ಲಾರಿಯನ್ನು ಅಡ್ಡಾದಿಡ್ಡಿಯಾಗಿ ಚಾಲಾಯಿಸಿಕೊಂಡು ಬಂದ ಚಾಲಕನು, ರಸ್ತೆಯಲ್ಲಿ ಸಂಚರಿಸುತ್ತಿದ್ದ ಇತರೆ ವಾಹನಗಳಿಗೆ ಡಿಕ್ಕಿ ಹೊಡೆದು ಕಿರಿಕಿರಿ ಉಂಟು ಮಾಡಿರುವ ಘಟನೆ ಇಂದು ಸಂಜೆ ನೆಲಮಂಗಲ – ದೊಡ್ಡಬಳ್ಳಾಪುರ ರಸ್ತೆಯಲ್ಲಿ ನಡೆದಿದೆ.
ನೆಲಮಂಗಲದಿಂದ ಮಧುರೆ ಮಾರ್ಗವಾಗಿ ದೊಡ್ಡಬಳ್ಳಾಪುರಕ್ಕೆ ಬರುತ್ತಿದ್ದ ಗೂಡ್ಸ್ ಲಾರಿಯ ಚಾಲಕನ ಅವಾಂತರಿಂದ ಇತರೆ ವಾಹನ ಸವಾರರಿಗೆ ತೀವ್ರ ತೊಂದರೆ ಉಂಟಾಗಿದೆ. ಚಾಲಕನ ಬೇಜವಾಬ್ದಾರಿಯೋ, ನಿರ್ಲಕ್ಷ್ಯತನವೋ, ಕುಡಿತದ ಅಮಲಿನಲ್ಲೋ ವಾಹನ ಚಲಾಯಿಸಿರಬಹುದು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಕೊನೆಗೆ ದೊಡ್ಡಬಳ್ಳಾಪುರ ತಾಲೂಕಿನ ಅರಳು ಮಲ್ಲಿಗೆ ಬಳಿ ಲಾರಿಯನ್ನು ತಡೆದ ಸಾರ್ವಜನಿಕರು, ಲಾರಿ ಚಾಲಕನನ್ನು ಕೆಳಗಿಳಿಸಿ ಪರಿಶೀಲನೆ ನಡೆಸಿ ತರಾಟೆಗೆ ತೆಗೆದುಕೊಂಡಿದ್ದಾರೆ.