ಬಾಬಾ ಜಮೀರ್ ಖಾನ್ ರವರು ಕಳೆದ 7 ವರ್ಷಗಳಿಂದ ಬಟ್ಟೆ ವ್ಯಾಪಾರ ಮಾಡುತ್ತಿರುತ್ತಾರೆ. ಇಷ್ಟೂ ದಿನ ಬಟ್ಟೆಗಳನ್ನು ವ್ಯಾಪಾರ ಮಾಡಲು ಬೆಂಗಳೂರಿನ ಚಿಕ್ಕಪೇಟೆಯಲ್ಲಿ ತರಿಸಿಕೊಳ್ಳುತ್ತಿದ್ದರು.
ಹೀಗೆ ಒಂದು ದಿನ ಯೂಟ್ಯೂಬ್ ನೋಡುತ್ತಿದಾಗ, ಕಡಿಮೆ ಬೆಲೆಗೆ ಬಟ್ಟೆಗಳನ್ನು ಮಾರಾಟ ಮಾಡುತ್ತೇವೆ ಎಂದು ವಿಡಿಯೋ ಮಾಡಿ ಯೂಟ್ಯೂಬ್ ನಲ್ಲಿ ದೆಹಲಿ ಮೂಲದ ವ್ಯಕ್ತಿಯೊಬ್ಬರು ಅಪ್ ಲೋಡ್ ಮಾಡಿದ್ದ ವಿಡಿಯೋ ಇವರ ಕಣ್ಣಿಗೆ ಬೀಳುತ್ತದೆ.
ವಿಡಿಯೋ ನೋಡಿದ ಕೂಡಲೇ ದೆಹಲಿಯಿಂದ ಕಡಿಮೆ ಬೆಲೆಗೆ ಬಟ್ಟೆಗಳನ್ನು ತರಿಸಿಕೊಳ್ಳಲು ತೀರ್ಮಾನ ಮಾಡುತ್ತಾರೆ.
ಆ ಯೂಟ್ಯೂಬ್ ಚಾನಲ್ ನಲ್ಲಿ ಅಪ್ ಲೋಡ್ ಮಾಡಿದ್ದ ವಿಡಿಯೋದಲ್ಲಿ ಕೆಲ ಮೊಬೈಲ್ ನಂಬರ್ ಗಳು ಹಾಗೂ ವಿಳಾಸವನ್ನು ಹಾಕಿದ್ದರು. ವಿಡಿಯೋದಲ್ಲಿದ್ದ ಫೋನ್ ನಂಬರ್ ಗೆ ಮಾರ್ಚ್ ತಿಂಗಳಲ್ಲಿ ಫೋನ್ ಮಾಡಿ ನೈಟ್ ಪ್ಯಾಂಟ್ ಗಳು ಬೇಕು, ಒಂದು ನೈಟ್ ಪ್ಯಾಂಟ್ ಬೆಲೆ ಎಷ್ಟು ಎಂದು ಫೋನ್ ಮಾಡಿ ವಿಚಾರಿಸುತ್ತಾರೆ. ಆಗ ಅವರು ಒಂದು ನೈಟ್ ಪ್ಯಾಂಟ್ ಬೆಲೆ 160 ಎಂದು ಹೇಳುತ್ತಾರೆ.
ಇದನ್ನು ಕೇಳಿದ ತಕ್ಷಣ ಇವರ ಬಳಿ ಕಡಿಮೆ ಬೆಲೆಗೆ ಬಟ್ಟೆಗಳು ಸಿಗುತ್ತದೆ ಎಂದು ಯೋಚಿಸಿ, 54ಸಾವಿರು ರೂ. ಮೌಲ್ಯದ ನೈಟ್ ಪ್ಯಾಂಟ್ ಗಳು ಬೇಕು ಎಂದು ಕೇಳುತ್ತಾರೆ. ಆಗ ಅವರು ಫೋನ್ ಪೇ ನಂಬರ್ ಕೊಡುತ್ತೇವೆ ಆ ನಂಬರ್ ಗೆ ಹಣ ಹಾಕಿ ಎಂದು ತಿಳಿಸುತ್ತಾರೆ. ಅಂದು ಅಷ್ಟು ಹಣ ಇಲ್ಲದ ಕಾರಣ ಆ ದಿನ ಫೋನ್ ಪೇ ಮಾಡಿರುವುದಿಲ್ಲ. ಮಾ.18 ರಂದು 51 ಸಾವಿರ ರೂ. ಫೋನ್ ಪೇ ಮಾಡುತ್ತಾರೆ.
ಫೋನ್ ಪೇ ಮಾಡಿದ 10ದಿನಗಳಲ್ಲಿ ನೈಟ್ ಪ್ಯಾಂಟ್ ಗಳನ್ನು ಕಳುಹಿಸುತ್ತೇವೆ ಎಂದು ತಿಳಿಸಿದ್ದರು, ಆದರೆ 10 ದಿನಗಳು ಕಳೆದರೂ ನೈಟ್ ಪ್ಯಾಂಟ್ ಗಳು ಕೊರಿಯರ್ ಮೂಲಕ ಬಂದಿರುವುದಿಲ್ಲ. ತಡವಾದ ಹಿನ್ನೆಲೆ ಮತ್ತೆ ಫೋನ್ ಮಾಡಿ ಕೇಳಿದಾಗ, ಅವರು ಇವತ್ತು ಬರುತ್ತೆ ನಾಳೆ ಬರುತ್ತೆ ಎಂದು ಹೇಳಿ ವಂಚನೆ ಮಾಡುತ್ತಿದ್ದರು.
ದೆಹಲಿ ಮೂಲದ ವ್ಯಕ್ತಿ ಮೋಸ ಮಾಡಿದ್ದಾರೆ ಎಂದು ದೊಡ್ಡಬಳ್ಳಾಪುರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಭಾರತೀಯರ ಆಹಾರ ವೈವಿಧ್ಯತೆ..... ರುಚಿ - ತೃಪ್ತಿ - ಸಮಾನತೆ..... ಅಡುಗೆ ಅನುಭವದ ಮೂಸೆಯೊಳಗೆ ಬೆಳೆದು ಬರುವ ವಿಜ್ಞಾನವೆಂಬ ಕಲೆ....…
2026-27 ಸಾಲಿಗೆ ಕೈಮಗ್ಗ ಮತ್ತು ಜವಳಿ ಇಲಾಖೆ ವತಿಯಿಂದ ಎಲೆಕ್ಟ್ರಾನಿಕ್ ಜಕಾರ್ಡ್ ಖರೀದಿ ಯೋಜನೆಯಡಿ ಸಹಾಯಧನಕ್ಕಾಗಿ ಅರ್ಹ ಫಲಾನುಭವಿಗಳಿಂದ ಅರ್ಜಿಗಳನ್ನ…
ದೊಡ್ಡಬಳ್ಳಾಪುರ: ನೆಲಮಂಗಲ–ದೊಡ್ಡಬಳ್ಳಾಪುರ ಮುಖ್ಯ ರಸ್ತೆಯ ಕೊಡಿಪಾಳ್ಯ ಸಮೀಪ ಕ್ಯಾಂಟರ್‌ವೊಂದು ಪಲ್ಟಿಯಾಗಿ ಬಿದ್ದ ಘಟನೆ ನಡೆದಿದ್ದು, ಅದೃಷ್ಟವಶಾತ್ ಭಾರೀ ಅನಾಹುತ ತಪ್ಪಿದೆ.…
ಬೆಂಗಳೂರು ಗ್ರಾಮಾಂತರ: ಮೊಬೈಲ್ ಫೋನ್ ಕಳೆದುಹೋಗುವುದು ಅಥವಾ ಕಳ್ಳತನವಾಗುವುದು ಇಂದಿನ ಡಿಜಿಟಲ್ ಯುಗದಲ್ಲಿ ಆತಂಕದ ಸಂಗತಿಯಾಗಿದೆ. ಮೊಬೈಲ್ ಕೇವಲ ಸಂಪರ್ಕ…
ವಿರೋಧ ಪಕ್ಷದ ನಾಯಕನಾಗಿ ಜವಾಬ್ದಾರಿಯಿಂದ ನಡೆದುಕೊಳ್ಳಬೇಕು. ಅದನ್ನು ಬಿಟ್ಟು ಎಸ್‌ಐಆರ್‌ನಲ್ಲಿ ನಡೆದಿರುವ ಅಕ್ರಮಗಳ ಪರ ಮಾತನಾಡುವವರಿಗೆ ಯಾವ ಮರ್ಯಾದೆ ಇದೆ…
ರಾಜ್ಯದಲ್ಲಿ ಬರ ಪರಿಸ್ಥಿತಿಯಿಂದ ಉಂಟಾಗಿರುವ ಬೆಳೆ ನಷ್ಟದ ಅಂದಾಜು 50 ರಿಂದ 60 ಸಾವಿರ ಕೋಟಿವರೆಗೆ ತಲುಪುವ ಸಾಧ್ಯತೆಯಿದ್ದು, ಕೇಂದ್ರ…