ರಾಗಿ ತುಂಬಿದ್ದ ಟ್ರ್ಯಾಕ್ಟರ್ ಗಳ ನಡುವೆ ಅಪಘಾತ

ನಗರದ ಆರ್ ಎಂಸಿ ಆವರಣದ ರಾಗಿ ಕೇಂದ್ರದ ಬಳಿ ರಾಗಿ ತುಂಬಿದ್ದ ಟ್ರ್ಯಾಕ್ಟರ್ ಗಳ ನಡುವೆ ಅಪಘಾತವಾಗಿರುವ ಘಟನೆ ನಡೆದಿದೆ.

ಸುಮಾರು 7 ಟ್ರ್ಯಾಕ್ಟರ್ ಗಳು ಒಂದರ ಹಿಂದೆ ಒಂದು ನಿಂತಿದ್ದವು, ಅದರಲ್ಲಿ ಹಿಂದೆ ಇದ್ದ ಟ್ರ್ಯಾಕ್ಟರ್ ಚಾಲಕ ಟ್ರ್ಯಾಕ್ಟರ್ ಸ್ಟಾರ್ಟ್ ಮಾಡಿದ್ದಾನೆ. ಈ ವೇಳೆ ಚಾಲಕನ ನಿಯಂತ್ರಣ ತಪ್ಪಿ ಮುಂದೆ ಇದ್ದ ಟ್ರ್ಯಾಕ್ಟರ್ ಗೆ ಡಿಕ್ಕಿ ಹೊಡೆದಿದೆ. ಹೀಗೆ ಮುಂದೆ ಇದ್ದ ಸುಮಾರು 4 ಟ್ರ್ಯಾಕ್ಟರ್  ಒಂದೊಕ್ಕೊಂದು ಡಿಕ್ಕಿ ಹೊಡೆದುಕೊಂಡಿವೆ.

ಡಿಕ್ಕಿ ರಭಸಕ್ಕೆ ಟ್ರ್ಯಾಕ್ಟರ್ ಗಳ ಮುಂಭಾಗದ ಇಂಜಿನ್ ಗಳು ಜಖಂಗೊಂಡಿವೆ. ಸದ್ಯ ಯಾವುದೇ ಪ್ರಾಣಾಪಾಯ‌ ಸಂಭವಿಸಿಲ್ಲ.

Leave a Reply

Your email address will not be published. Required fields are marked *

error: Content is protected !!