ರಾಜಘಟ್ಟ ಆಂಜನೇಯಸ್ವಾಮಿ ವಿಜೃಂಭಣೆಯ ರಥೋತ್ಸವ; ಮೂರು ದಿನಗಳ ಕಾಲ ನಡೆಯುವ ಜಾತ್ರಾ ಮಹೋತ್ಸವ; ಕೊಪ್ಪರಿಗೆ ಮುದ್ದೆ, ಕಾಳು ಸಾರು ಸವಿದ ಭಕ್ತಾಧಿಗಳು

ತಾಲ್ಲೂಕಿನ ಕಸಬಾ ಹೋಬಳಿ ರಾಜಘಟ್ಟ ಗ್ರಾಮದಲ್ಲಿನ ಇತಿಹಾಸ ಪ್ರಸಿದ್ಧ ಶ್ರೀಆಂಜನೇಯ ಸ್ವಾಮಿ ದೇವಾಲಯದ ರಥೋತ್ಸವವು ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಅದ್ಧೂರಿಯಾಗಿ ನೆರವೇರಿತು.

ಬೆಳಗ್ಗೆ ಹೋಮ ಹಾಗೂ ಶ್ರೀಸ್ವಾಮಿಯ ರಥಾರೋಹಣ ನೆರವೇರಿತು. ಮಧ್ಯಾಹ್ನ 12ಕ್ಕೆ ಜರುಗಿದ ಮಹಾರಥೋತ್ಸವದಲ್ಲಿ ನೆರೆದಿದ್ದ ಭಕ್ತರು ರಥಕ್ಕೆ ಬಾಳೆಹಣ್ಣು, ಕರಿಮೆಣಸು ಎರಚಿ ರಥ ಎಳೆದರು.

ಪ್ರಸಿದ್ಧ ಕೊಪ್ಪರಿಗೆ ಮುದ್ದೆ, ಕಾಳು ಸಾಂಬರ್

ಅನಾದಿಕಾಲದಿಂದಲೂ ಇಲ್ಲಿನ ನಡೆಯುವ ಜಾತ್ರಾ ಮಹೋತ್ಸವದಲ್ಲಿ ಭಕ್ತರಿಗೆ ಕೊಪ್ಪರಿಗೆಯಲ್ಲಿ ಮಾಡಲಾಗಿದ್ದ ಮುದ್ದೆ ಕಾಳು ಸಾಂಬರ್ ಅತ್ಯಂತ ಹೆಚ್ಚಿನ ಪ್ರಸಿದ್ಧಿ ಪಡೆದಿದೆ. ಇತ್ತೀಚಿನ ದಿನಗಳಲ್ಲಿ ಮರೆಯಾಗುತ್ತಿರುವ ಬೃಹತ್ ಕೊಪ್ಪರಿಗೆಯಲ್ಲಿ ಒಮ್ಮೆಗೆ ಒಂದೂವರೆ ಸಾವಿರ ಮುದ್ದೆ ಮಾಡುವ ಶೈಲಿ ಎಲ್ಲರ ಗಮನ ಸೆಳೆಯಿತು. ಎರಡು ದಿನಗಳಿಂದ ನಡೆದ‌ ಕೊಪ್ಪರಿಗೆ ಊಟವನ್ನು ಸಾವಿರಾರು ಮಂದಿಗೆ ಉಣಬಡಿಡಲಾಗಿದೆ ಎಂದು ಎನ್ನಲಾಗಿದೆ.

ನಂತರ ಭಕ್ತರಿಗೆ ಅನ್ನ ಸಂತರ್ಪಣೆ, ಪ್ರಸಾದ ವಿನಿಯೋಗ ಜರುಗಿತು. ಪಾನಕ, ಕೋಸಂಬರಿ, ಮಜ್ಜಿಗೆ ವಿತರಣೆ ಎಲ್ಲೆಡೆ ಹಂಚಲಾಯಿತು.

ಒಟ್ಟಾರೆ ಗ್ರಾಮದಲ್ಲಿ ಶ್ರೀರಾಮ ನವಮಿ‌ ಹಬ್ಬದ ಪ್ರಯುಕ್ತ ಹಬ್ಬದ ವಾತಾವರಣನಿರ್ಮಾಣವಾಗಿತ್ತು.

Leave a Reply

Your email address will not be published. Required fields are marked *