
ರಾಜ್ಯದ ಪೊಲೀಸ್ ವ್ಯವಸ್ಥೆಯನ್ನು ಚುರುಕುಗೊಳಿಸಿ, ಆಡಳಿತದಲ್ಲಿ ಪಾರದರ್ಶಕತೆ ಮತ್ತು ದಕ್ಷತೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ರಾಜ್ಯದ ಎಲ್ಲಾ ಜಿಲ್ಲೆ ಮತ್ತು ನಗರ ಪೊಲೀಸ್ ಘಟಕಗಳ ಸಮಗ್ರ ತಪಾಸಣೆಗೆ 14 ಮಂದಿ ಹಿರಿಯ ಪೊಲೀಸ್ ಅಧಿಕಾರಿಗಳ ನೇಮಿಸಿ ಕರ್ನಾಟಕ ರಾಜ್ಯ ಪೊಲೀಸ್ ಮುಖ್ಯಸ್ಥರಾದ ಡಿಜಿ ಮತ್ತು ಐಜಿಪಿ ಡಾ.ಸಲೀಂ ಅವರು ಆದೇಶ ಮಾಡಿದ್ದಾರೆ.
ಡಿಜಿ ಮತ್ತು ಐಜಿಪಿ ಅವರ ಪರವಾಗಿ, ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರು (ಎಡಿಜಿಪಿ) ಮತ್ತು ಪೊಲೀಸ್ ಮಹಾನಿರೀಕ್ಷಕರ (ಐಜಿಪಿ) ಶ್ರೇಣಿಯ 14 ಹಿರಿಯ ಅಧಿಕಾರಿಗಳನ್ನು ಜಿಲ್ಲಾವಾರು ನೇಮಿಸಲಾಗಿದ್ದು, 2025 ರ ಅಕ್ಟೋಬರ್, ನವೆಂಬರ್ ಮತ್ತು ಡಿಸೆಂಬರ್ ತಿಂಗಳುಗಳಲ್ಲಿ ತಮಗೆ ವಹಿಸಲಾದ ಜಿಲ್ಲೆಗಳಿಗೆ ಭೇಟಿ ನೀಡಿ ಎರಡು ದಿನಗಳ ಕಾಲ ತಪಾಸಣೆ ನಡೆಸುವಂತೆ ನಿರ್ದೇಶನ ನೀಡಲಾಗಿದೆ.
ಅಧಿಕಾರಿಗಳು – ಪರಿಶೀಲನೆಗೆ ನೀಡಿದ ಜಿಲ್ಲೆಗಳು
ಅಲೋಕ್ ಕುಮಾರ್, ಎಡಿಜಿಪಿ ಬೆಳಗಾವಿ ನಗರ, ಬೆಂಗಳೂರು ಗ್ರಾಮಾಂತರ ಜಿಲ್ಲೆ
ಆರ್. ಹಿತೇಂದ್ರ, ಎಡಿಜಿಪಿ ಹುಬ್ಬಳ್ಳಿ-ಧಾರವಾಡ ನಗರ, ಬೆಳಗಾವಿ ಜಿಲ್ಲೆ
ಬಿ.ಕೆ. ಸಿಂಗ್, ಎಡಿಜಿಪಿ ಮಂಗಳೂರು ನಗರ, ಮಂಡ್ಯ ಜಿಲ್ಲೆ
ಪಿ. ಹರಿಶೇಖರನ್, ಎಡಿಜಿಪಿ ಕಲಬುರಗಿ ನಗರ, ದಾವಣಗೆರೆ ಜಿಲ್ಲೆ
ಎಸ್. ಮುರುಗನ್, ಎಡಿಜಿಪಿ ಉಡುಪಿ, ದಕ್ಷಿಣ ಕನ್ನಡ
ಸೌಮೇಂದು ಮುಖರ್ಜಿ ಕೋಲಾರ, ತುಮಕೂರು ಜಿಲ್ಲೆ
ಎಂ. ಚಂದ್ರಶೇಖರ್, ಎಡಿಜಿಪಿ ಮೈಸೂರು ನಗರ, ಹಾಸನ ಜಿಲ್ಲೆ
ಡಾ. ತ್ಯಾಗರಾಜನ್ ಕೆ, ಐಜಿಪಿ ಯಾದಗಿರಿ, ಗದಗ ಜಿಲ್ಲೆ
ಚಂದ್ರ ಗುಪ್ತ, ಐಜಿಪಿ ಹಾವೇರಿ, ಬಳ್ಳಾರಿ ಜಿಲ್ಲೆ
ವಿಕಾಶ್ ಕುಮಾರ್ ವಿಕಾಶ್ ಐಜಿಪಿ ಚಿಕ್ಕಮಗಳೂರು, ಧಾರವಾಡ ಜಿಲ್ಲೆ
ಸಂದೀಪ್ ಪಾಟೀಲ್, ಐಜಿಪಿ ಚಿಕ್ಕಬಳ್ಳಾಪುರ, ವಿಜಯನಗರ ಜಿಲ್ಲೆ
ಎನ್. ಸತೀಶ್ ಕುಮಾರ್ ಐಜಿಪಿ ಮೈಸೂರು ಜಿಲ್ಲೆ, ಕೊಡಗು ಜಿಲ್ಲೆ
ದೇವಜ್ಯೋತಿ ರೇ ಐಜಿಪಿ ಕಲಬುರಗಿ, ಬೀದರ್ ಜಿಲ್ಲೆ
ವೈ.ಎಸ್. ರವಿ ಕುಮಾರ್, ಐಜಿಪಿ ಕೊಪ್ಪಳ, ಕೆ.ಜಿ.ಎಫ್. ಜಿಲ್ಲೆ