
ದೇವನಹಳ್ಳಿ: ನೂತನವಾಗಿ ಆಯ್ಕೆಯಾದ ಬಿಜೆಪಿ ದೇವನಹಳ್ಳಿ ಮಂಡಲ ಅಧ್ಯಕ್ಷರಾದ ನಿಲೇರಿ ಅಂಬರೀಶ್ ಗೌಡ ಅವರನ್ನು ಬಿಜೆಪಿ ತಾಲೂಕು ಯುವ ಘಟಕದ ವತಿಯಿಂದ ದೇವನಹಳ್ಳಿ ಪ್ರವಾಸಿಮಂದಿರದಲ್ಲಿ ಅಭಿನಂದಿಸಿದರು.
ಈ ವೇಳೆಯಲ್ಲಿ ನೂತನ ದೇವನಹಳ್ಳಿ ಮಂಡಲ ಅಧ್ಯಕ್ಷರಾದ ನಿಲೇರಿ ಅಂಬರೀಶ್ ಗೌಡ ಮಾತನಾಡಿ ನನ್ನ ಕರ್ತವ್ಯ ನಿಭಾಯಿಸಲು ಪಕ್ಷದ ಪ್ರತಿಯೊಬ್ಬ ಕಾರ್ಯಕರ್ತರೂ ಮತ್ತು ಮುಖಂಡರೂ ಹೆಚ್ಚಿನ ಪ್ರೋತ್ಸಾಹ ನೀಡುತ್ತಾರೆಂಬ ವಿಶ್ವಾಸವಿದೆ. ನಾನು ಪಕ್ಷದಲ್ಲಿ ಅನೇಕ ವರ್ಷಗಳಿಂದ ನಿಷ್ಠಾವಂತ ಕಾರ್ಯಕರ್ತನಾಗಿ ಕೆಲಸ ನಿರ್ವಹಿಸುತ್ತಿದ್ದೇನೆ ಪಕ್ಷ ನನ್ನನ್ನು ಗುರುತಿಸಿ ನೀಡಿದ ಜವಬ್ದಾರಿಯನ್ನು ನಿಬಾಯಿಸುತ್ತೇನೆ. ಮುಂಬರುವ ಚುನಾವಣೆಗಳಲ್ಲಿ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸುವ ವಿಶ್ವಾಸವಿದೆ. ಯುವ ಘಟಕ ಸದಾ ನಮ್ಮ ಪಕ್ಷದ ಬೆನ್ನೆಲುಬಾಗಿ ಕೆಲಸ ನಿರ್ವಹಿಸುತ್ತಿದೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಬಿಜೆಪಿ ಪಕ್ಷದ ಮುಖಂಡರಾದ ದೇ.ಸು.ನಾಗಾರಾಜ್, ಸುರೇಶಾಚಾರ್, ಸುನೀಲ್, ವಿಜಯ ರಾಘವೇಂದ್ರ,ಯುವ ಘಟಕದ ಪದಾಧಿಕಾರಿಗಳು ಮುಂತಾದವರು ಇದ್ದರು.