ರಸ್ತೆ ಅಪಘಾತದಲ್ಲಿ ಬ್ರೈನ್ ಡೆತ್ ನಿಂದ ಮೃತಪಟ್ಟಿದ್ದ ಯುವಕನ ಕಣ್ಣುಗಳನ್ನು ದಾನ ಮಾಡುವ ಮೂಲಕ ಪೋಷಕರು ಸಾರ್ಥಕತೆ ಮೆರೆದಿದ್ದಾರೆ. ತಿಮ್ಮಸಂದ್ರ ಗ್ರಾಮದ ಯುವಕನ ಸಾವು ಮತ್ತೊಬ್ಬ ವ್ಯಕ್ತಿಯ ಬಾಳಲ್ಲಿ ಬೆಳಕಾಗಿದಕ್ಕೆ ಗ್ರಾಮಸ್ಥರು ಕಂಬನಿ ಮಿಡಿದಿದ್ದಾರೆ.
ದೊಡ್ಡಬಳ್ಳಾಪುರ ತಾಲೂಕು ತಿಮ್ಮಸಂದ್ರ ಗ್ರಾಮದ ಮುನೇಗೌಡ (34) ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದರು. ಆಗಸ್ಟ್ 12 ರ ರಾತ್ರಿ 8 ಗಂಟೆ ಸಮಯದಲ್ಲಿ ಬೈಕ್ ನಲ್ಲಿ ಮನೆಯತ್ತ ಬರುವಾಗ ಸೆಲ್ಫ್ ಆಕ್ಸಿಡೆಂಟ್ ನಲ್ಲಿ ಗಂಭೀರವಾಗಿ ಗಾಯಗೊಂಡಿದ್ದರು. ಚಿಕಿತ್ಸೆಗಾಗಿ ಆತನನ್ನ ಹೆಬ್ಬಾಳದ ಆಸ್ಟರ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಬ್ರೈನ್ ಡೆತ್ ಆದ ಹಿನ್ನೆಲೆ ವೈದ್ಯರು ಮುನೇಗೌಡರ ಸಾವನ್ನು ಘೋಷಣೆ ಮಾಡಿದ್ದಾರೆ.
ಮೃತ ಮುನೇಗೌಡರಿಗೆ ಮದುವೆ ನಿಶ್ಚಿತಾರ್ಥವಾಗಿದ್ದ ಇದೇ ತಿಂಗಳು ಮದುವೆ ದಿನವನ್ನ ನಿಶ್ಚಯ ಮಾಡಲಾಗಿತ್ತು. ಆದರೆ, ಮದುವೆ ಮುನ್ನವೇ ಅಪಘಾತದಲ್ಲಿ ಸಾವನ್ನಪ್ಪಿದ್ದು ಕುಟುಂಬದವರ ದುಃಖವನ್ನ ಹೆಚ್ಚು ಮಾಡಿದೆ. ಮಗನ ಸಾವಿನ ದುಃಖದ ನಡುವೆ ಹೆತ್ತವರು ಇಡೀ ದೇಹವನ್ನ ಆಸ್ಪತ್ರೆಗೆ ದಾನ ಮಾಡಲು ತಿರ್ಮಾನ ಮಾಡಿದ್ದರು, ಆದರೆ, ದೇಹದಲ್ಲಿ ಕಣ್ಣುಗಳನ್ನ ದಾನ ಮಾಡಲು ಸೂಕ್ತವಾಗಿದ್ದ ಕಾರಣಕ್ಕೆ ನೇತ್ರದಾನ ಮಾಡಿದ್ದಾರೆ. ಸಾವಿನಲ್ಲೂ ಸಾರ್ಥಕತೆ ಕಂಡ ಮೃತ ಮುನೇಗೌಡರ ಹೆತ್ತವರಿಗೆ ಗ್ರಾಮದ ಮುಖಂಡರು ಮೆಚ್ಚಿಗೆಯನ್ನ ವ್ಯಕ್ತಪಡಿಸಿದ್ದಾರೆ.
ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಂಚಾಯಿತಿ ಕ್ಷೇತ್ರಗಳ ಮೀಸಲಾತಿ ವಿವರ
ಸಾರ್ವಜನಿಕರ ಕೆಲಸಗಳು ತಾಲೂಕು ಕಚೇರಿಗಳಲ್ಲಿ ಯಾವುದೇ ವಿಳಂಬವಿಲ್ಲದೆ ನಡೆಯಬೇಕು. ಕಂದಾಯ ದಾಖಲೆಗಳ ನಿರ್ವಹಣೆ, ಭೂಮಿಗೆ ಸಂಬಂಧಿಸಿದ ಅರ್ಜಿಗಳ ವಿಲೇವಾರಿ ಹಾಗೂ…
ಅ.07-10-2026: ಬ್ಯಾಂಕಾಕ್‌ನಿಂದ ಬೆಂಗಳೂರಿಗೆ ಆಗಮಿಸಿದ ಪ್ರಯಾಣಿಕರೊಬ್ಬರನ್ನು ಬೆಂಗಳೂರು ಕಸ್ಟಮ್ಸ್ ಅಧಿಕಾರಿಗಳು ತಪಾಸಣೆ ನಡೆಸಿ, ಚೆಕ್-ಇನ್ ಬ್ಯಾಗೇಜ್‌ನಲ್ಲಿ ಅಡಗಿಸಿಟ್ಟಿದ್ದ 942 ಗ್ರಾಂ…
ದೇವನಹಳ್ಳಿ: ಸಾರ್ವಜನಿಕರಿಂದ ಬಂದ ದೂರುಗಳ ಹಿನ್ನೆಲೆಯಲ್ಲಿ ಕಂದಾಯ ಸಚಿವ ಡಾ. ಜಿ. ಪರಮೇಶ್ವರ್ ಅವರು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ…
ದೊಡ್ಡಬಳ್ಳಾಪುರ: ದೊಡ್ಡಬಳ್ಳಾಪುರ ರೈಲು ನಿಲ್ದಾಣದ ರೈಲ್ವೆ ಯಾರ್ಡ್‌ನಲ್ಲಿ ರೈಲಿಗೆ ಸಿಲುಕಿ ಸುಮಾರು 30 ವರ್ಷದ ಅಪರಿಚಿತ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ…