಪಿತರು ಈ ಹಿಂದೆ ಫೆ.19ರಂದು ರಾತ್ರಿ ಜಯನಗರ ಪೊಲೀಸ್ ಠಾಣಾ ವ್ಯಾಪ್ತಿಯ ಕುಣಿಗಲ್ ಜಂಕ್ಷನ್ ಬಳಿ ರಿಂಗ್ ರಸ್ತೆಯಲ್ಲಿ ಲಾರಿಯನ್ನು ನಿಲ್ಲಿಸಿಕೊಂಡು ಮಲಗಿದ್ದ ಚಾಲಕನಿಗೆ ಚಾಕುವಿನಿಂದ ತಿವಿದು ಆತನ ಬಳಿ ಇದ್ದ ವಡವೆ, ನಗದು ಹಣ ಮತ್ತು ಮೊಬೈಲ್ ಗಳನ್ನು ಸುಲಿಗೆ ಮಾಡಿರುವುದಾಗಿ ಹಾಗೂ ಫೆ.17ರಂದು ತಿಲಕ್ ಪಾರ್ಕ ಪೊಲೀಸ್ ಠಾಣೆಯ ವ್ಯಾಪ್ತಿಯ ಗೋವಿಂದನಗರದಲ್ಲಿ ಹೊಸದಾಗಿ ರೈಲ್ವೆ ಕಾಮಗಾರಿ ನಡೆಯುತ್ತಿದ್ದ ಸ್ಥಳದಲ್ಲಿ ಮೊಬೈಲ್ ಫೋನ್‌ಗಳನ್ನು ರೈಲ್ವೆ ಕಾಮಗಾರಿಯ ಉಪಕರಣಗಳನ್ನು ಕಳವು ಮಾಡಿಕೊಂಡು ಹೋಗಿರುವುದಾಗಿ ವಿಚಾರಣೆಯಿಂದ ತಿಳಿದು ಬಂದಿರುತ್ತದೆ.
ಆರೋಪಿಗಳ ಹೆಸರು
1. ಫಯಾಜ್
2. ಮಂಜುನಾಥ @ ಮಂಜ
3. ಅಪ್ರೋಸ್ ಪಾಷ @ ಅಪ್ರೋಸ್
4. ಸುಹೇಲ್ ಪಾಷ @ ವೇಲು
5. ಖಾದರ್
ಈ ಮೇಲ್ಕಂಡ ಆರೋಪಿತರವರುಗಳಿಂದ 1,20,000/- ರೂ ಬೆಲೆಬಾಳುವ ರೈಲ್ವೆ ಟ್ರ್ಯಾಕ್ ಕಾಮಗಾರಿ ಉಪಕರಣಗಳು. 1,39,600/- ರೂ. ಬೆಲೆಬಾಳುವ 17 ಗ್ರಾಂ 450 ಮಿಲಿ ತೂಕದ ಚಿನ್ನದ ಕೊರಳ ಚೈನು, 2,500/- ರೂಪಾಯಿ ಬೆಲೆಬಾಳುವ 28 ಗ್ರಾಂ 870 ಮಿಲಿ ತೂಕದ ಬೆಳ್ಳಿಯ ಕೈ ಕಡಗ, 3000/- ಬೆಬೆ ಬಾಳುವ ಒಂದು ಕೈಗಡಿಯಾರ ಹಾಗೂ 30,000/- ರೂ ಬೆಲೆ ಬಾಳುವ 6 ಮೊಬೈಲ್ ಪೋನ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.