ಜಿಂಕೆಯೊಂದು ರಾತ್ರಿ ವೇಳೆ ರಸ್ತೆ ದಾಟುವಾಗ ಅಪರಿಚಿತ ವಾಹನ ಡಿಕ್ಕಿ ಹೊಡೆದ ಪರಿಣಾಮ, ಸುಮಾರು 6 ವರ್ಷದ ಗಂಡು ಜಿಂಕೆ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ತಾಲೂಕಿನ ನೆಲಮಂಗಲ- ದೊಡ್ಡಬಳ್ಳಾಪುರ ರಸ್ತೆಯ ಆಕಾಶವಾಣಿ ಕೇಂದ್ರದ ಗೇಟ್ ಬಳಿ ನಡೆದಿದೆ.
ರಸ್ತೆಯಲ್ಲಿ ಜಿಂಕೆ ಸತ್ತು ಬಿದ್ದುರುವುದನ್ನು ಇಂದು ಬೆಳಗ್ಗೆ ಜನ ನೋಡಿ, ಕೂಡಲೇ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ತಿಳಿಸಿದ್ದಾರೆ.
ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.