ಬೆಂಗಳೂರು : ಕಳೆದು ಮೂರ್ನಾಲ್ಕು ದಿನದಿಂದ ಔರಂಗಜ಼ೇಬ್ ವಿಚಾರ ರಾಜಕೀಯ ಪಡಸಾಲೆಯಲ್ಲಿ ಮತ್ತು ಸೋಷಿಯಲ್ ಮೀಡಿಯಾದಲ್ಲಿ ಮಾತ್ರ ಚರ್ಚೆಯಾಗುತ್ತಿತ್ತು. ಈಗ ಈ ಕಲಹ ರಾಜಕೀಯದಿಂದ ಸಿನೆಮಾ ರಂಗಕ್ಕೂ ಕಾಲಿಟ್ಟಿದೆ.ನೆನ್ನೆ ಶಿವಾಜಿ ವಂಶಜರ ಕಥಾ ಹಂದರವುಳ್ಳ ಇನಾಮ್ದಾರ ಸಿನೆಮಾದ ಟ್ರೈಲರ್ ಬಿಡುಗಡೆ ಸಂದರ್ಭದಲ್ಲಿ ಔರಂಗಜೇಬ್ ವರ್ಸಸ್ ಶಿವಾಜಿ ವಿಚಾರ ಮುನ್ನೆಲೆಗೆ ಬಂತು.
ಸಿನೆಮಾದ ಕುರಿತು ಮಾತನಾಡುತ್ತ ಪಯ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿದ ರಾಜಕುಮಾರ ಖ್ಯಾತಿಯ ಹಿರಿಯ ನಟ ಎಮ್.ಕೆ ಮಠ, ಔರಂಗಜ಼ೇಬ ಯಾವನ್ರಿ ಅವನೊಬ್ಬ ಮತಾಂಧ ಅಂತ ಹರಿಹಾಯ್ದಿದ್ದಾರೆ.
ತದನಂತರ ಖ್ಯಾತ ನಟರಾದ ಪ್ರಮೋದ್ ಶೆಟ್ಟಿ ಮಾತನಾಡಿ, ಸಮಾನತೆ ಬೇಕು ಆದರೆ ಇವತ್ತು ಯಾವ ತರಹದ ಸಮಾನತೆ ಇದೆ ಒಂದು ಕಣ್ಣಿಗೆ ಬೆಣ್ಣೆ ಮತ್ತೊಂದು ಕಣ್ಣಿಗೆ ಸುಣ್ಣ ಅನ್ನೋ ರೀತಿ ಜನರ ನಿಲುವುಗಳಿಗೆ ಚಾಟಿ ಬೀಸಿದರು.
ನಿರ್ದೇಶಕ ಸಂದೇಶ್ ಶೆಟ್ಟಿ ಆಜ್ರಿ ಮಾತನಾಡಿ, ಔರಂಗಜ಼ೇಬನ ಬ್ಯಾನರ್ ಹಾಕೋಕೆ ಅಡ್ಡಿ ಇಲ್ಲ ಆದರೆ ಮೊನ್ನೆ ಸಂಘಟನೆಯೊಂದು ಶಿವಾಜಿ ಕುರಿತು ಕಾರ್ಯಕ್ರಮ ಮಾಡಲು ಹೊರಟಾಗ ಪುತ್ಥಳಿ ಇಡಲು ಬಿಡಲಿಲ್ಲ. ಇವೆಲ್ಲಾ ಯಾವ ರೀತಿಯ ಧೋರಣೆ ಎಂದು ಪ್ರಶ್ನೆ ಮಾಡುತ್ತಲೆ ಶಿವಾಜಿ ಕನ್ನಡಿಗ ಎಂದು ಹೇಳುವ ಮೂಲಕ ಹೊಸದೊಂದು ವಿವಾದ ಶುರು ಮಾಡಿದ್ದಾರೆ.
ಬರೀ ಮಾತಿನಲ್ಲಷ್ಟೆ ಇದೇ ತಿಂಗಳು 27ನೇ ತಾರೀಖು ಬಿಡುಗಡೆಗೊಳ್ಳಲಿರುವ ಇನಾಮ್ದಾರ್ ಸಿನೆಮಾ ಟ್ರೈಲರ್ ನಲ್ಲೂ ಕೂಡ ಶಿವಾಜಿಯನ್ನ ಕನ್ನಡದ ಕುಲ ತಿಲಕ ಅಂತ ಕರೆದಿರೋದು ಶಿವಾಜಿ ಕನ್ನಡಿಗನ ಅಲ್ವ ಅನ್ನೋ ವಾದ-ವಿವಾದವನ್ನು ಹುಟ್ಟು ಹಾಕಿದೆ.
ಈ ಹಿಂದೆಯೂ ಕೂಡ ಶಿವಾಜಿ ಕನ್ನಡಿಗ ಎಂದ ರಾಜಕಾರಣಿಗಳ ವಿರುದ್ಧ ಕನ್ನಡಪರ ಸಂಘಟನೆಗಳು ಗರಂ ಆಗಿದ್ವು ಇದೀಗ ಮತ್ತೆ ಅದೇ ಹೇಳಿಕೆ ಸಿನೆಮಾದಲ್ಲಿ ಬಳಸಿರೋದ್ರಿಂದ ಪರ-ವಿರೋಧ ಚರ್ಚೆಗಳು ಈಗಾಗಲೆ ಶುರುವಾಗಿವೆ ಇದಕ್ಕೆಲ್ಲ ಚಿತ್ರ ತಂಡ ಯಾವ ಸಮಜಾಯಿಷಿ ಕೊಡುತ್ತೆ ಕಾದು ನೋಡಬೇಕಿದೆ.
ಒಂದೇ ಊರಿನ ಎದುರು ಬದರು ಮನೆ ವಾಸಿಗಳು. ಜೊತೆಯಾಗಿ ರಿಯಲ್ ಎಸ್ಟೇಟ್ ವ್ಯವಹಾರ ಮಾಡಿಕೊಂಡಿದ್ದರು. ಆದ್ರೆ ಕಳೆದ ಹತ್ತು ವರ್ಷದಿಂದ…
ಭಾರತದ ವಿದೇಶಾಂಗ ನೀತಿ ವ್ಯಾವಹಾರಿಕವೇ ?ಮೌಲ್ಯಯುತವೇ ? ಸೈದ್ದಾಂತಿಕವೇ ? ಅವಕಾಶವಾದಿತನವೇ ? ವ್ಯಕ್ತಿಗತವೇ ? ಸಾಂದರ್ಭಿಕ ತೀರ್ಮಾನಗಳೇ ?…
ತಾಲ್ಲೂಕಿನ ಕಾಡತಿಪ್ಪೂರು ಗ್ರಾಮದಲ್ಲಿನ ಇತಿಹಾಸ ಪ್ರಸಿದ್ಧ ಅರಸೇಶ್ವರಿ ದೇಗುಲದ ಇನಾಮ್ತಿ ಜಮೀನನ್ನು ಕಂದಾಯ ಇಲಾಖೆ ಅಧಿಕಾರಿಗಳು ಖಾಸಗಿ ವ್ಯಕ್ತಿಗಳ ಜೊತೆ…
ಬಾಶೆಟ್ಟಿಹಳ್ಳಿ ಕೈಗಾರಿಕಾ ಪ್ರದೇಶದಲ್ಲಿರುವ ಕೇಬಲ್ ಕಾರ್ಖಾನೆಗೆ ಬೆಂಕಿ ತಗುಲಿದ್ದು, ಧಗಧಗನೆ ಕಾರ್ಖಾನೆ ಉರಿಯುತ್ತಿದೆ. ಈ ಘಟನೆ ಇಂದು ಸಂಜೆ ಸುಮಾರು…
ಮುಜರಾಯಿ ಇಲಾಖೆಗೆ ಒಳಪಡುವ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ರಾಮ ಲಕ್ಷ್ಮಣರಿಗೆ ಅಳವಡಿಸಿದ್ದ ಬೆಳ್ಳಿ ಕಿರೀಟವನ್ನು ಕಳ್ಳರು ಕದ್ದೊಯ್ದಿರುವ ಘಟನೆ ಕಳೆದ…
ದೊಡ್ಡಬಳ್ಳಾಪುರ ತಾಲೂಕಿನ ಕಲ್ಲುದೇವನಹಳ್ಳಿ ಮಾರಮ್ಮ ದೇವಿ ದೇವಸ್ಥಾನದಲ್ಲಿ ಕಳೆದ ರಾತ್ರಿ ಕಳ್ಳತನ ನಡೆದಿದೆ.. ಕಲ್ಲುದೇವನಹಳ್ಳಿ ಗ್ರಾಮದ ಮಧ್ಯ ಭಾಗದಲ್ಲಿರುವ ಮಾರಮ್ಮ…