
ದೊಡ್ಡಬಳ್ಳಾಪುರ: ನಗರದ ಕೋಟೆ ರಸ್ತೆಯಲ್ಲಿರುವ ಕಿಲ್ಲಾ ಮಸೀದಿಯಲ್ಲಿ ಮೊಹರಂ ಅಂಗವಾಗಿ ಹಸೇನ್ ಹುಸೇನ್ ಆಚರಣೆ ಭಾನುವಾರ ಶ್ರದ್ಧಾಭಕ್ತಿಗಳಿಂದ ನಡೆಯಿತು.
ದೊಡ್ಡಬಳ್ಳಾಪುರದಲ್ಲಿ ಭಾನುವಾರ ಶಿಯಾಮುಸ್ಲಿಮರು ಬ್ಲೇಡು ಮತ್ತಿತರೆ ಹರಿತ ಆಯುಧಗಳಿಂದ ಎದೆ ಚಚ್ಚಿಕೊಳ್ಳುವ ಮೂಲಕ ರಕ್ತಸಿಕ್ತ ದೇಹವನ್ನು ಹುಸೇನ್ ದೇವರಿಗೆ ಅರ್ಪಿಸಿದರು.

ಧರ್ಮಗುರುಗಳು ನೇತೃತ್ವದಲ್ಲಿ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಿದರು.
ಮೊಹರಂ ನಂತರದ 7 ದಿನಕ್ಕೆ ನಡೆಯಲಿರುವ ಈ ಆಚರಣೆಯಲ್ಲಿ ದೇಶದ ವಿವಿಧ ಭಾಗಗಳಿಂದ ಆಗಮಿಸಿದ್ದ ಸಹಸ್ರಾರು ಜನ ಶಿಯಾಮುಸ್ಲಿಮರು ಬ್ಲೇಡು, ಕತ್ತಿ ಮೊದಲಾದ ಹರಿತ ಆಯುಧಗಳಿಂದ ಎದೆ ಚಚ್ಚಿಕೊಳ್ಳುವ ಮೂಲಕ ರಕ್ತಸಿಕ್ತ ದೇಹವನ್ನು ಹುಸೇನ್ ದೇವರಿಗೆ ಅರ್ಪಿಸಿದರು.

ನಗರದ ಕೋಟೆ ರಸ್ತೆಯಲ್ಲಿರುವ ಕಿಲ್ಲಾ ಮಸೀದಿಯಲ್ಲಿ ಅಂಜುಮನ್ ಎ ಹೈದರಿಯ ಸಂಘಟನೆ ನೇತೃತ್ವದಲ್ಲಿ ಮತ್ತು ಹುಸೇನ್ ಕಮಿಟಿ ಸಹಕಾರದಲ್ಲಿ ಮೊಹರಂ ನಡೆಸಲಾಗುತ್ತದೆ.
ಇಮಾಮ್ ಹುಸೇನ್ ತ್ಯಾಗ ಬಲಿದಾನಗಳನ್ನು ಇಂದು ಸ್ಮರಿಸಲಾಗುತ್ತದೆ. ದಕ್ಷಿಣ ಭಾರತದಲ್ಲಿಯೇ ದೊಡ್ಡಬಳ್ಳಾಪುರ ಈ ಆಚರಣೆ ನಡೆಯುವ ಪ್ರಮುಖ ಸ್ಥಳವಾಗಿದ್ದು, ಇದನ್ನು ಸುಮಾರು 268 ವರ್ಷಗಳಿಂದ ಆಚರಿಸುತ್ತಾ ಬರಲಾಗುತ್ತಿದೆ.

ಇಮಾಮ್ ಹುಸೇನ್ ತ್ಯಾಗ ಬಲಿದಾನವನ್ನು ಇಂದು ಸ್ಮರಿಸಲಾಗುತ್ತದೆ. ಕರ್ನಾಟಕದಲ್ಲಿ ಈ ಆಚರಣೆ ನಡೆಯುವ ಪ್ರಮುಖ ಸ್ಥಳ ದೊಡ್ಡಬಳ್ಳಾಪುರವಾಗಿದೆ. ದೇಶದ ವಿವಿಧ ಮೂಲೆಗಳಿಂದ ಹಾಗೂ ವಿದೇಶಗಳಿಂದಲೂ ಸುಮಾರು 2 ಸಾವಿರಕ್ಕೂ ಹೆಚ್ಚು ಶಿಯಾ ಮುಸ್ಲಿಂ ಸಮುದಾಯದವರು ಆಗಮಿಸಿ ರಕ್ತಸಿಕ್ತ ದೇಹವನ್ನು ಹುಸೇನ್ ದೇವರಿಗೆ ಅರ್ಪಿಸಿ ಹರಕೆ ತೀರಿಸಿದರು.
ಯಾವುದೇ ಅಹಿತಕರ ಘಟನೆ ನಡೆಯದಂತೆ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು.