ರಂಗಭೂಮಿ ಕಲಾವಿದ ಆರ್.ವಿ.ಮಂಜುನಾಥ್ ಅವರನ್ನ ಕಲಾವಿದರ ವಿಭಾಗದಲ್ಲಿ ಜಿಲ್ಲಾ ಮಟ್ಟದ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
ನ.1ರಂದು ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ ವತಿಯಿಂದ ನಡೆಯಲಿರುವ 68ನೇ ಜಿಲ್ಲಾಮಟ್ಟದ ಕನ್ನಡ ರಾಜ್ಯೋತ್ಸವದ ಕಾರ್ಯಕ್ರಮದಲ್ಲಿ ರಾಜ್ಯೋತ್ಸವ ಪ್ರಶಸ್ತಿ ವಿತರಣೆ ಮಾಡಲಾಗುವುದು ಎಂದು ಮಾಹಿತಿ ಒದಗಿಬಂದಿದೆ.
ಆರ್.ವಿ.ಮಂಜುನಾಥ್ ಅವರು ರಂಗಭೂಮಿ ಕಲಾವಿದ ಜೊತೆಗೆ ರಾಜ್ಯ ಕಂದಾಯ ಇಲಾಖೆಯ ಗ್ರಾಮ ಸಹಾಯಕ ಸಂಘದ ರಾಜ್ಯ ಉಪಾಧ್ಯಕ್ಷರು ಸಹ ಆಗಿದ್ದಾರೆ.
ಸುಮಾರು 15 ವರ್ಷಗಳಿಂದ ರಂಗಭೂಮಿ ಕಲಾ ಸೇವೆ ಮಾಡುತ್ತಿದ್ದು, ಸಂಪೂರ್ಣ ರಾಮಾಯಣ ನಾಟಕದ ಭರತನದ ಪಾತ್ರಧಾರಿಯಾಗಿ ಗಮನ ಸೆಳೆದು, ಜನ ಮೆಚ್ಚುಗೆ ಪಡೆದಿದ್ದಾರೆ. ಸುಮಾರು 20ಕ್ಕೂ ಹೆಚ್ಚು ಭಾರಿ ಭರತನ ಪಾತ್ರದಲ್ಲಿ ಅಭಿನಯಿಸಿದ್ದಾರೆ, ಕುರುಕ್ಷೇತ್ರ ನಾಟಕದ ಬಲರಾಮ, ಕರ್ಣ, ವಿಧುರ, ಸತ್ಯಕಿ ಪಾತ್ರಗಳಲ್ಲಿ ಅಭಿನಯಿಸಿ ಪೇಕ್ಷಕರ ಮನದಲ್ಲಿ ನೆಲೆಸಿದ್ದಾರೆ, ಕೆಲವು ಸಾಮಾಜಿಕ ನಾಟಕಗಳಲ್ಲಿಯೂ ಅಭಿನಯಿಸಿದ್ದಾರೆ.