ರಸಗೊಬ್ಬರಗಳಿಗೆ ಹೆಚ್ಚಿದ ಬೇಡಿಕೆ: ರೈತರ ಸುಲಿಗೆಗೆ ಇಳಿದ ರಸಗೊಬ್ಬರ ಅಂಗಡಿಗಳು, ಡೀಲರ್ ಶಿಪ್ ಕಂಪನಿ?

ತಾಲೂಕಿನಾದ್ಯಂತ ಉತ್ತಮ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಬಾಡುತ್ತಿದ್ದ ಬೆಳೆಗಳು ನಳನಳಿಸುತ್ತಿವೆ. ರಾಗಿ, ಜೋಳದ ಬೆಳೆಗೆ ಬೇಕಾದ ರಸಗೊಬ್ಬರಗಳಿಗೆ ಬೇಡಿಕೆಯೂ ಹೆಚ್ಚಾದೆ. ಆದರೆ, ಇದನ್ನೇ ಬಂಡವಾಳ ಮಾಡಿಕೊಂಡ ಕೆಲ ರಸಗೊಬ್ಬರ ಅಂಗಡಿಗಳು, ಡೀಲರ್ ಶಿಪ್ ಪಡೆದ ಕಂಪನಿಗಳು ರೈತರ ಸುಲಿಗೆಗೆ ಇಳಿದಿವೆ ಎನ್ನಲಾಗಿದೆ.

ತಾಲೂಕಿನ ಕಾಡನೂರು ಗ್ರಾಮದಲ್ಲಿರುವ ಕ್ರಿಯಾಜೆನ್ ಕಂಪನಿಯ ಕಿಸಾನ್ ವರ್ಲ್ಡ್ ಔಟ್ ಲೆಟ್ ನಲ್ಲಿ 20-20-20 (ಎನ್ ಪಿಕೆ) ಖರೀದಿಸಿದರಷ್ಟೇ ಯೂರಿಯಾ ನೀಡುವುದಾಗಿ ಹೇಳಿ ರೈತರನ್ನು ವಂಚಿಸಲಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿದ ರೈತ ಚೇತನ್ ರೈತರ ಒಂದು ಎಕರೆ ಬೆಳೆಗೆ ಒಂದು ಮೂಟೆ ರಸಗೊಬ್ಬರ ( ಯೂರಿಯಾ ) ಬೇಕು ಆದರೆ, ರೈತರ ಆಧಾರ್ ಕಾರ್ಡ್ ಕೊಟ್ಟರೆ ಒಂದು ಮೂಟೆ ಕೊಡ್ತಿದಾರೆ, ಅದರ ಜೊತೆ 20-20-20 ಎಸ್ಪಿಕೆ ಕೊಂಡರೆ ಎರಡು ಮೂಟೆ ರಸಗೊಬ್ಬರ ಕೊಡುತ್ತಿದ್ದಾರೆ. ನಮಗೆ ಎಸ್ಪಿಕೆ ಬೇಕಾಗಿಲ್ಲ, ಎಸ್ಪಿಕೆ ಮಾರಾಟ ಮಾಡಲು ಬಲವಂತದಿಂದ ನಮಗೆ ಎಸ್ಪಿಕೆ ಕೊಂಡುಕೊಳ್ಳಲು ಈ ರೀತಿಯ ದೌರ್ಜನ್ಯ ನಡೆಸುತ್ತಿದ್ದಾರೆ ಎಂದು ಆರೋಪಿಸಿದರು.

ಸರ್ಕಾರಿ ಗೋದಾಮುಗಳಲ್ಲಿ ಇಲ್ಲದ ಯೂರಿಯಾ ಇಲ್ಲಿ ಮಾತ್ರ ಹೇಗೆ ಸಿಗುತ್ತಿದೆ ಎಂದು ಪ್ರಶ್ನಿಸಿದ ಅವರು, ಯೂರಿಯಾ ಬೆಲೆ 295 ರೂಪಾಯಿ ಇದೆ. ಆದರೆ ಇಲ್ಲಿ ಒಂದು ಚೀಲ ಯೂರಿಯಾಗೆ 310 ರೂ.ಪಡೆಯಲಾಗುತ್ತಿದೆ. ಸಾಲದೆಂಬಂತೆ ಎನ್ ಪಿಕೆ(20-20-20) ಖರೀದಿಸಿದರೆ ಮಾತ್ರ ಯೂರಿಯಾ ನೀಡುತ್ತೇವೆ. ಇಲ್ಲವಾದರೆ ಯಾವುದನ್ನೂ ಕೊಡುವುದಿಲ್ಲ ಎಂದು ಹೇಳಿ ರೈತರನ್ನು ಹೆದರಿಸುತ್ತಿದ್ದಾರೆ, ಎಂದು ಮತ್ತೊಬ್ಬ ರೈತ ತಮ್ಮ ಅಳಲು ತೋಡಿಕೊಂಡರು.

ಸೋಮವಾರ ಬೆಳಿಗ್ಗೆ ಯೂರಿಯಾ ಖರೀದಿಗೆ ಸುಮಾರು 100ಕ್ಕೂ ಹೆಚ್ಚು ಮಂದಿ ಕ್ರಿಯಾಜೆನ್ ಮಾರಾಟ ಮಳಿಗೆಗೆ ಧಾವಿಸಿದಾಗ ಕಂಪೆನಿಯ ಸಿಬ್ಬಂದಿ ಈ ರೀತಿ ಹೇಳುತ್ತಿರುವುದಾಗಿ ರೈತರು ಆರೋಪಿಸಿದ್ದಾರೆ.

Ramesh Babu

Journalist

Recent Posts

ಸ್ಪರ್ಧಾತ್ಮಕ ಜಗತ್ತಿಗೆ ಮಕ್ಕಳನ್ನು ಅಣಿಗೊಳಿಸಿ- ರಾಜ್ಯ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ವಿಜೇತ ನೀಲಕಂಠ ಗವಾಂಕರ್ ಸಲಹೆ

ಜಗತ್ತು ದಿನದಿಂದ ದಿನಕ್ಕೆ ವೇಗವಾಗಿ ಬದಲಾಗುತ್ತಿದ್ದು, ಹೆಚ್ಚುತ್ತಿರುವ ಸ್ಪರ್ಧೆಯನ್ನು ಎದುರಿಸುವ ಸಾಮರ್ಥ್ಯವನ್ನು ಮಕ್ಕಳಲ್ಲಿ ಬೆಳೆಸಲು ಪೋಷಕರು ಹಾಗೂ ಶಿಕ್ಷಕರು ಒಟ್ಟಾಗಿ…

9 hours ago

ಭಾರತೀಯರ ಆಹಾರ ವೈವಿಧ್ಯತೆ…. ರುಚಿ – ತೃಪ್ತಿ – ಸಮಾನತೆ…..

ಭಾರತೀಯರ ಆಹಾರ ವೈವಿಧ್ಯತೆ..... ರುಚಿ - ತೃಪ್ತಿ - ಸಮಾನತೆ..... ಅಡುಗೆ ಅನುಭವದ ಮೂಸೆಯೊಳಗೆ ಬೆಳೆದು ಬರುವ ವಿಜ್ಞಾನವೆಂಬ ಕಲೆ....…

19 hours ago

ಎಲೆಕ್ಟ್ರಾನಿಕ್ ಜಕಾರ್ಡ್ ಖರೀದಿ ಯೋಜನೆ: ಸಹಾಯಧನಕ್ಕಾಗಿ ಅರ್ಜಿ ಆಹ್ವಾನ

2026-27 ಸಾಲಿಗೆ ಕೈಮಗ್ಗ ಮತ್ತು ಜವಳಿ ಇಲಾಖೆ ವತಿಯಿಂದ ಎಲೆಕ್ಟ್ರಾನಿಕ್ ಜಕಾರ್ಡ್ ಖರೀದಿ ಯೋಜನೆಯಡಿ ಸಹಾಯಧನಕ್ಕಾಗಿ ಅರ್ಹ ಫಲಾನುಭವಿಗಳಿಂದ ಅರ್ಜಿಗಳನ್ನ…

1 day ago

ಕೊಡಿಪಾಳ್ಯ ಬಳಿ ಕ್ಯಾಂಟರ್ ಪಲ್ಟಿ: ತಪ್ಪಿದ ಭಾರೀ ಅನಾಹುತ

ದೊಡ್ಡಬಳ್ಳಾಪುರ: ನೆಲಮಂಗಲ–ದೊಡ್ಡಬಳ್ಳಾಪುರ ಮುಖ್ಯ ರಸ್ತೆಯ ಕೊಡಿಪಾಳ್ಯ ಸಮೀಪ ಕ್ಯಾಂಟರ್‌ವೊಂದು ಪಲ್ಟಿಯಾಗಿ ಬಿದ್ದ ಘಟನೆ ನಡೆದಿದ್ದು, ಅದೃಷ್ಟವಶಾತ್ ಭಾರೀ ಅನಾಹುತ ತಪ್ಪಿದೆ.…

1 day ago

ಮೊಬೈಲ್ ಕಳೆದುಹೋದರೆ ಗಾಬರಿ ಬೇಡ: ತಕ್ಷಣದ ಕ್ರಮವೇ ರಕ್ಷಣೆ: ಮೊಬೈಲ್‌ ಕಳೆದುಹೋದ 10 ನಿಮಿಷಗಳಲ್ಲಿ ಮಾಡಬೇಕಾದ 7 ಕೆಲಸಗಳು ಇಲ್ಲಿವೆ ನೋಡಿ…

ಬೆಂಗಳೂರು ಗ್ರಾಮಾಂತರ: ಮೊಬೈಲ್‌ ಫೋನ್‌ ಕಳೆದುಹೋಗುವುದು ಅಥವಾ ಕಳ್ಳತನವಾಗುವುದು ಇಂದಿನ ಡಿಜಿಟಲ್‌ ಯುಗದಲ್ಲಿ ಆತಂಕದ ಸಂಗತಿಯಾಗಿದೆ. ಮೊಬೈಲ್‌ ಕೇವಲ ಸಂಪರ್ಕ…

1 day ago

ಎಸ್ಐಆರ್ ಅಕ್ರಮ ಹಾಗೂ ಬರ ಪರಿಹಾರ ವಿಳಂಬ: ಕೇಂದ್ರ ಮತ್ತು ವಿಪಕ್ಷದ ವಿರುದ್ಧ ಸಚಿವ ಚಲುವರಾಯಸ್ವಾಮಿ ಆಕ್ರೋಶ

ವಿರೋಧ ಪಕ್ಷದ ನಾಯಕನಾಗಿ ಜವಾಬ್ದಾರಿಯಿಂದ ನಡೆದುಕೊಳ್ಳಬೇಕು. ಅದನ್ನು ಬಿಟ್ಟು ಎಸ್‌ಐಆರ್‌ನಲ್ಲಿ ನಡೆದಿರುವ ಅಕ್ರಮಗಳ ಪರ ಮಾತನಾಡುವವರಿಗೆ ಯಾವ ಮರ್ಯಾದೆ ಇದೆ…

2 days ago