ಕೋಲಾರ :ಪ್ರತಿ ಪಂಚಾಯಿತಿಗೊಂದು ರಾಗಿ ಹಾಗೂ ಭತ್ತ ಕಟಾವು ಯಂತ್ರೋಪಕರಣಗಳನ್ನು ಕೃಷಿ ಇಲಾಖೆಯಿಂದ ಉಚಿತವಗಿ ನೀಡುವ ಜೊತೆ ಖಾಸಗಿ ಯಂತ್ರಗಳ ದುಬಾರಿ ಬೆಲೆ ನಿಯಂತ್ರಣಕ್ಕೆ ಕಡಿವಾಣ ಹಾಕಿ ರೈತರ ರಕ್ಷಣೆ ಮಾಡಬೇಕು ಎಂದು ಒತ್ತಾಯಿಸಿ ರೈತ ಸಂಘದಿಂದ ಕೃಷಿ ಅಧಿಕಾರಿ ಮಹೇಶ್ ಅವರಿಗೆ ಮನವಿ ನೀಡಿ ಒತ್ತಾಯಿಸಲಾಯಿತು.
ರೈತ ಸಂಘದ ರಾಜ್ಯ ಮುಖಂಡ ನಾರಾಯಣಗೌಡ ಮಾತನಾಡಿ ಜಿಲ್ಲೆಯಲ್ಲಿ ರಾಗಿ ಹಾಗೂ ಭತ್ತ ಬೆಳೆದಿರುವ ರೈತರಿಗೆ ಬೆಳೆಗಳನ್ನು ಸಕಾಲಕ್ಕೆ ಕಟಾವು ಮಾಡುವ ಯಂತ್ರೋಪಕರಣಗಳು ಸಿಗದೆ ತೀವ್ರ ಸಂಕಷ್ಠಕ್ಕೆ ಸಿಲುಕಿದ್ದಾರೆ ಸರ್ಕಾರ ಹಾಗೂ ಕೃಷಿ ಇಲಾಖೆ ಅಧಿಕಾರಿಗಳು ಯಂತ್ರದಾರೆ ಯೋಜನೆಯನ್ನು ಸಮಪರ್ಕವಾಗಿ ನಿರ್ವಹಣೆ ಮಾಡದೇ ಸಂಪೂರ್ಣವಾಗಿ ನಿಕ್ಷಷ್ಟಿಯವಾಗಿದ್ದಾರೆ ಬೆಳೆ ಕಟಾವು ಮಾಡಲು ಸಕಾಲಕ್ಕೆ ಕೂಲಿ ಕಾರ್ಮಿಕರು ಸಿಗದೆ ವಿಧಿಯಿಲ್ಲದೆ ದುಪ್ಪಟ್ಟು ಹಣ ಪಾವತಿಸಿ ಖಾಸಗಿ ಯಂತ್ರೋಪಕರಣ ಕಡೆ ಮುಖ ಮಾಡುವ ಪರಿಸ್ಥಿತಿ ಎದುರಾಗಿದೆ ಎಂದು ಆರೋಪಿಸಿದರು.
ಜಿಲ್ಲೆಯಲ್ಲಿ ಮುಂಗಾರು ಮಳೆ ಅಲ್ಪವಾಗಿ ಬದ್ದಿದ್ದು, ಹಿಂಗಾರು ಮಳೆ ಉತ್ತಮವಾಗಿ ಬಿದ್ದ ಪರಿಣಾಮ ರಾಗಿ ಬೆಳೆ ಉತ್ತಮ ಫಸಲು ಬಂದಿದ್ದು ಕಟಾವಿನ ಹಂತದಲ್ಲಿದೆ ಆದರೆ ಬೆಳೆಯನ್ನು ಕಟಾವು ಮಾಡಲು ಕೂಲಿ ಕಾರ್ಮಿಕರು ಸಕಾಲಕ್ಕೆ ಸಿಗದೆ ರೈತರು ಪರದಾಡು ಪರಿಸ್ಥಿತಿ ಎದುರಾಗಿದೆ ಇದನ್ನೆ ಬಂಡಾವಾಳ ಮಾಡಿಕೊಂಡಿರುವ ಖಾಸಗೀ ಕಟಾವು ಯಂತ್ರೋಪರಣಗಳ ಮಾಲೀಕರು ದುಪ್ಪಟ್ಟ ಬೆಲೆಯನ್ನು ಪ್ರತಿ ಎಕರೆಗೆ ಆರರಿಂದ ಹತ್ತು ಸಾವಿರ ವರೆಗೆ ನಿಗದಿ ಮಾಡಿ ರೈನ್ನು ಆರ್ಥಿಕ ಸಂಕಷ್ಟಕ್ಕೆ ಈಡಾಗುಂತೆ ಮಾಡಿದ್ದಾರೆ ಜಿಲ್ಲೆಗೆ ಈಗಾಗಲೇ ತಮಿಳುನಾಡು ಆಂದ್ರದಿಂದ ಕಟಾವು ಯಂತ್ರಗಳು ಕಾಲಿಟ್ಟಿದ್ದು ಪ್ರತಿ ಎಕರೆ ತಮೆ ಇಷ್ಟ ಬಂದ ರೀತಿ ಧರ ನಿಗದಿ ರೈತರನ್ನು ಶೋಷಣೆ ಮಾಡುತ್ತಿದ್ದರೂ ಅಧಿಕಾರಿಗಳು ಗಮನ ಹರಿಸುತ್ತಿಲ್ಲ ಯಾಕೆ ಎಂದು ಆಕ್ರೋಶ ವ್ಯಕ್ತ ಪಡಿಸಿದರು.
ಜಿಲ್ಲಾಧ್ಯಕ್ಷ ಈಕಂಬಳ್ಳಿ ಮಂಜುನಾಥ್ ಮಾತನಾಡಿ ರಾಜ್ಯದಲ್ಲಿ ಅಧಿಕಾರದಲ್ಲಿರುವ ಕಾಂಗ್ರೇಸ್ ಸರ್ಕಾರಿ ರಾಜ್ಯದಲ್ಲಿ ಉಚಿತ ಗ್ಯಾರಂಟಿ ಯೋಜನೆಗಳಿಗೆ ಹಣವನ್ನು ಕೃಡೀಕರಿಸಲು ಮುಂದಾಗಿರುವುದು ಬಿಟ್ಟರೆ ಕೃಷಿಯೇತರ ಚಟುವಟಿಕೆಗೆ ಅಂತಂತ್ರ ಪರಿಸ್ಥಿತಿ ಎದುರಿಸುತ್ತಿದೆ ರೈತರು ಬೆಳೆದಿರುವ ರಾಗಿ ಹಾಗೂ ಭತ್ತದ ಬೆಳೆಗಳನ್ನು ಸಕಾಲಕ್ಕೆ ಕಟಾವು ಮಾಡಿ ರಕ್ಷಣೆ ಮಾಡಿಕೊಳ್ಳಲು ಪರದಾಡುವ ಜೊತೆಗೆ ಕೃಷಿ ಇಲಾಖೆಯಿಂದ ಕಟಾವು ಯಂತ್ರಗಳು ಪರಾಡುವಂತಾಗಿದೆ ರೈತರಿಗೆ ಕೃಷಿ ಇಲಾಖೆಯಿಂದ ಕಟಾವು ಯಂತ್ರೋಪಕರಣಗಳನ್ನು ಉಚಿತವಾಗಿ ಇಲ್ಲದೆ ಸಬ್ಸಿಡಿ ರೂಪದಲ್ಲಿ ನೀಡುತ್ತಾರೆ ಎಂಬ ಆಶಾಭಾವನೆಯಿಂದ ಕಾದುಕುಳಿತಿದ್ದಾರೆ ಆದರೆ ಕೃಷಿ ಇಲಾಖೆ ಅಧಿಕಾರಿಗಳು, ಜಿಲ್ಲಾ ಉಸ್ತುವಾರಿ ಮಂತ್ರಿಗಳು ಇತ್ತ ಗಮನ ಹರಿಸದೇ ಇರುವುದು ಜಿಲ್ಲೆಯ ರೈತರ ಆಕ್ರೋಶಕ್ಕೆ ಕಾರಣವಾಗಿದೆ ಎಂದು ಬೇಸರ ವ್ಯಕ್ತ ಪಡಿಸಿದರು.
ಮನವಿ ಸ್ವೀಕರಿಸಿ ಮಾತನಾಡಿದ ಕೃಷಿ ಅಧಿಕಾರಿ ಮಹೇಶ್ ಹಿರಿಯ ಅಧಿಕಾರಿಗಳ ಜೊತೆ ಚರ್ಚೆ ಮಾಡಿ ಖಾಸಗೀ ಯಂತ್ರೋಪಕರಣಗಳ ಬೆಲೆ ನಿಗದಿ ಮಾಡುವುದಾಗಿ ಜೊತೆಗೆ ಖಾಸಗಿ ಯಂತ್ರಗಳು ದುಬಾರಿ ಬೆಲೆ ಪಡೆಯುತ್ತಿದ್ದರೆ ಅಧಿಕಾರಿಗಳ ಗಮನಕ್ಕೆ ತಂದರೆ ಅಂತವರ ವಿರುದ್ದ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.
ಮನವಿ ನೀಡುವಾಗ ಮಹಿಳಾ ಜಿಲ್ಲಾಧ್ಯಕ್ಷೆ ನಳಿನಿ ಗೌಡ, ಫಾರೂಕ್ ಪಾಷಾ, ಮಂಗಸದ್ರ ತಿಮ್ಮಣ್ಣ , ಶಿವಾರೆಡ್ಡಿ, ಸುಪ್ರಿಂ ಚಲ, ಯಲ್ಲಣ್ಣ, ಹರೀಶ್, ಬಂಗಾವಾದಿ ನಾಗರಾಜಗೌಡ, ರತ್ನಮ್ಮ ಶೈಲಜ ಮುನಿರತ್ನಮ್ಮ ವೆಂಕಟಮ್ಮ, ಮುಂತಾದವರಿದ್ದರು.