ರಾತ್ರಿ ವೇಳೆ ದೊಡ್ಡಬಳ್ಳಾಪುರ ನಗರದ ವಿವಿಧ ಅಂಗಡಿಗಳಿಗೆ ಲಗ್ಗೆ ಇಡುವ ಕಳ್ಳರು. ಕಳ್ಳರ ಹಾವಳಿಯಿಂದ ಭಯಭೀತರಾಗಿರುವ ವ್ಯಾಪಾರಿಗಳು, ಅಂಗಡಿ ಮಾಲೀಕರು.
ದೊಡ್ಡಬಳ್ಳಾಪುರ ನಗರದ ಡಿ.ಕ್ರಾಸ್ ಹಾಗೂ ಅಯ್ಯಪ್ಪ ಸ್ವಾಮಿ ದೇವಸ್ಥಾನದ ರಸ್ತೆಯಲ್ಲಿನ ಫರ್ನೀಚರ್ಸ್ ಹಾಗೂ ಟೈಲ್ಸ್ ಅಂಗಡಿಗಳಲ್ಲಿ ಕಳ್ಳತನ ಯತ್ನ ಕಳೆದ ರಾತ್ರಿ ನಡೆದಿದೆ.
ಅಂಗಡಿಗಳ ಮೇಲ್ಛಾವಣಿಯ ಶೀಟ್ ಗಳನ್ನು ಕೊರೆದು ಒಳ ಹೋಗಿ ಹಣ, ವಸ್ತುಗಳನ್ನು ಎಗರಿಸಲು ಕಳ್ಳರು ಯತ್ನಿಸಿದ್ದಾರೆ.
ರಾತ್ರಿ ವೇಳೆ ಪೊಲೀಸ್ ಗಸ್ತು ಹೆಚ್ಚಿಸಬೇಕು. ಕೂಡಲೇ ಕಳ್ಳರ ಜಾಡು ಹಿಡಿದು ಬಂಧಿಸಿ, ಇನ್ನುಮುಂದೆ ಯಾವುದೇ ಕಳ್ಳತನದ ಕೃತ್ಯಗಳು ಮರುಕಳಿಸದಂತೆ ಎಚ್ವರವಹಿಸಬೇಕು ಎಂದು ಅಂಗಡಿ ಮಾಲೀಕರು, ವ್ಯಾಪಾರಿಗಳು ಪೊಲೀಸ್ ಇಲಾಖೆಯಲ್ಲಿ ಮನವಿ ಮಾಡಿದ್ದಾರೆ.
ದೊಡ್ಡಬಳ್ಳಾಪುರ ನಗರ ಪೊಲೀಸ್ ಠಾಣಾ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ….
ದೊಡ್ಡಬಳ್ಳಾಪುರ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ….