ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲ್ಲೂಕಿನ ಮಧುರೆ ಗ್ರಾಮದ ಪುಷ್ಪಲತಾ ಸೋಮಶೇಖರ್ ರವರನ್ನು ರಾಜ್ಯ ಮಟ್ಟದ ಜಾಗೃತಿ ಸಮಿತಿ ಸದಸ್ಯರನ್ನಾಗಿ ನೇಮಕ ಮಾಡಲಾಗಿದೆ.
ಈ ಹಿಂದೆ ಇದ್ದ ರೇವತಿ ಅನಂತರಾಮುರವರನ್ನು ಬದಲಾವಣೆ ಮಾಡಿ ಈ ಸ್ಥಳಕ್ಕೆ ನೂತನವಾಗಿ ಮಧುರೆ ಗ್ರಾಮದ ಪುಷ್ಪಲತಾ ಸೋಮಶೇಖರ್ ರವರನ್ನು ನೇಮಕ ಮಾಡಲಾಗಿದೆ.
ಈ ಸಂದರ್ಭದಲ್ಲಿ ನೂತನ ಸದಸ್ಯರನ್ನು ಆಹಾರ ನಾಗರಿಕ ಸರಬರಾಜು ಗ್ರಾಹಕ ವ್ಯವಹಾರಗಳ ಸಚಿವ ಕೆ.ಎಚ್. ಮುನಿಯಪ್ಪ ಅಭಿನಂದಿಸಿದ್ದಾರೆ.
ಸಂದರ್ಭದಲ್ಲಿ ತಾಲ್ಲೂಕು ಗ್ಯಾರಂಟಿ ಯೋಜನಾ ಸಮಿತಿ ಸದಸ್ಯೆ ಮಂಜುಳಾ, ಹೊನ್ನಾವರ ಪಂಚಾಯತಿ ಸದಸ್ಯೆ ಅನಿತಾ ಗ್ಯಾರೆಂಟಿ ಯೋಜನಾ ಸದಸ್ಯ ತಿಮ್ಮರಾಯಗೌಡ ಸುಮತಿ ಮೀನಾ ಧಾನ್ವಿ ಸೋಮಶೇಖರ್ ಹಾಜರಿದ್ದರು.