ರಾಜ್ಯದಲ್ಲಿ ‘ಶಕ್ತಿ’ ಯೋಜನೆಗೆ ಭರ್ಜರಿ ರೆಸ್ಪಾನ್ಸ್

ರಾಜ್ಯ ಕಾಂಗ್ರೆಸ್ ಸರ್ಕಾರದ ಐದು ಗ್ಯಾರಂಟಿಗಳಲ್ಲಿ ಒಂದಾದ ಸರ್ಕಾರಿ ಸ್ವಾಮ್ಯದ ಬಿಎಂಟಿಸಿ, ಕೆಎಸ್ ಆರ್ ಟಿಸಿ ಸಾರಿಗೆ ಬಸ್ ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ಕಲ್ಪಿಸುವ ಶಕ್ತಿ ಯೋಜನೆಗೆ ರಾಜ್ಯ ಸರ್ಕಾರ ಜೂನ್.11ರ ಭಾನುವಾರ ಚಾಲನೆ ನೀಡಲಾಗಿತ್ತು.

ಗ್ಯಾರಂಟಿ ಯೋಜನೆ ಜಾರಿಯಾದ ದಿನದ ಭಾನುವಾರದಂದು ಮಧ್ಯಾಹ್ನ 1 ಗಂಟೆಯಿಂದ ರಾತ್ರಿ 12ರವರೆಗೆ ಒಟ್ಟು 5.71 ಲಕ್ಷ ಮಹಿಳೆಯರು ಪ್ರಯಾಣಿಸಿದ್ದರು. ಎರಡನೇ ದಿನವಾದ ಸೋಮವಾರಕ್ಕೆ ಸರಾಸರಿ 41. 34 ಲಕ್ಷ ಮಹಿಳೆಯರು ಉಚಿತವಾಗಿ ಪ್ರಯಾಣಿಸಿದ್ದಾರೆ.

ಮೂರು ದಿನದಲ್ಲಿ ಒಟ್ಟು 98,58,518 ಮಹಿಳೆಯರ ಸಂಚಾರ ಮಾಡಿದ್ದಾರೆ. ಮೂರು ದಿನಗಳ ಟಿಕೆಟ್ ಮೌಲ್ಯ 21,05,78,503 ರೂಪಾಯಿ ಆಗಿದೆ.

ಶಕ್ತಿ ಯೋಜನೆ ಚಾಲನೆಯಾದ ಜೂ. 11ರ ಮಧ್ಯಾಹ್ನ 1 ರಿಂದ ಮಧ್ಯರಾತ್ರಿ 12 ರವರೆಗೂ 5,71,023 ಮಹಿಳೆಯರ ಸಂಚಾರ – ಟಿಕೆಟ್ ಮೌಲ್ಯ 1,40,22,878 ರೂಪಾಯಿ.

ಜೂ.12ರಂದು ಒಟ್ಟು ಪ್ರಯಾಣಿಕರ ಸಂಖ್ಯೆ- 1,03,67,039 , ಮಹಿಳಾ ಪ್ರಯಾಣಿಕರ ಸಂಖ್ಯೆ – 41,34,726 , ಟಿಕೆಟ್ ಮೌಲ್ಯ – 8,83,53,434 ರೂಪಾಯಿ

ಜೂ.13ರಂದು ರಾಜ್ಯಾದ್ಯಂತ ಒಟ್ಟು ಪ್ರಯಾಣಿಕರ ಸಂಖ್ಯೆ – 1,16,66,621 , ಮಹಿಳೆಯರ ಸಂಖ್ಯೆ – 51,52,769 , ಟಿಕೆಟ್ ಮೌಲ್ಯ – 10,82,02,191 ಆಗಿದೆ.

Leave a Reply

Your email address will not be published. Required fields are marked *