ರಾಜರಾಜೇಶ್ವರಿ ನಗರ ವಲಯದಲ್ಲಿ 118 ಕೋಟಿ ರೂ. ಸರ್ಕಾರಿ ಹಣ ನಷ್ಟ ಸಾಬೀತು ಹಿನ್ನೆಲೆ 8 ಬಿಬಿಎಂಪಿ ಅಧಿಕಾರಿಗಳನ್ನು ಸಸ್ಪೆಂಡ್ ಮಾಡಿರುವ ನಗರಾಭಿವೃದ್ಧಿ ಇಲಾಖೆ.
ಸಂಸದ ಡಿ.ಕೆ.ಸುರೇಶ್ ಅವರು ಈ ಕುರಿತು ಲೋಕಾಯುಕ್ತಕ್ಕೆ ದೂರು ನೀಡಿದ್ದರು. ಪ್ರಕರಣ ಕುರಿತು ತನಿಖೆ ನಡೆಸಿದ್ದ ಲೋಕಾಯುಕ್ತಕ್ಕೆ 118 ಕೋಟಿ ರೂ. ಸರ್ಕಾರಿ ಹಣ ವಿವಿಧ ಕಾಮಗಾರಿ ಹೆಸರಲ್ಲಿ ನಷ್ಟವಾಗಿದ್ದು ಬೆಳಕಿಗೆ ಬಂದಿತ್ತು.
ಎಇಇ ಜಿ.ಎಂ.ಚಂದ್ರನಾಥ( ನಿವೃತ್ತಿ), ಟಿವಿಸಿಸಿ ಕೋಶ ಸಹಾಯಕ ಅಭಿಯಂತರ ಸತೀಶ್ ಕು
ಮಾರ್, ಆರ್ ಆರ್ ನಗರ ವಿಭಾಗದ ಕಾರ್ಯಪಾಲಕ ಎಂಜನಿಯರ್ ಬಸವರಾಜ್, ಸಹಾಯಕ ಕಾರ್ಯಪಾಲಕ ಎಂಜನಿಯರ್ ಸಿದ್ದರಾಮಯ್ಯ, ಸಹಾಯಕ ಅಭಿಯಂತರ ಎಸ್.ಜಿ.ಉಮೇಶ್ , ಅಮಾನತ್ತು ಮಾಡಲಾಗಿದೆ.
2019-20 ನೇ ಸಾಲಿನ ಕೆಆರ್ ಐಡಿಎಲ್ ಗೆ ವಹಿಸಲಾಗಿದ್ದ ಎಲ್ಲಾ ಕಾಮಗಾರಿ ಮಾಡದಿದ್ದರು ಬಿಲ್ ಪಾವತಿ ಆಗಿರುವ ಗಂಭೀರ ಆರೋಪವನ್ನು ಸಂಸದ ಡಿ.ಕೆ ಸುರೇಶ್ ಮಾಡಿದ್ದರು.
ದೂರಿನ ಅನ್ವಯ ಲೋಕಾಯುಕ್ತ ಪ್ರಾಥಮಿಕ ತನಿಖೆ ನಡೆಸಿತ್ತು. ಅದರಲ್ಲಿ 118 ಕೋಟಿ ರೂ ಸರ್ಕಾರದ ಹಣ ನಕಲಿ ಬಿಲ್ ಗೆ ಪಾವತಿ ಆಗಿರೋದು ಬೆಳಕಿಗೆ ಬಂದಿತ್ತು.