ಯೂಟ್ಯೂಬರ್ ತನ್ನ ಚಾನೆಲ್‌ನಲ್ಲಿ “ಸಾಂಪ್ರದಾಯಿಕ ನವಿಲು ಕರಿ ರೆಸಿಪಿ” ಎಂಬ ಶೀರ್ಷಿಕೆಯ ವಿವಾದಾತ್ಮಕ ವೀಡಿಯೊವನ್ನು ಪೋಸ್ಟ್ ಮಾಡಿದ ನಂತರ ಸಾರ್ವಜನಿಕ ವಲಯದಲ್ಲಿ ಆಕ್ರೋಶವನ್ನು ವ್ಯಕ್ತವಾಗುತ್ತಿದೆ.
ಸಿರ್ಸಿಲ್ಲಾದ ತಂಗಲ್ಲಪಲ್ಲಿಯ ಕೋಡಂ ಪ್ರಣಯ್‌ಕುಮಾರ್ ಎಂಬ ಯೂಟ್ಯೂಬರ್ ಸಾಂಪ್ರದಾಯಿಕ ನವಿಲು ಕರಿ ರೆಸಿಪಿಯನ್ನು ಅಪ್‌ಲೋಡ್ ಮಾಡಿದ್ದಾನೆ.
ಭಾರತದ ರಾಷ್ಟ್ರೀಯ ಪಕ್ಷಿಯಾದ ನವಿಲಿನ ಅಕ್ರಮ ಹತ್ಯೆಯನ್ನು ಪ್ರಚಾರ ಮಾಡಿದ್ದಕ್ಕಾಗಿ ವ್ಯಾಪಕ ಟೀಕೆಗೆ ಗುರಿಯಾಗಿದೆ.
ಶನಿವಾರದಂದು ಪೋಸ್ಟ್ ಮಾಡಲಾದ ವೀಡಿಯೊ, ಸಾಂಪ್ರದಾಯಿಕ ವಿಧಾನಗಳನ್ನು ಬಳಸಿಕೊಂಡು ನವಿಲು ಕರಿ ಬೇಯಿಸುವುದು ಹೇಗೆ ಎಂದು ತೋರಿಸುತ್ತದೆ.
ಪ್ರಣಯ್‌ಕುಮಾರ್ ಅವರ ಚಾನೆಲ್ ಹೆಚ್ಚಿನ ಪರಿಶೀಲನೆಯಲ್ಲಿದೆ. ಅವರು ಮತ್ತೊಂದು ವಿವಾದಾತ್ಮಕ ಕಾನೂನುಬಾಹಿರ ಚಟುವಟಿಕೆಯಾದ ಕಾಡು ಹಂದಿ ಕರಿ ಅಡುಗೆ ಮಾಡುವ ವೀಡಿಯೊವನ್ನು ಪೋಸ್ಟ್ ಮಾಡಿದ್ದಾರೆ ಎಂದು ತಿಳಿದುಬಂದಿದೆ.
ಸದ್ಯ ವೀಡಿಯೊವನ್ನು ಅಳಿಸಲಾಗಿದೆಯಾದರೂ, ಪ್ರಾಣಿ ಹಕ್ಕುಗಳ ಕಾರ್ಯಕರ್ತರು ಮತ್ತು ಸಂಬಂಧಪಟ್ಟ ನಾಗರಿಕರು ಪೊಲೀಸ್ ಮತ್ತು ಅರಣ್ಯ ಅಧಿಕಾರಿಗಳ ತನಿಖೆಗೆ ಕರೆ ನೀಡಿದ್ದಾರೆ.