Categories: ಹವಾಮಾನ

ರಾಜ್ಯದಲ್ಲಿ ಮಳೆ ಅಬ್ಬರದ ಮುನ್ಸೂಚನೆ: ಮುಂದಿನ 4–5 ದಿನ ಭಾರೀ ವರ್ಷಧಾರೆ, ಹಲವು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್

ಬೆಂಗಳೂರು: ಬಂಗಾಳ ಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತದ ಪರಿಣಾಮ ರಾಜ್ಯದಲ್ಲಿ ಮುಂದಿನ ನಾಲ್ಕೈದು ದಿನಗಳ ಕಾಲ ಭಾರೀ ಮಳೆಯಾಗುವ ಸಾಧ್ಯತೆಯಿದೆ. ರಾಜ್ಯದ ಹಲವು ಜಿಲ್ಲೆಗಳಲ್ಲಿ ಗುಡುಗು, ಮಿಂಚು ಸಹಿತ ಮಳೆಯಾಗುವ ಮುನ್ಸೂಚನೆ ನೀಡಿರುವ ಹವಾಮಾನ ಇಲಾಖೆ, ಕೆಲವು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಿದೆ.

ವಾಯುಭಾರ ಕುಸಿತದಿಂದ ಹವಾಮಾನದಲ್ಲಿ ಬದಲಾವಣೆ ಉಂಟಾಗಿದ್ದು, ದೇಶದ ಹಲವು ಮಹಾನಗರಗಳಲ್ಲಿ ಮಳೆಯ ಅಬ್ಬರ ಮುಂದುವರಿದಿದೆ. ಇದರ ಪರಿಣಾಮ ಕರ್ನಾಟಕದ ದಕ್ಷಿಣ ಒಳನಾಡು ಹಾಗೂ ಉತ್ತರ ಒಳನಾಡಿನ ಹಲವು ಜಿಲ್ಲೆಗಳಲ್ಲಿಯೂ ಮಳೆಯಾಗುವ ಸಾಧ್ಯತೆಯಿದೆ. ಕೆಲವು ಪ್ರದೇಶಗಳಲ್ಲಿ ಗುಡುಗು, ಮಿಂಚು ಸಹಿತ ಭಾರೀ ಮಳೆಯಾಗುವ ನಿರೀಕ್ಷೆಯಿದೆ.

ಬೆಂಗಳೂರು ಗ್ರಾಮಾಂತರದಲ್ಲೂ ಮಳೆ ಸಾಧ್ಯತೆ

ಹಾಸನ, ಮೈಸೂರು, ಚಾಮರಾಜನಗರ, ಮಂಡ್ಯ, ಬೆಂಗಳೂರು ನಗರ ಹಾಗೂ ಬೆಂಗಳೂರು ಗ್ರಾಮಾಂತರ ಸೇರಿದಂತೆ ದಕ್ಷಿಣ ಒಳನಾಡಿನ ಹಲವು ಜಿಲ್ಲೆಗಳಲ್ಲಿ ಗುಡುಗು, ಮಿಂಚು ಸಹಿತ ಭಾರೀ ಮಳೆಯಾಗುವ ಮುನ್ಸೂಚನೆ ಇದೆ. ಉತ್ತರ ಒಳನಾಡಿನ ಕೆಲವು ಜಿಲ್ಲೆಗಳಲ್ಲಿಯೂ ಭಾರೀ ಮಳೆಯಾಗುವ ಸಾಧ್ಯತೆಯಿದ್ದು, ಹವಾಮಾನ ಪರಿಸ್ಥಿತಿಗೆ ಅನುಗುಣವಾಗಿ ಎಚ್ಚರಿಕೆ ವಹಿಸುವಂತೆ ಸೂಚಿಸಲಾಗಿದೆ.

ಮೀನುಗಾರರಿಗೆ ಎಚ್ಚರಿಕೆ

ವಾಯುಭಾರ ಕುಸಿತದ ಹಿನ್ನೆಲೆಯಲ್ಲಿ ಕರಾವಳಿ ಭಾಗದಲ್ಲಿ ಸಮುದ್ರದ ಪರಿಸ್ಥಿತಿ ಪ್ರತಿಕೂಲವಾಗುವ ಸಾಧ್ಯತೆಯಿರುವುದರಿಂದ ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಸೂಚಿಸಲಾಗಿದೆ. ಕರಾವಳಿಯ ಕೆಲವು ಜಿಲ್ಲೆಗಳಲ್ಲಿಯೂ ಗುಡುಗು, ಮಿಂಚು ಸಹಿತ ಭಾರೀ ಮಳೆಯಾಗುವ ನಿರೀಕ್ಷೆಯಿದೆ.

Ramesh Babu

Journalist

Recent Posts

ತಾಯಿ ಭಾಷೆಯ ಹಬ್ಬ, ಕರುನಾಡ ಸಂಭ್ರಮ….

ತಾಯಿ ಭಾಷೆಯ ಹಬ್ಬ, ಕರುನಾಡ ಸಂಭ್ರಮ.... ಕನ್ನಡ ರಾಜ್ಯೋತ್ಸವದ ಹೊಸ್ತಿಲಿನಲ್ಲಿ ನನ್ನ ತಾಯಿ ಭಾಷೆಯ ಬಗ್ಗೆ ಒಂದಷ್ಟು ಅನಿಸಿಕೆ............ ಸಾಮಾಜಿಕ…

2 hours ago

ಕೃಷಿಯಲ್ಲೂ ಲಾಭವಿದೆ ಎಂಬ ಸಕಾರಾತ್ಮಕ ಚಿಂತನೆ ಬೆಳೆಸಿಕೊಳ್ಳಿ: ಮಲ್ಲಿಕಾರ್ಜುನ ಹೊಸಪಾಳ್ಯ

ದೊಡ್ಡಬಳ್ಳಾಪುರ: ಕೃಷಿಯಲ್ಲಿ ಲಾಭ-ನಷ್ಟ ಹಿಂದೆಯೂ ಇತ್ತು, ಈಗಲೂ ಇದೆ. ಆದರೆ ಸದಾ ನಷ್ಟದ ಬಗ್ಗೆಯೇ ಮಾತನಾಡುವ ಬದಲು ಕೃಷಿಯಲ್ಲೂ ಲಾಭವಿದೆ…

14 hours ago

ರಾಮನಗರ, ಕನಕಪುರಕ್ಕೆ ಮಾತ್ರ ಡಿಕೆಶಿ ಸಿಎಂ – ಆರ್. ಅಶೋಕ್: ‘ಕೈ’ ಸರ್ಕಾರ ರಿಯಲ್ ಎಸ್ಟೇಟ್ ದಂಧೆ ಮಾಡಿಕೊಂಡು ಅಧಿಕಾರ ನಡೆಸುತ್ತಿದೆ – ಬಿ.ವೈ ವಿಜಯೇಂದ್ರ ಆರೋಪ

ದೊಡ್ಡಬಳ್ಳಾಪುರ: ಕನಕಪುರದಲ್ಲಿ ಮಾತ್ರ ರೈತರಿಗೆ ಭೂಮಿಯನ್ನು ಮಾರಾಟ ಮಾಡಬೇಡಿ ಎಂದು ಸಿಎಂ ಡಿ.ಕೆ. ಶಿವಕುಮಾರ್ ಹೇಳುತ್ತಾರೆ. ಆದರೆ ಬಿಡದಿ, ದೊಡ್ಡಬಳ್ಳಾಪುರ…

19 hours ago

ದೊಡ್ಡಬಳ್ಳಾಪುರ: ಕಾರು–ಬೈಕ್ ಭೀಕರ ಅಪಘಾತ; ದಂಪತಿ ಸಾವು

ದೊಡ್ಡಬಳ್ಳಾಪುರ: ನಾಗಸಂದ್ರ ಸಮೀಪದ ದಾಬಸ್‌ಪೇಟೆ–ಹೊಸಕೋಟೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾರು ಮತ್ತು ದ್ವಿಚಕ್ರ ವಾಹನದ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ದಂಪತಿ…

1 day ago

ಮಂಕುಹಿಡಿದ ‘ಮಾಂಗಲ್ಯ ಭಾಗ್ಯ’ ಯೋಜನೆ: ಬಡ ಜೋಡಿಗಳ ಪಾಲಿಗೆ ಮರೀಚಿಕೆಯಾದ ಮಾಂಗಲ್ಯ ಭಾಗ್ಯ ಕಾರ್ಯಕ್ರಮ

ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳ ಮದುವೆ ವೆಚ್ಚದ ಹೊರೆಯನ್ನು ತಗ್ಗಿಸಿ, ಆರ್ಥಿಕವಾಗಿ ಹಿಂದುಳಿದ ವಧು-ವರರಿಗೆ ಆಸರೆಯಾಗಿದ್ದ ರಾಜ್ಯ ಸರ್ಕಾರದ…

1 day ago

ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಸುಮಾರು 8.38 ಕೋಟಿ ಮೌಲ್ಯದ ಹೈಡ್ರೋಪೋನಿಕ್ ಗಾಂಜಾ ವಶ

ಬೆಂಗಳೂರು: ನಗರದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು ಮಾದಕ ವಸ್ತುಗಳ ವಿರುದ್ಧದ ಕಾರ್ಯಾಚರಣೆ ನಡೆಸಿ, ಥಾಯ್ಲೆಂಡ್‌, ಬ್ಯಾಂಕಾಕ್‌ನಿಂದ…

2 days ago