ನಗರದ ಹಳೇ ಬಸ್ ನಿಲ್ದಾಣದ ಕೆಎಸ್ ಆರ್ ಟಿಸಿ ಬಸ್ ನಿಲ್ದಾಣ ಸಮೀಪ ಕೆಸ್ ಆರ್ ಟಿಸಿ ಬಸ್ ಅಡ್ಡದಾರಿಯಲ್ಲಿ ಬಂದು ಮತ್ತೊಂದು ಕೆಎಸ್ ಆರ್ ಟಿಸಿ ಬಸ್ ಗೆ ಗುದ್ದಿದ ಪರಿಣಾಮ ಸ್ಥಳದಲ್ಲಿ ಕೆಲಕಾಲ ಟ್ರಾಫಿಕ್ ಜಾಮ್ ಉಂಟಾಗಿತ್ತು.
ಸಾರಿಗೆ ನಿಗಮದ ಬಸ್ ಗಳು ಬೇಕಾಬಿಟ್ಟಿ ಸಂಚರಿಸುವುದರಿಂದ ಸಾರ್ವಜನಿಕರು ಜೀವನ ಅಂಗೈಯಲ್ಲಿಟ್ಟುಕೊಂಡು ಓಡಾಡಬೇಕಾಗಿದೆ. ಸಿದ್ದಲಿಂಗಯ್ಯ ವೃತ್ತ ಸಂಪೂರ್ಣ ಅವ್ಯವಸ್ಥೆಯಿಂದ ಕೂಡಿದ್ದು, ರಸ್ತೆಬದಿ ವ್ಯಾಪಾರಿಗಳು, ಅಡ್ಡಾದಿಡ್ಡಿ ವಾಹನ ಸಂಚಾರದಿಂದ ಕಿಷ್ಕಿಂದೆಯಾಗಿ ಮಾರ್ಪಟ್ಟಿದೆ.
ನಗರಸಭೆ ಹಾಗೂ ಪೊಲೀಸರು ಕೂಡಲೇ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕಾಗಿ ಸಾರ್ವಜನಿಕರು ಮನವಿ ಮಾಡಿದ್ದಾರೆ.