ದೊಡ್ಡಬಳ್ಳಾಪುರ: ರಾಜ್ಯ ಸರ್ಕಾರಿ ನೌಕರರ ಸಂಘದ ತಾಲ್ಲೂಕು ಘಟಕದ 34 ನಿರ್ದೇಶಕ ಸ್ಥಾನಗ ಪೈಕಿ 27 ಸ್ಥಾನಗಳಿಗೆ ಅವಿರೋಧ ಆಯ್ಕೆಯಾಗಿದ್ದು, ಉಳಿದ 7 ಸ್ಥಾನಗಳಿಗೆ ಸೋಮವಾರ ಚುನಾವಣ ಅಧಿಕಾರಿಗಳಾದ ಆರ್.ಸುರೇಶ್, ಅನಂತಕುಮಾರ್ ಅವರ ನೇತೃತ್ವದಲ್ಲಿ ಶಾಂತಿಯುತವಾಗಿ ಚುನಾವಣೆ ನಡೆಯಿತು.
ಬೆಳಿಗ್ಗೆ 9 ರಿಂದ ಸಂಜೆ 4 ಗಂಟೆವರೆಗೆ ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜು ಪ್ರೌಢ ಶಾಲಾ ವಿಭಾಗದಲ್ಲಿ ಚುನಾವಣೆ ನಡೆದು, 4 ಗಂಟೆ ನಂತರ ಮತಗಳ ಎಣಿಕೆ ನಡೆಯಿತು.ಸರ್ಕಾರಿ ಪ್ರಾಥಮಿಕ ಶಾಲಾ ವಿಭಾಗದ 4 ಸ್ಥಾನಗಳಿಗೆ ಸ್ಪರ್ಧಿಸಿದ್ದವರಲ್ಲಿ ಎಂ.ಎಸ್.ರಾಜಶೇಖರ್, ವಿ.ಧನಂಜಯ,ಎಂ.ಆರ್.ಕೇಶವಮೂರ್ತಿ,ಡಿ.ಶ್ರೀಧರ್ ಆಯ್ಕೆಯಾಗಿದ್ದಾರೆ. ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯ ಒಂದು ಸ್ಥಾನಕ್ಕೆ ನಡೆದ ಮತದಾನದಲ್ಲಿ ಸಿ.ಎಚ್.ರಾಮಚಂದ್ರಯ್ಯ, ಪದವಿ ಪೂರ್ವ ಹಾಗೂ ಪದವಿ ಕಾಲೇಜುಗಳ ವಿಭಾಗದಿಂದ ಎನ್.ಮಹೇಶ್, ಭೂ ಮಾಪನ ಇಲಾಖೆಯಿಂದ ಮಂಜುನಾಥ್ ಆಯ್ಕೆಯಾಗಿದ್ದಾರೆ.
ಅವಿರೋಧವಾಗಿ ಆಯ್ಕೆಯಾದವರು:
ಕೆ.ಎಂ.ಹರೀಶ್ ಕುಮಾರ್ (ಕೃಷಿ ಇಲಾಖೆ), ವಿ.ಸಿ.ನಾಗದೇವ(ಪಶುಪಾಲನಾ ಮತ್ತು ಪಶು ವೈದ್ಯ ಸೇವಾ ಇಲಾಖೆ)
ಬಿ.ವಿನೋದ, ಲಕ್ಷ್ಮೀನರಸಿಂಹಯ್ಯ, ಎಸ್.ಮನೋಜ (ಕಂದಾಯ ಇಲಾಖೆ)
ಎನ್.ಮಂಜುನಾಥ್ (ಲೋಕೋಪಯೋಗಿ ಇಲಾಖೆ)
ಪಿ.ಎನ್.ಪದ್ಮಾವತಿ(ಪಂಚಾಯತ್ ರಾಜ್ ಇಂಜಿನಿಯರಿಂಗ್)
ಎಂ.ಎನ್.ಚಿಕ್ಕೇಗೌಡ, ಟಿ.ಕೆ.ಪ್ರಕಾಶ್(ಸರ್ಕಾರಿ ಪ್ರೌಢ ಶಾಲಾ ವಿಭಾಗ)
ಎಸ್.ದಿವ್ಯ (ಪದವಿ ಕಾಲೇಜು ವಿಭಾಗ)
ವಿ.ಗೋವಿಂದಪ್ಪ (ಸಮಾಜ ಕಲ್ಯಾಣ ಇಲಾಖೆ)
ಎಲ್. ವೆಂಕಟೇಶ್(ಹಿಂದುಳಿದ ವರ್ಗಗಳ ಇಲಾಖೆ)
ಸಿ.ಆರ್.ಚಂದ್ರಕುಮಾರ (ಅರಣ್ಯ ಇಲಾಖೆ)
ಎಲ್.ಶ್ರೀನಿವಾಸಮೂರ್ತಿ, ಟಿ.ಆರ್.ಕುಮಾರ್, ಎಲ್.ಮಹದೇವನಾಯಕ್, ಟಿ.ಸಿ.ಅಮರೇಶ್(ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ)
ಶಶಿಕುಮಾರ್ (ತೋಟಗಾರಿಕಾ ಇಲಾಖೆ)
ಕೆ.ಎಸ್.ಸುಧಾ(ಖಜಾನೆ ಇಲಾಖೆ)
ಸುಶೀಲಕುಮಾರ್ ಕ್ಷತ್ರಿ (ನ್ಯಾಯಾಂಗ ಇಲಾಖೆ)
ಡಿ.ಬಿ.ಗಂಗಭೈರಪ್ಪ, ಬಿ.ಆರ್.ವೀಣಾ(ಗ್ರಾಮೀಣಾಭಿವೃದ್ಧಿ ಪಂಚಾಯಿತ್ ರಾಜ್ ಇಲಾಖೆ)
ಇ.ರವಿಕುಮಾರ್(ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ)
ಎಚ್.ನರಸಿಂಹಮೂರ್ತಿ(ಆಹಾರ ಮತ್ತು ನಾಗರೀಕ ಸರಬರಾಜು)
ಅಬಿದಾ ಅಂಜುಮ್(ಕೃಷಿ ಉತ್ಪನ್ನ ಮಾರುಕಟ್ಟೆ ಇಲಾಖೆ)
ಬಿ.ವಿ.ರಾಘವೇಂದ್ರ(ಅಬಕಾರಿ ಮತ್ತು ವಾಣಿಜ್ಯ ತೆರಿಗಳ ಇಲಾಖೆ)
ಆರ್.ರಾಮಾಂಜನಯ್ಯ(ಸಹಕಾರ ಮತ್ತು ಸಹಕಾರ ಸಂಘಗಳ ಲೆಕ್ಕ ಪರಿಶೋಧನ ಇಲಾಖೆ