ರಣ ರೋಚಕ ಪಂದ್ಯದಲ್ಲಿ ಗೆದ್ದು ಬೀಗಿದ ಆರ್ ಸಿ ಬಿ

ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಸಿ ಎಸ್ ಕೆ ವಿರುದ್ಧದ ಪಂದ್ಯದಲ್ಲಿ ಆರ್ ಸಿ ಬಿ ಯು ಎರಡು ರನ್ ಗಳಿಂದ ಗೆಲ್ಲುವ ಮೂಲಕ ಅಂಕ ಪಟ್ಟಿಯಲ್ಲಿ ಅಗ್ರ ಸ್ಥಾನವನ್ನು ಅಲಂಕರಿಸಿದೆ.

ಟಾಸ್ ಸೋತು ಮೊದಲು ಬ್ಯಾಟಿಂಗ್ ಆರಂಭಿಸಿದ ಆರ್ ಸಿ ಬಿ ತಂಡ ಉತ್ತಮ ಆರಂಭ ಪಡೆಯುವಲ್ಲಿ ಯಶಸ್ವಿಯಾಯಿತು. ಸ್ಫೋಟಕ ಆರಂಭಿಕ ಫಿಲ್ ಸಾಲ್ಟ್ ರ ಅನುಪಸ್ಥಿತಿಯಲ್ಲಿ ಬಂದ ಜಾಕೋಬ್ ಬೇತಲ್(55) ತಮ್ಮ ಚೊಚ್ಚಲ ಐ ಪಿ ಎಲ್ ಅರ್ಧ ಶತಕ ಸಿಡಿಸಿದರು. ಹಾಗು ವಿರಾಟ್ ಕೋಹ್ಲಿ (62) ಕೂಡ 5 ಫೋರ್ ಹಾಗೂ 5 ಸಿಕ್ಸರ್ ಗಳನ್ನು ಸಿಡಿಸುವ ಮೂಲಕ ಈ ಆವೃತ್ತಿಯ 7 ನೇ ಅರ್ಧಶತಕ ಗಳಿಸಿ ಔಟಾದರು.
ಕೊನೆಯ ಎರಡು ಓವರ್ ಗಳಲ್ಲಿ ಅಬ್ಬರಿಸಿದ ವೆಸ್ಟ್ ಇಂಡೀಸ್ ನ ದೈತ್ಯ ರೋಮೆರಿಯೋ ಶೆಪರ್ಡ್(53*) ಕೇವಲ 14 ಎಸೆತಗಳಲ್ಲಿ 4 ಬೌಂಡರಿ 6 ಸಿಕ್ಸರ್ ಸಿಡಿಸುವ ಮೂಲಕ ಆಕರ್ಷಕ ಅರ್ಧ ಶತಕದಿಂದ ತಂಡದ ಮೊತ್ತವನ್ನು 200 ರ ಗಡಿಯನ್ನು ತಲುಪಲು ಸಹಕರಿಸಿದರು.

ಈ ಮೂಲಕ ಆರ್ ಸಿ ಬಿ 20 ಓವರ್ ಗಳ ಅಂತ್ಯಕ್ಕೆ 213 ರನ್ ಗಳ ಬೃಹತ್ ಮೊತ್ತವನ್ನು ಕಲೆ ಹಾಕಿತು. ಸಿ ಎಸ್ ಕೆ ಪರ ಮತೀಶ ಪತಿರಾಣ 3 ವಿಕೆಟ್ ಪಡೆದರು.

214 ರನ್ ಗಳ ಬೃಹತ್ ಮೊತ್ತವನ್ನು ಬೆನ್ನಟ್ಟಿದ ಚೆನ್ನೈ ತಂಡಕ್ಕೆ ಉತ್ತಮ ಆರಂಭ ಸಿಕ್ಕಿತು. ಯುವ ಬ್ಯಾಟರ್ ಆಯುಷ್ ಮಾತ್ರೆ(94) ತಮ್ಮ ಅತ್ಯುತ್ತಮ ಬ್ಯಾಟಿಂಗ್ ಶೈಲಿಯಿಂದ ಆರ್ ಸಿ ಬಿ ಬೌಲರ್ ಗಳ ಬೆವರಿಳಿಸಿ ಚೊಚ್ಚಲ ಅರ್ಧ ಶತಕ ಗಳಿಸಿದರು. ಇವರ ಜೊತೆಗೆ ಜಡೇಜಾ(77) ಕೂಡ ಉತ್ತಮ ಸಾಥ್ ನೀಡಿದರು. ಆದರೆ ಕೊನೆಯ 3 ಓವರ್ ಗಳಲ್ಲಿ ಅತ್ಯುತ್ತಮ ಬೌಲಿಂಗ್ ಪ್ರದರ್ಶನ ನೀಡಿದ ಆರ್ ಸಿ ಬಿ ಬೌಲರ್ ಗಳು ಪಂದ್ಯವನ್ನು ತಮ್ಮೆಡೆಗೆ ಸೆಳೆದುಕೊಂಡರು. ಅರ್ ಸಿ ಬಿ ಪರ ಪಾದಾರ್ಪಣೆ ಪಂದ್ಯವನ್ನು ಆಡಿದ ಲುಂಗಿ ಎನ್ ಗಿಡಿ 3 ವಿಕೆಟ್ ಪಡೆದು ಮಿಂಚಿದರು.

Leave a Reply

Your email address will not be published. Required fields are marked *